ಮುಖಪುಟ ವಿನ್ಯಾಸಕ್ಕೆ 5ಸಾವಿರ ಬಹುಮಾನ
ಹೊಸಬಗೆಯ ಪುಸ್ತಕ ಮುಖಪುಟಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಛಂದಪುಸ್ತಕವು 'ಛಂದ ಮುಖಪುಟ ವಿನ್ಯಾಸ" ಸ್ಪರ್ಧೆ ಏರ್ಪಡಿಸಿದೆ. ಇದೇ ಡಿಸೆಂಬರ್ ನಲ್ಲಿ ಛಂದ ಪುಸ್ತಕ ಪ್ರಕಟಿಸಲಿರುವ ವಸುಧೇಂದ್ರರ 'ಹಂಪಿ ಎಕ್ಸ್‌ಪ್ರೆಸ್" ಕಥಾಸಂಕಲನಕ್ಕೆ ನೀವು ಮುಖಪುಟ ರಚಿಸಬಹುದು.
ಆಯ್ಕೆಗೊಂಡ ಒಂದು ವಿನ್ಯಾಸಕ್ಕೆ 5000 ರೂ ಬಹುಮಾನ ನೀಡಲಾಗುವುದು. ಪುಸ್ತಕದ ವಸ್ತು ಬಳ್ಳಾರಿ ಹಾಗೂ ಬೆಂಗಳೂರಿನ ಪರಿಸರದಲ್ಲಿ ನಡೆಯುವ ಜೀವನಪ್ರೀತಿಯ ಕತೆಗಳು. ಮುಖಪುಟ ವಿನ್ಯಾಸದ ಅಳತೆ: ಎತ್ತರ 22.5 ಸೆಮೀ, ಅಗಲ 14.5 ಸೆಮೀ. ಒಬ್ಬರು ಎಷ್ಟು ಬೇಕಾದರೂ ವಿನ್ಯಾಸಗಳನ್ನು ಕಳಿಸಬಹುದು.
ನಿಮ್ಮ ವಿನ್ಯಾಸಗಳನ್ನು [email protected] ಗೆ ಇ ಮೇಲ್ ಮಾಡಿ. ಕಡೆಯ ದಿನಾಂಕ: ಅಕ್ಟೋಬರ್ 20. ವಿವರಗಳಿಗೆ ಸಂಪರ್ಕಿಸಿ: 98444 22782 ನೋಡಿ : http://raghuapara.blogspot.com
25ನೇ ಸೆಪ್ಟೆಂಬರ್ 2008
ಛಂದಪುಸ್ತಕದ ಪರವಾಗಿ:
ವಸುಧೇಂದ್ರ
I-004, ಮಂತ್ರಿ ಪ್ಯಾರಡೈಸ್
ಬನ್ನೇರುಘಟ್ಟ ರಸ್ತೆ
ಬೆಂಗಳೂರು - 560 076
ದೂರವಾಣಿ: 98444 22782












Click it and Unblock the Notifications