ಧನ ಮತ್ತು ಮಾನ ರಕ್ಷಣೆಗೆ ಸೈಬರ್ ಸುರಕ್ಷತೆ

Cyber safety tips
ಇದು ಸೈಬರ್ ಯುಗ. ಇಲ್ಲಿ ಎಲ್ಲ ಕೆಲಸಗಳೂ ಅಂತರ್ ಜಾಲಮಯ. ವಸ್ತುಗಳನ್ನು ಕೊಳ್ಳುವುದು - ಮಾರುವುದು, ಬ್ಯಾಂಕ್ ವಹಿವಾಟು ಅಷ್ಟೇ ಏಕೆ ದೂರದ ಗೆಳತಿಯನ್ನು ಮಾತನಾಡಿಸುವುದೂ ಈ ಗಣಕದ ಮೂಲಕವೇ. ಆದರೆ ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ಕುಳಿತು, ಕಾಣದ ವ್ಯಕ್ತಿಗಳೊಂದಿಗೆ ನಡೆಸುವ ಇಂತಹ ವ್ಯವಹಾರಗಳಲ್ಲಿ ನಮ್ಮ ಧನ ಹಾಗು ಮಾನದ ರಕ್ಷಣೆಯ ಹೊಣೆ ನಮ್ಮದೇ ಆಗಿರುತ್ತದೆ. ಆದ್ದರಿಂದ ನಮ್ಮ ದೈನಂದಿನ ಬದುಕಿಗೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕಾದರೆ, ಇಲ್ಲಿವೆ ಕೆಲವು ಸುರಕ್ಷಿತ ಸಲಹೆಗಳು.

* ನಿಮ್ಮ ಖಾಸಗಿ ಮಾಹಿತಿಯನ್ನು ಯಾವುದೇ ಅಪರಿಚಿತ ವ್ಯಕ್ತಿ ಅಥವಾ ವೆಬ್ ಸೈಟ್ ಗಳಿಗೆ ನೀಡದಿರಿ.
* ಪರಿಚಿತರಿಗೂ ಊಹಿಸಲು ಕಷ್ಟವಾಗುವಂತಹ ಪಾಸ್ವರ್ಡಗಳನ್ನು ಇಟ್ಟುಕೊಳ್ಳಿ. ಅಲ್ಲದೆ ಅವುಗಳನ್ನು ಗೌಪ್ಯವಾಗಿಟ್ಟುಕೊಳ್ಳಿ ಹಾಗು ಆಗಾಗ ಬದಲಾಯಿಸುತ್ತಿರಿ.
* ಅಪರಿಚಿತ ಮೂಲಗಳಿಂದ ನಿಮ್ಮ ಇ-ಮೇಲ್ ಗಳನ್ನು ತೆರೆಯದಿರಿ.
* ಆಂಟಿ-ವೈರಸ್, ಆಂಟಿ-ಸ್ಪೈವೆರ್ ಹಾಗು ಫೈರ್ವಾಲ್ ಗಳನ್ನು ಬಳಸಿರಿ ಮತ್ತು ಅವುಗಳನ್ನು ನಿಯಮಿತವಾಗಿ ಅಪ್ ಡೇಟ್ ಮಾಡುತ್ತಿರಿ.
* ನಿಮ್ಮ ಆಪರೇಟಿಂಗ್ ಸಿಸ್ಟಂ ಮತ್ತು ವೆಬ್ ಬ್ರೌಸರ್ ಗಳನ್ನು ಅಪ್ ಡೇಟ್ ಮಾಡುತ್ತಿರಿ.
* ಮುಖ್ಯವಾದ ಫೈಲ್ಗಳನ್ನು ನಿಯಮಿತವಾಗಿ ಬ್ಯಾಕ್ ಅಪ್ ಮಾಡುತ್ತಿರಿ.
* ಚಾಟ್ ರೂಮ್ ನಲ್ಲಿ ನಿಮ್ಮ ನಿಜವಾದ ಗುರುತನ್ನು ಹೇಳದಿರಿ.
* ನಿಮ್ಮ ಕಾಂಟ್ಯಾಕ್ಟ್ ಲಿಸ್ಟನಲ್ಲಿ ನೀವು ವ್ಯವಹರಿಸುವ ಎಲ್ಲರ ಹೆಸರು ಮತ್ತು ಇ-ಮೇಲ್ ವಿಳಾಸಗಳನ್ನು ಪಟ್ಟಿ ಮಾಡಿಟ್ಟುಕೊಂಡಿರಿ.

ಒಂದು ವೇಳೆ ನೀವು ಗಣಕೀಕೃತ ಬ್ಯಾಂಕ್ ಖಾತೆಯಲ್ಲಿ ವ್ಯವಹರಿಸುತ್ತಿದ್ದರೆ, ಪಾಸ್ವರ್ಡ್ ಕದಿಯುವುದು, ಹಣ ಸೋರಿಕೆಯಂತಹ ದುಷ್ಕೃತ್ಯಗಳಿಗೆ ನಮ್ಮ ಬ್ಯಾಂಕ್ ಖಾತೆ ಗುರಿಯಾಗದಂತೆ ನೋಡಿಕೊಳುವುದು ಅತಿ ಮುಖ್ಯ. ಹಾಗಿದ್ದರೆ ಈ ಕೆಳಗಿನ ಸಲಹೆಗಳನ್ನು ಅನುಸರಿಸಿ.

* ನಿಮ್ಮ ಪಾಸ್ವರ್ಡ್ ಮತ್ತು ಪಿನ್ ಕೊಡ್ ಗಳನ್ನು ಗೌಪ್ಯವಾಗಿ, ಸುರಕ್ಷಿತವಾಗಿಡುವದರ ಜೊತೆಗೆ ಸದಾ ನೆನಪಿನಲ್ಲಿಟ್ಟುಕೊಂಡಿರಿ.
* ನಿಮ್ಮ ಆನ್ ಲೈನ್ ಬ್ಯಾಂಕಿನ ವೆಬ್ ಸೈಟ್ ನ ಭದ್ರತೆಯ ಬಗ್ಗೆ ಖಚಿತ ಪಡಿಸಿಕೊಂಡಿರಿ.
* ಆನ್ ಲೈನ್ ಬ್ಯಾಂಕಿನಲ್ಲಿ ನಿಮ್ಮ ವ್ಯವಹಾರ ಮುಗಿದ ತಕ್ಷಣ ಅದನ್ನು ಲಾಗ್ ಔಟ್ ಮಾಡಲು ಮರೆಯದಿರಿ.
* ನಿಮ್ಮ ಇ-ಮೇಲಿಗೆ ಜೋಡಣೆಯಾಗಿ ಬಂದ ಯಾವುದೇ ಲಿಂಕಗಳ ಮೇಲೆ ಕ್ಲಿಕ್ ಅಥವಾ ನಕಲು ಮಾಡಬೇಡಿ.
* ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕೇಳಿರುವ ಯಾವುದೇ ಇ-ಮೇಲಿಗೆ ಪ್ರತಿಕ್ರಿಯಿಸಬೇಡಿರಿ.
* ಯಾವುದೇ ಖಾತೆ ಅಥವಾ ವ್ಯಕ್ತಿಯೊಂದಿಗೆ ವ್ಯವಹರಿಸುವದಕ್ಕಿಂತ ಮೊದಲು ಅದರ ಗೌಪ್ಯತೆ ಕಾಪಾಡುವ ನೀತಿಯ ಬಗೆಗೆ ವಿವರವಾಗಿ ಓದಿ ತಿಳಿದುಕೊಳ್ಳಿ.
* ಆಗಾಗ ಜಮಾ-ಖರ್ಚುಗಳ ಪಟ್ಟಿಯನ್ನು ವೀಕ್ಷಿಸುವ ಮೂಲಕ ಅನಧಿಕೃತ ವ್ಯವಹಾರಗಳ ಬಗ್ಗೆ ಎಚ್ಚರ ವಹಿಸಬಹುದು.

ಇತ್ತೀಚೆಗೆ ನಗರಗಳಲ್ಲಿ ಆನ್ ಲೈನ್ ಮಳಿಗೆಗಳು ಹೆಚ್ಚುತ್ತಿದ್ದು, ಜನರು ಮೋಸ ಹೋಗುವ ಸಾಧ್ಯತೆಗಳೂ ಹೆಚ್ಚುತ್ತಿವೆ. ನೀವು ಆನ್ ಲೈನ್ ಮಳಿಗೆಗಳಲ್ಲಿ ವ್ಯವಹರಿಸುವಾಗ ಈ ಸಲಹೆಗಳನ್ನು ಗಮನದಲ್ಲಿರಿಸಿ.

* ನಿಮಗೆ ಪರಿಚಿತವಿರುವ, ವಿಶ್ವಾಸಾರ್ಹ ಮಾರಾಟಗಾರರೊಂದಿಗೆ ವ್ಯವಹರಿಸಿ.
* ನೀವು ವ್ಯವಹರಿಸುತ್ತಿರುವ ಮಳಿಗೆಯ ವೆಬ್ ಸೈಟ್ ನ ಭದ್ರತೆಯ ಬಗ್ಗೆ ಗಮನವಿರಲಿ.
* ಮಾರಾಟಗಾರರಿಂದ ಬರುವ ಅನವಶ್ಯಕ ಇ-ಮೇಲ್, ಮೆಸ್ಸೆಜ್ ಹಾಗು ಫೋನ್ ಕರೆಗಳಿಗೆ ಪ್ರತಿಕ್ರಿಯಿಸುವಾಗ ಎಚ್ಚರವಿರಲಿ.
* ಯಾವುದೇ ವಸ್ತುವನ್ನು ಕೊಳ್ಳುವ ಮೊದಲೇ ಮಾರಾಟಗಾರನ, "ಹಣ ಹಿಂದಿರುಗಿಸುವ ಹಾಗೂ ವಸ್ತುಗಳನ್ನು ಬದಲಿಸುವ" ನೀತಿಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಿ.
* ಯಾವುದೇ ಕಾರಣಕ್ಕೂ ನಿಮ್ಮ ಪಾಸ್ವರ್ಡನ್ನು ಅವರಿಗೆ ತಿಳಿಸಬೇಡಿರಿ.
* ಆರ್ಡರ್ ಖಚಿತ ಪಡಿಸಿದ್ದರ ಪ್ರತಿಯನ್ನು ಪ್ರಿಂಟ್ ಮಾಡಿ ತೆಗೆದಿಟ್ಟುಕೊಂಡಿರಿ.
* ಮಾರಾಟಗಾರ ಕಂಪನಿಯ ಗೌಪ್ಯತೆ ಕಾಪಾಡುವ ನೀತಿಯ ಬಗೆಗೆ ವಿವರವಾಗಿ ತಿಳಿದುಕೊಂಡಿರಿ.
* ಪಾಪ್-ಅಪ್ ಪರದೆಯ ಮೇಲೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಾಕಬೇಡಿರಿ.

ಇನ್ನು ಅಂತರ್ ಜಾಲದಲ್ಲಿ ಸಾಮಾಜಿಕ ತಾಣಗಳಲ್ಲಿ ವಿಹರಿಸದವರಾರು? ಫೇಸನ್ನೇ ನೋಡದಿದ್ದರೂ ಇಂತಹ ಸಾಮಾಜಿಕ ತಾಣಗಳಿಂದ ಸ್ನೇಹವಾಗಿ, ಪ್ರೀತಿಯಾಗಿ, ಮದುವೆಯಾಗಿ ಮೋಸ ಹೋದವರು. ಇಲ್ಲಿನ ಮಾಹಿತಿಗಳ ದುರ್ಬಳಕೆ... ಮುಂತಾದವುಗಳಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಕೆಲವು ಸಲಹೆಗಳು.

ಯಾವುದೇ ಸಾಮಾಜಿಕ ತಾಣಗಳಲ್ಲೂ ನಿಮ್ಮ ಬಗ್ಗೆ ಹಾಗು ಖಾಸಗಿ ಜೀವನದ ಬಗ್ಗೆ ಅಪರಿಚಿತ ಸ್ನೇಹಿತರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ನಿಮಗೆ ಪರಿಚಿತವಿರುವವರೊಂದಿಗೆ ಮಾತ್ರ ಸ್ನೇಹ ಬೆಳೆಸುವುದು ಸುರಕ್ಷಿತ. ನಿಮ್ಮ ಸ್ನೇಹಿತರ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ತಾಣಗಳ ಪರದೆಯ ಮೇಲೆ ಹಾಕದಿರಿ. ಇದರಿಂದ ಅವರು ತೊಂದರೆಗೀಡಾಗಬಹುದು. ಯಾವುದೇ ಸಾಮಾಜಿಕ ತಾಣಗಳಲ್ಲಿ ನೀವು ಹಾಕಿದ ಮಾಹಿತಿ ಗೌಪ್ಯವಾಗಿರದೇ, ಜಗತ್ತಿಗೆಲ್ಲ ತಿಳಿಯುವುದೆಂದು ನಿಮಗೆ ತಿಳಿದಿರಲಿ.

ಕಂಪ್ಯೂಟರ್, ಅಂತರ್ ಜಾಲ, ನೆಟ್ ಬ್ಯಾಂಕಿಂಗ್, ಆನ್ ಲೈನ್ ಶಾಪಿಂಗ್ ಗಳು ನಮ್ಮ ಸೌಲಭ್ಯಕಾಗಿ ನಾವೇ ಮಾಡಿಕೊಂಡ ಸೇವೆಗಳು. ಇಂದು ಅವುಗಳಿಂದ ನಾವೇ ಅಪಾಯಕ್ಕೀಡಾಗುತ್ತಿದ್ದೇವೆ. ನಮ್ಮ ಸೌಲಭ್ಯಗಳನ್ನು ನಿಭಾಯಿಸುವುದು ನಮ್ಮ ಕೈಯಲ್ಲೇ ಇದ್ದು, ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವದರಿಂದ ಅವುಗಳಿಂದಾಗುವ ಅಪಾಯಗಳನ್ನು ತಪ್ಪಿಸಿ ಕೇವಲ ಸೇವಾಸುಖವನ್ನು ಅನುಭವಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+