• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾ ಕಂಡಂತೆ ಜೆಆರ್ ಡಿ ಟಾಟಾ : ಸುಧಾ ಮೂರ್ತಿ

By * ಸುಧಾಮೂರ್ತಿ ; ಕನ್ನಡಕ್ಕೆ: ವಿಶ್ವನಾಥ ಹುಲ
|
ಇನ್ಫೋಸಿಸ್ ನಿಂದ ಆ.20ರಂದು ನಿವೃತ್ತರಾಗುತ್ತಿರುವ ಎನ್ಆರ್ ನಾರಾಯಣ ಮೂರ್ತಿ ಅವರ ಪತ್ನಿ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆಯಾಗಿ, ಲೇಖಕಿಯಾಗಿ, ಸಮಾಜಸೇವಕಿಯಾಗಿ ಕನ್ನಡಿಗರ ಮನದಲ್ಲಿ ನೆಲೆಸಿರುವ ಸುಧಾಮೂರ್ತಿಯನ್ನು ಅರಿಯದವರಿಲ್ಲ. ಅತ್ಯಂತ ಸರಳ ಜೀವನ ನಡೆಸುತ್ತಿರುವ ಸುಧಾ ಅವರ ಜೀವನವೇ ತೆರೆದ ಪುಸ್ತಕದಂತೆ. Lasting Legacies ಸ್ಮರಣಸಂಚಿಕೆಯಲ್ಲಿ ಸುಧಾ ಅವರೇ ಬರೆದ ಜೆಆರ್ ಡಿ ಟಾಟಾ ಅವರೊಂದಿಗೆ ಒಡನಾಡಿದ ಅನುಭವವದ ಭಾವಾನುವಾದವನ್ನು ಇಲ್ಲಿ ನೀಡಲಾಗಿದೆ. - ಸಂಪಾದಕ.

ಆಗ ಬಹುಶಃ ಏಪ್ರಿಲ್ 1974 ಇರಬೇಕು. ಬೆಂಗಳೂರಿನ IISc ಆವರಣದಲ್ಲಿ ಹವಾಮಾನ ಬಿಸಿಯಾಗತೊಡಗಿದ್ದು, ಗುಲ್ ಮೋಹರ್ ಪುಷ್ಪಗಳು ಆಗ ತಾನೇ ಅರಳತೊಡಗಿದ್ದವು. ನನ್ನ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ನಾನೊಬ್ಬಳೇ ಹುಡುಗಿಯಾಗಿದ್ದೆ; ಹೀಗಾಗಿ ನಾನು ಮಹಿಳಾ ವಿದ್ಯಾರ್ಥಿನಿಲಯದಲ್ಲಿ ವಾಸವಾಗಿದ್ದೆ. ಅಲ್ಲಿದ್ದ ಬೇರೆ ಹುಡುಗಿಯರು ವಿಜ್ಞಾನದ ವಿವಿಧ ವಿಭಾಗಗಳಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದರು. ವಿದೇಶಕ್ಕೆ ತೆರಳಿ ಕಂಪ್ಯೂಟರ್ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆಯಬೇಕೆಂಬುದು ನನ್ನ ಮಹತ್ವಾಕಾಂಕ್ಷೆಯಾಗಿತ್ತು. ಅದೃಷ್ಟವಶಾತ್, ಅಮೆರಿಕಾದ ವಿಶ್ವವಿದ್ಯಾನಿಲಯಗಳು ನನಗೆ ವಿದ್ಯಾರ್ಥಿವೇತನವನ್ನು ನೀಡಿದ್ದವು. ಹೀಗಾಗಿ ನಾನು ಭಾರತದಲ್ಲಿ ಕೆಲಸ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಹೀಗೊಂದು ದಿನ, ಉಪನ್ಯಾಸ ಸಮುಚ್ಛಯದಿಂದ ವಿದ್ಯಾರ್ಥಿನಿಲಯಕ್ಕೆ ಹೋಗುವ ಮಾರ್ಗದಲ್ಲಿ ನೋಟೀಸ್ ಬೋರ್ಡಿನಲ್ಲಿದ್ದ ಒಂದು ಜಾಹೀರಾತನ್ನು ನೋಡಿದೆ. ಅದೊಂದು ಭಾರತದ ಪ್ರಖ್ಯಾತ ವಾಹನ ತಯಾರಿಕಾ ಸಂಸ್ಥೆ ಟೆಲ್ಕೋದ ಉದ್ಯೋಗೀ ಸಂಬಂಧ ಜಾಹೀರಾತಾಗಿತ್ತು. ಆ ಕಂಪನಿಯು ಬುದ್ಧಿವಂತ ತರುಣ ಎಂಜಿನಿಯರುಗಳು- ಯಾರಿಗೆ ಅತ್ಯುತ್ತಮ ಶೈಕ್ಷಣಿಕ ಅರ್ಹತೆಗಳಿವೆಯೋ, ಯಾರು ಕಷ್ಟಪಟ್ಟು ದುಡಿಯಬಲ್ಲರೋ, ಅಂಥವರನ್ನು ಆಹ್ವಾನಿಸುತ್ತಿತ್ತು.

ಆ ಜಾಹೀರಾತಿನ ಕೊನೆಯಲ್ಲಿ, ಸಣ್ಣ ಅಕ್ಷರಗಳಲ್ಲಿ ಹೀಗೆ ಬರೆಯಲಾಗಿತ್ತು "ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕಬೇಕಾಗಿಲ್ಲ". ಇದನ್ನು ನೋಡಿ ನಾನು ಕ್ರುದ್ಧಳಾದೆ. ನನ್ನ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಲಿಂಗ ಸಂಬಂಧಿ (ಸ್ತೀ-ಪುರುಷ) ತಾರತಮ್ಯವನ್ನು ಎದುರಿಸಬೇಕಾಯಿತು. ನಾನು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯತ್ತಮವಾಗಿ ಸಾಧನೆ ಮಾಡಿದ್ದೆ. ನನ್ನ ತರಗತಿಯ ಬೇರೆ ಎಲ್ಲ ಹುಡುಗರಿಗಿಂತಲೂ ಉತ್ತಮವಾಗಿ ಮಾಡಿದ್ದೆ. ಆದರೆ ಆಗ ನನಗೆ ಗೊತ್ತಿರಲಿಲ್ಲ; ಜೀವನದಲ್ಲಿ ಯಶಸ್ವಿಯಾಗಲು ಶೈಕ್ಷಣಿಕ ಅತ್ಯುತ್ತಮ ಸಾಧನೆಯೊಂದೇ ಸಾಕಾಗುವುದಿಲ್ಲ ಅಂತ!

ಆ ಜಾಹೀರಾತನ್ನು ಓದಿದ ನಂತರ ಕೋಪದಿಂದ ಕುದಿಯುತ್ತಾ ನನ್ನ ರೂಮಿಗೆ ಹೋದೆ. ಟೆಲ್ಕೋ ಕಂಪನಿಯ ಅತ್ಯಚ್ಛ ನಿರ್ವಾಹಕರಿಗೆ ಆ ಕಂಪೆನಿಯು ಎಂತಹ ಘೋರ ಅನ್ಯಾಯವನ್ನು ಎಸಗುತ್ತಿದೆ ಎಂಬುದನ್ನು ತಿಳಿಸಬೇಕೆಂದು ನಿರ್ಧರಿಸಿದೆ. ಅದರ ಬಗ್ಗೆ ಪತ್ರವನ್ನು ಬರೆಯಲು ಶುರು ಮಾಡಿದೆ. ಆದರೆ ಟೆಲ್ಕೋ ಕಂಪೆನಿಯನ್ನು ನಡೆಸುತ್ತಿರುವವರು ಯಾರು ಎಂಬುದು ನನಗೆ ಗೊತ್ತಿರಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is an inspirational article written by Infosys foundation chairman Sudha Murthy on her association with JRD Tata in Lasting Legacies (Tata Review- Special Commemorative Issue 2004). Translation by Vishvanath Hulikal, North Califoania, USA.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more