ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ವಿಶೇಷ ಲೇಖನ

ಭಾರತದಲ್ಲಿ ಹೆಣ್ಣುಮಕ್ಕಳು ಎಷ್ಟು ಸುರಕ್ಷಿತವಾಗಿದ್ದಾರೆ? ಗಂಡು ಹೆಣ್ಣನ್ನು ಸಮಾನವಾಗಿ ಕಾಣಬೇಕು ಎಂದು ಭಾಷಣ ಬಿಗಿಯುವ ನಾವು ಹೆಣ್ಣುಮಕ್ಕಳಿಗೆ ಗಂಡುಮಕ್ಕಳಷ್ಟೇ ಪ್ರಾಶಸ್ತ್ಯವನ್ನು ಕೊಡುತ್ತಿದ್ದೇವಾ? ಹೊರಗಡೆ ಹೋಗಲಿ, ಮನೆಯಲ್ಲಾದರೂ ಗಂಡುಹೆಣ್ಣಿನ ನಡುವೆ ತಾರತಮ್ಯ ತೋರದೆ ಸಮಾನತೆ ತೋರುತ್ತಿದ್ದೇವಾ? ಈ ಏರುಪೇರನ್ನು ಸರಿಪಡಿಸಬೇಕಾದರೆ ಪಾಲಕರ ಜವಾಬ್ದಾರಿ ಎಷ್ಟು? ರಾಷ್ಟ್ರೀಯ ಹೆಣ್ಣುಮಕ್ಕಳ ದಿನವಾದ ಜ.24ರಂದು ಈ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಬೇಕಾಗಿದೆ.

ಪ್ರತಿಯೊಬ್ಬ ಮಹಿಳೆಯಲ್ಲಿಯೂ ಶಕ್ತಿ ಮತ್ತು ಲಾವಣ್ಯ, ಧೈರ್ಯ ಮತ್ತು ಕರುಣೆ, ಸಮೃದ್ಧಿ ಮತ್ತು ಮೌಲ್ಯಗಳು, ಜ್ಞಾನ ಮತ್ತು ದೂರದೃಷ್ಟಿಗಳ ಸರಿಯಾದ ಸಮ್ಮಿಶ್ರಣವಿದೆ. ಅವಳೊಳಗೆ ಅತ್ಯಂತ ಗಹನವಾದ ಸಾಮಾಜಿಕ ಪರಿವರ್ತನೆಯ ಸಾಮರ್ಥ್ಯ ಬೀಜರೂಪದಲ್ಲಿದೆ. ಆದರೆ, ಸರಿಯಾದ ಶಿಕ್ಷಣ, ಪೌಷ್ಟಿಕತೆ ಮತ್ತು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸ್ವಾಸ್ಥ್ಯದ ಮೂಲಕ ಈ ಬೀಜವನ್ನು ಪೋಷಿಸಿ ಬೆಳೆಸಬೇಕು.

ಭಾರತೀಯ ಪರಂಪರೆಯು ಪ್ರಾಚೀನ ಕಾಲದಿಂದಲೂ ಪುರುಷರು ಮತ್ತು ಮಹಿಳೆಯರನ್ನು ಜೀವನದ ಎಲ್ಲ ಅಂಶಗಳಲ್ಲೂ ಸಮಾನವಾಗಿ ಗೌರವಿಸುತ್ತದೆ. ದಿವ್ಯತೆಯನ್ನು ಅರ್ಧ ಪುರುಷ ಹಾಗೂ ಅರ್ಧ ಸ್ತ್ರೀಯಾಗಿ ವರ್ಣಿಸಿರುವ ಅರ್ಧನಾರೀಶ್ವರನ ಕಲ್ಪನೆಯ ಮೂಲಕ ಈ ಸಮಾನತೆಯನ್ನು ಅಭಿವ್ಯಕ್ತಿಗೊಳಿಸಲಾಗಿದೆ. ಸೃಷ್ಟಿಯ ರಕ್ಷಣೆ ಮತ್ತು ಪೋಷಣೆಯಲ್ಲಿ ಇವರಿಬ್ಬರೂ ಸಮಾನ ಪಾಲುದಾರರು ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. [ಟೆಕ್ ಲೋಕದ ಲಿಂಗ ತಾರತಮ್ಯ ಬಯಲು]

Is girl child in India happy and independent

ನಮ್ಮ ದೇಹದಲ್ಲಿ ಕೋಶದ ಮಟ್ಟದಲ್ಲಿಯೂ ಸಹ ಪ್ರತಿಯೊಬ್ಬರಲ್ಲಿಯೂ ತಂದೆ ಹಾಗೂ ತಾಯಿಯರಿಬ್ಬರ ವಂಶವಾಹಿಗಳು ಇರುತ್ತವೆ. ಆರೋಗ್ಯಕರ, ಪ್ರಗತಿಪರ ಸಮಾಜಕ್ಕಾಗಿ ನಾವು ಸ್ತ್ರೀಯರನ್ನು ಗೌರವಿಸಿ ಅವರು ವಹಿಸುವ ಪಾತ್ರವನ್ನು ಆದರಿಸಬೇಕು. ಸ್ತ್ರೀಯರನ್ನು ದೇವಿಯೆಂದು ಪೂಜಿಸುವ ನಮ್ಮ ದೇಶವು ಸ್ತ್ರೀ ಭ್ರೂಣ ಹತ್ಯೆ, ಶಿಕ್ಷಣದ ಅಭಾವ ಮತ್ತು ಸ್ತ್ರೀ ದೌರ್ಜನ್ಯದ ಸವಾಲುಗಳನ್ನು ಎದುರಿಸುತ್ತಿರುವುದು ದುರದೃಷ್ಟಕರ.

ಇಂದು ಜಗತ್ತಿನಾದ್ಯಂತ ಅತ್ಯಂತ ಹೀನವಾದ ಹೆಣ್ಣು ಮಕ್ಕಳ ಮರಣ ಪ್ರಮಾಣವನ್ನು ಹೊಂದಿರುವ ದೇಶಗಳಲ್ಲಿ ಭಾರತವು ಸೇರಿಕೊಂಡಿದೆ. ಹೆಣ್ಣು ಮಕ್ಕಳ ಆರೋಗ್ಯದ ನಿರ್ಲಕ್ಷ್ಯವೇ ಇದಕ್ಕೆ ನೇರವಾದ ಕಾರಣ. ಒಂದು ಹೆಣ್ಣು ಮಗುವು ಅಸ್ವಸ್ಥವಾದಾಗ ಅವಳನ್ನು ವೈದ್ಯರ ಬಳಿ ಕರೆದೊಯ್ಯಲು ಜನ ಬಹಳ ಕಾಯಿಸುತ್ತಾರೆ. ಸ್ತ್ರೀ ಭ್ರೂಣ ಹತ್ಯೆಯನ್ನು ತಪ್ಪಿಸಿಕೊಂಡರೂ ಅವಳು ಪೌಷ್ಟಿಕತೆ ಹಾಗೂ ರೋಗನಿರೋಧತೆಯಲ್ಲಿ ಗಂಡು ಮಕ್ಕಳಿಗಿಂತಲೂ ಕೆಳಗಿನ ಮಟ್ಟದಲ್ಲಿರುವುದನ್ನು ಹಲವು ಅಂಕಿ ಅಂಶಗಳು ತೋರಿಸುತ್ತವೆ. ಸಣ್ಣ ಮಕ್ಕಳ ಲೈಂಗಿಕ ಕಿರುಕುಳವು ವಿವರಿಸಲಾಗದಂತಹ ಭೀತಿಯಾದರೂ ನಾವು ಎದುರಿಸಬೇಕಾಗಿರುವ ವಾಸ್ತವ.

ಶೇ.50ಕ್ಕೂ ಹೆಚ್ಚು ಮಹಿಳೆಯರಲ್ಲಿ ಶಿಕ್ಷಣದ ಅಭಾವವು ಇನ್ನೊಂದು ಬಹುದೊಡ್ಡ ಸವಾಲು. ಈ ಎಲ್ಲ ಸಮಸ್ಯೆಗಳನ್ನು ಕೇವಲ ಮಹಿಳಾ ಹಕ್ಕುಗಳ ಸಮಸ್ಯೆಗಳನ್ನಾಗಿ ಕಾಣಬಾರದು. ಮಹಿಳೆಯರಲ್ಲಿ ಗೌರವ ಹಾಗೂ ಸುರಕ್ಷತೆಯ ಭಾವನೆಯಿಲ್ಲದಿದ್ದಲ್ಲಿ ಸಮಾಜದ ರಚನೆಯೇ ಹರಿದು ಹೋದಂತೆ. ಇದು ಮಾನವ ಹಕ್ಕುಗಳ ಸಮಸ್ಯೆ ಮತ್ತು ಪುರುಷರು ಹಾಗೂ ಮಹಿಳೆಯರಿಬ್ಬರೂ ಅನ್ಯಾಯದ ವಿರುದ್ಧ ಒಟ್ಟಿಗೆ ಎದ್ದು ನಿಂತು ಪರಿಹಾರಗಳನ್ನು ಕಂಡುಹಿಡಿಯಬೇಕು. [ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?]

Is girl child in India happy and independent

ಹೆಣ್ಣು ಮಗುವಿನ ಶಿಕ್ಷಣದ ಹಕ್ಕು ಹಾಗೂ ಸಂತೋಷದ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು. ಇಂದು ಸಾಮಾಜಿಕ ಮೌಲ್ಯಗಳು ಕ್ಷೀಣಿಸುತ್ತಿರುವುದಕ್ಕೆ ಕಾರಣ ಮಹಿಳೆಯರನ್ನು ಗೌರವಿಸದಿರುವುದು. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ತಾರತಮ್ಯವಿದೆ. ಈ ದೃಷ್ಟಿಕೋನವು ಬದಲಾಗಬೇಕು. ಮಹಿಳೆಯರ ದನಿಯು ಕೇಳುವಂತಾಗಬೇಕು. ಈ ಸಮಸ್ಯೆಯ ಬಗ್ಗೆ ನಾವು ನಿರಾತಂಕವನ್ನು ತಾಳುವಂತಿಲ್ಲ. ಸಕ್ರಿಯವಾದ ಮನೋಭಾವದ ಅವಶ್ಯಕತೆಯಿದೆ. ಮಹಿಳೆಯರನ್ನು ಗೌರವದಿಂದ ಕಾಣದಿದ್ದಾಗ ಅದು ಇಡೀ ಮಾನವತೆಯ ಮೇಲೆ ಪರಿಣಾಮ ಬೀರುತ್ತದೆ.

ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ ಎಲ್ಲ ಪಾತ್ರಗಳಲ್ಲಿಯೂ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಮಹಿಳೆಯರದ್ದು. ಅವರು ಈ ಜವಾಬ್ದಾರಿಯನ್ನು ನಿಭಾಯಿಸಬೇಕಾದರೆ ಅವರಿಗೆ ಸರಿಯಾದ ಮೌಲ್ಯಾಧಾರಿತವಾದ ಸಮಗ್ರ ಶಿಕ್ಷಣವನ್ನು ಸರಿಯಾದ ಸಮಯಕ್ಕೆ ಕೊಡಿಸಬೇಕು. ನಕಾರಾತ್ಮಕ ಭಾವನೆಗಳನ್ನು ಹಾಗೂ ಒತ್ತಡವನ್ನು ನಿಭಾಯಿಸುವುದನ್ನು ಅವರಿಗೆ ಕಲಿಸಬೇಕು. ಮನೆಯಲ್ಲಿ ತಾಯಿಯು ಒತ್ತಡದಲ್ಲಿದ್ದರೆ, ಅದು ಇಡೀ ಮನೆ ಹಾಗೂ ಅವಳ ಮಕ್ಕಳ ಮೇಲೆ ಪರಿಣಾಮವನ್ನು ಬೀರುತ್ತದೆ. ಅವಳು ಆತ್ಮವಿಶ್ವಾಸದಿಂದ ಕೂಡಿದ್ದು ವಿಶಾಲವಾದ ದೃಷ್ಟಿಕೋನವನ್ನು ಹೊಂದಿದ್ದರೆ ಈ ಸದ್ಗುಣಗಳನ್ನು ತನ್ನ ಮಕ್ಕಳಿಗೆ ಸಹಜವಾಗಿ ಸಾಗಿಸಬಹುದು.

ಒಬ್ಬ ಪುರುಷನು ಒಳ್ಳೆಯವನಾಗಿದ್ದರೆ ಅದು ಅವನ ತಾಯಿಯ ಸಂಸ್ಕಾರವೆಂಬ ಮಾತಿದೆ. ಮಹಿಳೆಯು ಮೌಲ್ಯಗಳನ್ನು ಮೈಗೂಡಿಸಬಹುದು. ಇದೀಗ ಸರಿಯಾದ ಸಮಯ. ನಾವು ಸಮಾಜದ ಬೇರಿನಿಂದ ತುದಿಯವರೆಗೂ ಮಾನವೀಯ ಮೌಲ್ಯಗಳನ್ನು ಮತ್ತು ಸಕಾರಾತ್ಮಕವಾದ ಗುಣಗಳನ್ನು ನೆಲೆಗೊಳಿಸಬೇಕು. ನಾವು ನಮ್ಮ ಮಕ್ಕಳಿಗೆ ಸುಮ್ಮನೆ ಹೀಗೆ ಮಾಡಬೇಡ ಎಂದು ಹೇಳುವ ಬದಲು ಅವರಿಗೆ ಪರಿಹಾರಗಳನ್ನು ಮತ್ತು ಸರಿಯಾದ ದಿಕ್ಕನ್ನು ತೋರಬೇಕು.

ಕಳೆದ ಕೆಲವು ತಿಂಗಳುಗಳಲ್ಲಿ ಮಾಧ್ಯಮವು ಹಲವು ಘಟನೆಗಳ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿ ಪರಿಹಾರಗಳನ್ನು ಕಂಡುಕೊಳ್ಳಲು ಎಚ್ಚರಿಸಿದೆ. ನಾವು ಭೂತಕಾಲವನ್ನು ಬದಲಾಯಿಸಲಾಗುವುದಿಲ್ಲ. ಆದರೆ ಅದರಿಂದ ಕಲಿಕೆಯನ್ನು ಅರಿತು ಮುಂದೆ ಇಂತಹ ಘೋರ ಅಪರಾಧಗಳನ್ನು ನಿವಾರಿಸಲು ಸಕಾರಾತ್ಮಕವಾದ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದಕ್ಕೆ ಅಧ್ಯಾತ್ಮವೇ ಸ್ಪಷ್ಟವಾದ ಪರಿಹಾರ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಇದು ಆಧಾರ. ನಾವೆಲ್ಲರೂ ಮುಂದೆ ಬಂದು ಮೂಲ ಆಧ್ಯಾತ್ಮಿಕ ಮೌಲ್ಯಗಳಾದ ಸಹಬಾಳ್ವೆ, ಬಾಂಧವ್ಯ ಹಾಗೂ ಸೇವೆಗಾಗಿ ಬದ್ಧತೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಈ ಮೌಲ್ಯಗಳೇ ಆರೋಗ್ಯಕರ, ಸಂತೋಷಕರ ಹಾಗೂ ಸಮರಸವಾದ ಸಮಾಜದ ಆಧಾರ. ನಮ್ಮ ಹೆಣ್ಣು ಮಕ್ಕಳು ಸ್ವತಂತ್ರವಾಗಿ ಮತ್ತು ಸಂತೋಷವಾಗಿರಬೇಕಾದರೆ ಈಗ ಇದು ಅತ್ಯವಶ್ಯಕ.

(ಲೇಖಕರು ಅಂತಾರಾಷ್ಟ್ರೀಯ ಮಹಿಳಾ ಅಧಿವೇಶನದ ಸಭಾಧ್ಯಕ್ಷೆ ಹಾಗೂ ಆರ್ಟ್ ಆಫ್ ಲಿವಿಂಗ್ ಮಹಿಳಾ ಮತ್ತು ಶಿಶು ಕಲ್ಯಾಣ ಕಾರ್ಯಕ್ರಮಗಳ ನಿರ್ದೇಶಕರು.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+