ಬಂಡೀಪುರದಲ್ಲಿ 'ಪ್ರಿನ್ಸ್' ಹುಲಿ ಕಂಡಾಗ ಕುಪ್ಪಳಿಸಿದ ಮನ

By: ಎಚ್.ಎಸ್.ವಿನಯ್
Subscribe to Oneindia Kannada

ಪಟ್ಟೆ ಹುಲಿ, ಬಲು ಕೆಟ್ಟ ಹುಲಿ ಕಾಡಲಿ ಒಂದಿತ್ತು.. ಬೆಟ್ಟದ ಹೂವು ಸಿನಿಮಾದ ಈ ಹಾಡು ನನ್ನ ಬದುಕಿನ ಗುರಿ, ಉದ್ದೇಶ, ಆಸಕ್ತಿಯನ್ನೇ ಬದಲಿಸಿತು. ಸಣ್ಣ ವಯಸ್ಸಿನಲ್ಲಿ ನೋಡಿ, ಕೇಳಿದ ಹಾಡು ನೆನಪಾಗಿ ಆಗಾಗ ನಾನು ಬೆಚ್ಚುತ್ತಿದ್ದೆ. ಅದಾದ ಮೇಲೆ ಆ ಹುಲಿ ಏನು ಮಾಡ್ತಿರಬಹುದು. ಪಾಪ, ಈಗ ಕಣ್ಣು ಬೇರೆ ಕಾಣ್ತಿರಲ್ಲ ಅನ್ನಿಸ್ತಿತ್ತು.

ತೀರಾ ಇತ್ತೀಚೆಗೆ ಬಂಡೀಪುರದ ಕಾಡಲ್ಲಿ ಹುಲಿ ನೋಡುವ ತನಕ ಆ ಹಾಡಿನ ಗುಂಗು ಎಂಥೆಂಥ ಉಪಕಾರ ಮಾಡಿದೆ ಗೊತ್ತಾ? ಕಾಡಿನ ಪ್ರಾಣಿಗಳ ಬಗ್ಗೆ ಕುತೂಹಲ ಬೆಳೆಸಿತು, ಲಕ್ಷ ರುಪಾಯಿ ಕೊಟ್ಟು ಕ್ಯಾಮೆರಾ ತಗೊಂಡೆ, ಸುಧೀರ್ ಶಿವರಾಮಕೃಷ್ಣನ್, ಲೋಕೇಶ್ ಮೊಸಳೆ ಅಂಥವರ ಹತ್ತಿರ ಫೋಟೋಗ್ರಫಿ ಕ್ಲಾಸ್ ಗಳಿಗೆ ಹೋದೆ, ಕಾಡುಗಳನ್ನು ಸುತ್ತಾಡಿದೆ. ಈ ಎಲ್ಲಕ್ಕೂ ಅರ್ಥ ಸಿಕ್ಕ ಹಾಗೆ ಕುಣಿದು ಕುಪ್ಪಳಿಸುವಂತಾಗಿದ್ದು ಮಾತ್ರ ಬಂಡೀಪುರದ 'ಪ್ರಿನ್ಸ್' ಕಂಡಾಗ.[ಬಂಡೀಪುರದಲ್ಲಿ ಹುಲಿ ಹತ್ಯೆ: ಒಬ್ಬನ ಬಂಧನ]

ತುಮಕೂರು ಜಿಲ್ಲೆ ಹೆಬ್ಬೂರಿನವರಾದ ಎಚ್.ಎಸ್. ವಿನಯ್ ಅವರು ಇತ್ತೀಚೆಗೆ ಬಂಡೀಪುರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಹುಲಿಯನ್ನು ಕಂಡ ಅವರು ತಮ್ಮ ಅನುಭವವನ್ನು ಕಣ್ಣಿಗೆ ಕಟ್ಟುವಂತೆ ಹಂಚಿಕೊಂಡಿದ್ದಾರೆ.

"ಆ ಹುಲಿಯನ್ನು ನೋಡಿದ ಕ್ಷಣದಿಂದ ಮಾತಾಡ್ತಾ ಇದೀನಿ, ಇದೀನಿ.. ಖುಷಿಗೆ ಅದೆಷ್ಟು ಚೆಂದದ ಪದಗಳು ಸಿಗ್ತಿವೆಯೋ. ಅದೇ ಹುಕಿಯಲ್ಲಿ ಇದೂ ಒಂದು ಆಗಿಹೋಗಲಿ. ನನ್ನ ಅನುಭವವನ್ನ ನಿಮಗೂ ಹೇಳಿಬಿಡೋಣ ಅನ್ನಿಸಿದ್ದಕ್ಕೆ ನೀವಿದನ್ನು ನೋಡ್ತಿದೀರಿ, ಓದ್ತಿದೀರಿ.

"ಈ ಪ್ರಯಾಣ ಶುರುವಾಗಿದ್ದು ಫೇಸ್ ಬುಕ್ ಮೂಲಕ. ಆ.27,28ನೇ ತಾರೀಕು 'ಜಂಗಲ್ ಡೈರಿ'ನವರು ಫೋಟೋಗ್ರಫಿ ಪ್ಯಾಕೇಜ್ ಟೂರ್ ಕಂಡಕ್ಟ್ ಮಾಡಿದ್ದರು. ಅದ್ಯಾಕೋ ಇಷ್ಟವಾಗಿ ಅದರ ಮುಖ್ಯಸ್ಥರು ಗಗನ್ ಜತೆ ಮಾತನಾಡಿ, ನಾನೊಂದು ಸೀಟ್ ಬುಕ್ ಮಾಡಿಸಿದೆ. ಜತೆಗೆ ಸ್ನೇಹಿತರೂ ಇರಲಿ ಅನ್ನೋ ಕಾರಣಕ್ಕೆ ಗೆಳೆಯರಾದ ಸುಬ್ರಹ್ಮಣ್ಯ, ಲೋಕೇಶ್ ಅವರನ್ನೂ ಒಪ್ಪಿಸಿದ್ದಾಯಿತು.[ಭಾರತ ಅತಿ ಪ್ರೀತಿಯ ಹುಲಿ 'ಮಚ್ಲಿ' ಇನ್ಮುಂದೆ ಘರ್ಜಿಸಲ್ಲ]

"ಹೊರಡೋದಿಕ್ಕೆ ಇನ್ನೂ ಒಂದು ವಾರ ಇದೆ ಅನ್ನೋವಾಗಲೇ 'ಬಂಡೀಪುರ ಅಡ್ವೆಂಚರ್ಸ್' ಅನ್ನೋ ವಾಟ್ಸ್ ಅಪ್ ಗ್ರೂಪ್ ಮಾಡಿದ ಆ ಸಂಸ್ಥೆಯವರು ಪ್ರತಿ ದಿನವೂ ಸಫಾರಿಗಳಲ್ಲಿ ಕಾಣಿಸುತ್ತಿರುವ ಪ್ರಾಣಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ನಾವು ಉಳಿದುಕೊಳ್ಳೋದಿಕೆ ಬಂಡೀಪುರದ ಡಾರ್ಮಿಟರಿಯಲ್ಲೇ ವ್ಯವಸ್ಥೆ ಮಾಡಿದ್ದರು.'

(ಲೇಖಕರ ಬಗ್ಗೆ: ತುಮಕೂರು ಜಿಲ್ಲೆ ಹೆಬ್ಬೂರಿನವರಾದ ಎಚ್.ಎಸ್.ವಿನಯ್ ಕಂಪ್ಯೂಟರ್ ಡಿಪ್ಲೊಮಾ ಮಾಡಿದ್ದಾರೆ. ಫೋಟೋಗ್ರಫಿ ಅವರ ಆಸಕ್ತಿ, ವನ್ಯಜೀವಿಗಳ ಬಗ್ಗೆ ಅವರಿಗೆ ಪ್ರೀತಿ. ಇತ್ತೀಚೆಗೆ ಬಂಡಿಪುರದಲ್ಲಿ ಹುಲಿ, ಕಾಟಿ ಮತ್ತಿತರ ಪ್ರಾಣಿ-ಪಕ್ಷಿಗಳನ್ನು ನೋಡಿ, ಆನಂದಿಸಿ, ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.)

ಅಲ್ಲಿಂದ ಮುಂದೆ ನಾವು ಕಂಡಿದ್ದು...ಮಾತಿಲ್ಲ ಕತೆಯಿಲ್ಲ ಬರೀ ರೋಮಾಂಚನ...

ಮಹಾ ಪ್ರಯಾಣ

ಮಹಾ ಪ್ರಯಾಣ

ಆರ್ಣವ್, ಡ್ರೈವರ್ ಮೊಯಿನ್, ನಾನು ಹಾಗೂ ಸುಬ್ರಹ್ಮಣ್ಯ...

ಗುರಾಯಿಸ್ತಿಯಾ ಗುಮ್ ಬಿಡ್ತೀನಿ

ಗುರಾಯಿಸ್ತಿಯಾ ಗುಮ್ ಬಿಡ್ತೀನಿ

ಕಾಟಿಯೊಂದು ತಲೆ ಎತ್ತಿ ನೋಡಿ ಏನ್ ಯೋಚಿಸ್ತಿದೆ?

ಜಿಂಕೆ ಮರೀನಾ...ಜಿಂಕೆ ಮರೀನಾ

ಜಿಂಕೆ ಮರೀನಾ...ಜಿಂಕೆ ಮರೀನಾ

ಬಂಡೀಪುರದಲ್ಲಿ ಜಿಂಕೆಗಳಿಗೇನು ಕೊರತೆ...

ಊಟದಲ್ಲಿ ಬಿಜಿ ಇದೀನಿ, ಆ ಕಡೆ ತಿರುಗಲ್ಲ

ಊಟದಲ್ಲಿ ಬಿಜಿ ಇದೀನಿ, ಆ ಕಡೆ ತಿರುಗಲ್ಲ

ಆನೆಯೊಂದು ಅದರ ಊಟವನ್ನೋ ತಿಂಡಿಯನ್ನೋ ಮಾಡ್ತಿದೆ

ಕುಣಿಯೋಣು ಬಾರಾ...ದಣಿಯೋಣು ಬಾರಾ

ಕುಣಿಯೋಣು ಬಾರಾ...ದಣಿಯೋಣು ಬಾರಾ

ಏನ್ ಕುಣಿತ ರೀ..ಸೂಪರ್ರೋ ಸೂಪರ್ರು

ನಾನು ನೋಡಕಿಲ್ಲ, ನಾನು ನೋಡಕಿಲ್ಲ

ನಾನು ನೋಡಕಿಲ್ಲ, ನಾನು ನೋಡಕಿಲ್ಲ

ಕರಿಗೌಡನಕಟ್ಟೆ ಹತ್ತಿರ ಹಟ ಹಿಡಿದು ಮುಖ ತಿರುಗಿಸಿದಂತೆ ಕಂಡ ಪ್ರಿನ್ಸ್

ನೀವೆಲ್ಲ ಎಲ್ಲಿಂದ ಬಂದಿರೋದು?

ನೀವೆಲ್ಲ ಎಲ್ಲಿಂದ ಬಂದಿರೋದು?

ರೋಮಾಂಚನ ಅಂದರೆ ಅಕ್ಷರಶಃ ಅನುಭವಕ್ಕೆ ಬಂದ ದಿವ್ಯ ಕ್ಷಣ

ಏನೀ ಆಲೋಚನೆ

ಏನೀ ಆಲೋಚನೆ

ಸ್ವಲ್ಪ ಹೊತ್ತಿಗೆ ಮುಂಚೆ ಬೇಟೆ ಕೈ ತಪ್ಪಿದ ಮೂಡಲ್ಲಿ ಭವಿಷ್ಯದ ಆಲೋಚನೆ

ಗುದ್ದಾಡೋಣ ಬಾ

ಗುದ್ದಾಡೋಣ ಬಾ

ಎರಡು ಜಿಂಕೆಗಳ ಕಾದಾಟ ಕ್ಯಾಮೆರಾ ಕಣ್ಣಿಗೆ ಸಿಕ್ಕ ಕ್ಷಣ

ಹ್ಯಾಪಿ ಬರ್ತ್ ಡೇ

ಹ್ಯಾಪಿ ಬರ್ತ್ ಡೇ

ಆನೆ ಮರಿಯೊಂದು ಹುಟ್ಟಿದ ಕೆಲವೇ ಗಂಟೆಗಳ ನಂತರ ತೆಗೆಸಿಕೊಂಡ ಮೊದಲ ಫೋಟೋ

ನೋಟವೇನು

ನೋಟವೇನು

ಬಲಗಡೆ ಏನೂ ಟ್ರಾಫಿಕ್ ಇಲ್ಲ ಅನ್ನುವಂತೆ ಕಂಡುಬಂದ ಗುಬ್ಬಚ್ಚಿ

ಸೊಂಟ ಬಗ್ಗಿಸಿ ಹುಡುಕು ತಮ್ಮಾ

ಸೊಂಟ ಬಗ್ಗಿಸಿ ಹುಡುಕು ತಮ್ಮಾ

ಬಣ್ಣದ ಕೊಕ್ಕರೆಗಳು ನೀರಿನೊಳಗೆ ಕಂಡುಬಂದದ್ದು ಹೀಗೆ

ಏನ್ ಚಂದ ನೋಡ್ತೀಯೋ

ಏನ್ ಚಂದ ನೋಡ್ತೀಯೋ

ಹಸಿರುಬಾಲದ ಜೇನು ಹಿಡುಕ ದಿಟ್ಟಿಸಿ ನೋಡುತ್ತಿರೋದು ಏನನ್ನೋ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
H.S.Vinay photogrpher from Hebbur, Tumkur district. Shared his experience about tiger sighting in Bandipur. There are other animals and birds sighted to him.
Please Wait while comments are loading...