7ನೇ ತರಗತಿ ಹುಡ್ಗಿ ಬರೆದ ಕಾದಂಬರಿ ಲೋಕಾರ್ಪಣೆ

Youngest Indian Novelist Harshita Magdum
ಬೆಂಗಳೂರು, ನ.14: ನಗರದ ಅರಮನೆ ಮೈದಾನದಲ್ಲಿ ನಡೆದಿರುವ ಬೆಂಗಳೂರು ಪುಸ್ತಕ ಮೇಳದಲ್ಲಿ ಇಂದು ಮಕ್ಕಳ ದಿನಾಚರಣೆ ಸಂಭ್ರಮ. ಬಹುಶಃ ಭಾರತದ ಅತ್ಯಂತ ಕಿರಿಯ ಕಾದಂಬರಿದಬರಿಗಾರ್ತಿ ಎಂಬ ಕೀರ್ತಿಗೆ ಬೆಂಗಳೂರಿನ ವಿದ್ಯಾರ್ಥಿ ಪಾತ್ರವಾದ ದಿನ ಕೂಡಾ ಆಗಿರುವುದು ವಿಶೇಷ. ಏಳನೇ ತರಗತಿಯ ಹುಡುಗಿ ಹರ್ಷಿತಾ ಅವರ ಆಂಗ್ಲ ಕಾದಂಬರಿಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು.

ಯಲಹಂಕದ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಓಡುತ್ತಿರುವ ಹರ್ಷಿಕಾ ಮಗ್ದಮ್ ಗೆ ಕಾದಂಬರಿ ಬರೆಯುವುದೆಂದರೆ ಎಲ್ಲಿಲ್ಲದ ಉತ್ಸಾಹ. ರೂಬಿ ರಷ್ ಎಂಬ ಹೆಸರಿನ 110ಪುಟಗಳ ರೋಚಕ ಕಾದಂಬರಿ ಬರೆದ ಆಕೆಗೆ ವೈಜ್ಞಾನಿಕ ಕಥನಗಳಲ್ಲಿ ಆಸಕ್ತಿ. ರೂಬಿ ರಷ್ ಕಥಾನಕ ನಡೆಯುವುದು ದೂರದ ಇಂಗ್ಲೆಂಡ್ ನಲ್ಲಿ, ಆದರೆ, ಹರ್ಷಿಕಾ ಇನ್ನೂ ಇಂಗ್ಲೆಂಡ್ ನಲ್ಲಿ ಕಾಲಿರಿಸಿಲ್ಲ ಎಂಬುದು ವಿಶೇಷ.

ಕಳೆದು ಹೋದ ವಸ್ತುವೊಂದರ ಹುಡುಕಾಟ ನಡೆಸುವ ಕಥೆ ಬರೆಯಲು ಹರ್ಷಿಕಾ, ಸುಮಾರು ಒಂದು ವರ್ಷ ತೆಗೆದುಕೊಂಡಿದ್ದಾರೆ. ಮಕ್ಕಳ ದಿನಾಚರಣೆ ದಿನ ಪುಸ್ತಕ ಅನಾವರಣಗೊಳ್ಳುತ್ತಿರುವುದಕ್ಕೆ ಹರ್ಷಿಕಾ ಹರ್ಷ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ, "ವ್ಯಾಂಪೈರ್ "ಹೆಸರಿನ 300 ಪುಟಗಳ ಹೊಸ ಕಾದಂಬರಿಯನ್ನು ಹರ್ಷಿಕಾ ಬರೆಯತೊಡಗಿದ್ದಾರೆ.

ಪುಸ್ತಕ ಮೇಳ: ನವೆಂಬರ್ 12ರಿಂದ 21ರವರೆಗೆ ಪುಸ್ತಕ ಮೇಳ ನಡೆಯಲಿದ್ದು, ಸಾರ್ವಜನಿಕರಿಗೆ ಬೆಳಗ್ಗೆ 11 ಗಂಟೆ ಇಂದ ರಾತ್ರಿ 9 ಗಂಟೆವರೆಗೂ ಪ್ರವೇಶವಿರುತ್ತದೆ. ಶಾಲಾ, ಕಾಲೇಜು ವಿದ್ಯಾರ್ಥಿ/ನಿಯರಿಗೆ ಪ್ರವೇಶ ಉಚಿತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+