ಸಹೃದಯಗಳಿಗೆ ಅಖ್ತರ್ ‘ತರ್ಕಶ್’ನ ಪುಷ್ಪಾಂಬುಗಳು
*ದಟ್ಸ್‌ಕನ್ನಡ ಬ್ಯೂರೋ
ಇವತ್ತು ಸಮಾಜ ಹಾಗೂ ಪ್ರಜಾಪ್ರಭುತ್ವ ಕವಲು ದಾರಿಯಲ್ಲಿದೆ. ಸತ್ಯ, ನ್ಯಾಯ, ಮಾನವೀಯತೆ ಬಗ್ಗೆ ಕಾಳಜಿ ಇರುವ ಸೃಜನಶೀಲ ಹೃದಯಗಳು ಎಚ್ಚೆತ್ತುಕೊಳ್ಳಬೇಕಿದೆ. .. ಚಿತ್ರ ಸಾಹಿತಿಯಾಗೇ ಹೆಸರು ಮಾಡಿರುವ ಕವಿ ಜಾವೆದ್ ಅಖ್ತರ್ ಮಾತುಗಳಲ್ಲಿ ತುಂಬು ಕಳಕಳಿ ಇತ್ತು.
ಸಹೃದಯಿ ಬೆಂಗಳೂರಿಗರ ಪಾಲಿಗೆ ಭಾನುವಾರ (ಫೆ.02) ಅಕ್ಷರಶಃ ಕವಿ ವಾರ. ಎ.ಡಿ.ಎ ರಂಗಮಂದಿರದಲ್ಲಿ ಅಖ್ತರ್ ಅವರ ಗಜಲ್‌ಗಳ ಸಂಕಲನ ‘ತರ್ಕಶ್’ನ ಕನ್ನಡಾನುವಾದ ‘ಬತ್ತಳಿಕೆ’ಯ ಬಿಡುಗಡೆ ಸಮಾರಂಭ ಅದು. ಅಂದಹಾಗೆ, ಈ ಅನುವಾದದ ಕೆಲಸ ಮಾಡಿರುವುದು ಮುಂಬಯಿಯಲ್ಲಿರುವ ಭರವಸೆಯ ಕನ್ನಡ ಕವಯಿತ್ರಿ ಹಾ.ಮ.ಕನಕ.
ನಮ್ಮ ಪೀಳಿಗೆಯ ಅಪ್ಪ- ಅಮ್ಮಂದಿರು ಅಥವಾ ಪೋಷಕರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದವರು. ಅವರು ನಮಗಾಗಿ ಒಂದು ಸಂಸ್ಕೃತಿಯನ್ನು ಬಿಟ್ಟು ಹೋದರು. ನಾವು ಮುಂದಿನ ಪೀಳಿಗೆಗೆ ಅದನ್ನು ಕೊಡುವುದು ಸಾಧ್ಯವಿಲ್ಲ. ಗೊಂದಲ, ಇಚ್ಛಾ ಶಕ್ತಿಯ ಕೊರತೆ, ಅದಕ್ಷತೆಗಳೇ ಕುಣಿದಾಡುತ್ತಿರುವ ಈ ಹೊತ್ತಲ್ಲಿ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವ ಜವಾಬ್ದಾರಿ ಸೃಜನಶೀಲ ಮಂದಿಯ ಮೇಲಿದೆ ಎಂದು ಜಾವೆದ್ ಅಖ್ತರ್ ಅಭಿಪ್ರಾಯಪಟ್ಟರು.
ಒಂದು ಶೀಷೆಯ ಸುಗಂಧ ದ್ರವ್ಯವನ್ನು ಇನ್ನೊಂದಕ್ಕೆ ಹಾಕುವುದೇ ಅನುವಾದ. ಈ ಕ್ರಿಯೆಯಲ್ಲಿ ದ್ರವ್ಯದ ಮೂಲ ಸುಗಂಧ ಕಳೆದುಹೋಗುವ ಅಪಾಯವೂ ಇರುತ್ತದೆ. ಆದರೆ ‘ತರ್ಕಶ್’ ಅನುವಾದದಲ್ಲಿ ಹಾಗೆ ಆಗಿಲ್ಲ. ಭಾಷೆ ಸಂಪರ್ಕ ಸೇತುವೆಯಾಗಬೇಕು. ಆದರಿಂದು ಅದೇ ಗೋಡೆಯಾಗಿರುವುದು ವಿಪರ್ಯಾಸ. ಇಂತಾ ಹೊತ್ತಲ್ಲಿ ಸಂಪರ್ಕಕ್ಕೆ ಅನುವಾದವೇ ಕಿಟಕಿಯಾಗುತ್ತದೆ ಎಂದು ಅಖ್ತರ್ ತಮ್ಮದೇ ಆದ ಶೈಲಿಯಲ್ಲಿ ಹೇಳಿದರು.
ಜಾವೆದ್ ಅಖ್ತರ್ ಏಳು ಗಜಲ್‌ಗಳನ್ನು ವಾಚಿಸಿದರು. ಇವೇ ಗಜಲುಗಳ ಕನ್ನಡ ಅನುವಾದವನ್ನು ಖುದ್ದು ಹಾ.ಮಾ.ಕನಕ ವಾಚಿಸಿದರು. ಸಮಾರಂಭದ ವಿಶೇಷ ಸೆಳಕು ಇದಾಗಿತ್ತು.
ಖಾಸಗಿಯಾಗಿ ಬರೆಯುತ್ತಲೇ ನಮ್ಮೆಲ್ಲರ ಬಗ್ಗೆ ಬರೆಯುವವರು ಜಾವೆದ್ ಅಖ್ತರ್. ಈ ಪುಸ್ತಕ ಕನ್ನಡಕ್ಕೆ ಬರದಿದ್ದರೆ ಒಂದು ಕೊರತೆ ಉಳಿಯುತ್ತಿತ್ತು . ಮುಸ್ಲಿಮರ ಕೈಯಲ್ಲಿ ಬಯ್ಯಿಸಿಕೊಳ್ಳುತ್ತಾ ಹಿಂದೂಗಳ ಅನುಮಾನಕ್ಕೆ ಯಾರು ಗುರಿಯಾಗುತ್ತಾರೋ ಅಂಥವರೇ ಇವತ್ತಿನ ಹೀರೋಗಳು. ಜಾವೆದ್ ಅಖ್ತರ್ ಕೂಡ ಅಂಥವರಲ್ಲಿ ಒಬ್ಬರು. ಅವರು ತಮ್ಮ ಮಾನವೀಯ ಮೌಲ್ಯಗಳ ಪ್ರತಿಪಾದನೆಯಿಂದ ಗೆಲ್ಲುತ್ತಾರೆ. ಎಂದು ‘ಬತ್ತಳಿಕೆ’ ಬಿಡುಗಡೆ ಮಾಡಿದ ಡಾ। ಯು.ಆರ್.ಅನಂತ ಮೂರ್ತಿ ಅಭಿಪ್ರಾಯಪಟ್ಟರು.
ಕಳೆದ ಹತ್ತು ವರ್ಷಗಳಲ್ಲಿ ಮಹಿಳಾ ಸಾಹಿತಿಗಳ ಕೆಲಸ ಸಾಕಷ್ಟು ಗಮನ ಸೆಳೆಯುವಂತಿದೆ. ಅಖ್ತರ್ ಅವರ ಚಿಂತನೆಗಳಿಗೆ ಕಿಂಚಿತ್ತೂ ಚ್ಯುತಿ ಬರದಂತೆ ಒಂದೊಂದು ಪದವನ್ನೂ ಹಾ.ಮ.ಕನಕ ಶ್ರದ್ಧೆಯಿಂದ ಅನುವಾದಿಸಿದ್ದಾರೆ ಎಂದು ಅನಂತಮೂರ್ತಿ ಶ್ಲಾಘಿಸಿದರು.
ಅಪ್ಪಟ ಮಾನವೀಯ ತುಡಿತದ ಸಂವೇದನೆಯಿರುವ ಅಖ್ತರ್ ಮಾತು ಮೌನದೊಂದಿಗೆ ಇರಬೇಕು ಎಂಬುದನ್ನು ಪ್ರತಿಪಾದಿಸಿದವರು. ಜಾವೆದ್ ಅಖ್ತರ್ ಅವರ ಸಂವೇದನಾಶೀಲತೆಗೆ ಸಾಕ್ಷಿಯಾಗಿ ‘ಜಂಜೀರ್’, ‘ದೀವಾರ್’, ‘ಶೋಲೆ’ ಚಿತ್ರಗಳ ಸಂಭಾಷಣೆ ಹಾಗೂ ಗೀತೆಗಳೇ ಇವೆ. ಹಿಂದಿಯ ನುಡಿಗಟ್ಟು ಹಾಗೂ ಕನ್ನಡದ ಅವಶ್ಯಕತೆ- ಎರಡನ್ನೂ ಚೆನ್ನಾಗಿ ಬಲ್ಲ ಹಾ.ಮ.ಕನಕ ‘ತರ್ಕಶ್’ನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದು ಕತೆಗಾರ ಜಯಂತ ಕಾಯ್ಕಿಣಿ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು.
ಅನುವಾದಿತ ಕವಿತೆಗಳನ್ನು ಕುರಿತು ಕವಯಿತ್ರಿ ಪ್ರತಿಭಾ ನಂದಕುಮಾರ್ ಮಾತಾಡಿದರು.
ಅಖ್ತರ್ ಅವರ ಒಂದು ಗಜಲಿನ ಕನ್ನಡ ಅನುವಾದ ಹೀಗಿದೆ-
‘ಈ ಪಟ್ಟಣ ಭಯಗೊಂಡ ಮಗುವಂತೆ
ತನ್ನ ನೆರಳಿಗೆ ತಾನೇ ಬೆಚ್ಚುತ್ತಿದೆ;
ಪಂಚಾಂಗ ನೋಡು
ಇಂದೇನೋ ಹಬ್ಬವಿರಬೇಕು..’
ಅಖ್ತರ್ ಪ್ರತಿಭೆಯ ಬಗ್ಗೆ ನೀವೇನಂತೀರಿ?
ಮುಖಪುಟ / ಸಾಹಿತ್ಯ ಸೊಗಡು-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications