ಸಿಂಧು ಪುರೋಹಿತ್ : ಅಕ್ಕನ ಚಾಳಿ ತಂಗಿಗೆ
ಶ್ವೇತಾಳಿಗೆ
ತಕ್ಕ ಸಹೋದರಿ ಸಿಂಧು. ಗುರು ರಾಧಾ ಶ್ರೀಧರ್ ನಿರ್ದೇಶನದ 'ಕೋಳೂರು ಕೊಡಗೂಸು ನೃತ್ಯನಾಟಕದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೇ ನೃತ್ಯಮಂದಿರದವರು ಹಮ್ಮಿಕೊಂಡ 'ಗೋದಾದೇವಿ, 'ಅಮೃತ ಮಂಥನ, 'ಹನುಮದ್ವಿಲಾಸ, ಮುಂತಾದ ಬ್ಯಾಲೆಗಳಲ್ಲಿಯೂ ಸಿಂಧು ನಗೆಚೆಲ್ಲಿದ್ದಾರೆ. id="toptextpromo">ಜನಪದ
ಸಂಭ್ರಮ , ಝೀ ಕನ್ನಡ ವಾಹಿನಿಯವರ 'ಚಿತ್ತಾರ', 'ಸರಿಗಮ ಲಿಟಲ್ ಚಾಂಪ್ಸ್', ಉದಯವಾಹಿನಿಯವರ 'ಚಿಗುರು'... ಮುಂತಾದ ಕಾರ್ಯಕ್ರಮಗಳಲ್ಲಿ ಸಿಂಧು ಭಾಗಿಯಾಗಿ ಪ್ರತಿಭಾ ಪ್ರದರ್ಶನ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬೆಂಗಳೂರಿನ
ಪದ್ಮನಾಭನಗರದ ಕಾರ್ಮೆಲ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಿಂಧು ಶಾಲೆ ಮತ್ತು ಅಂತರ ಶಾಲಾ ನೃತ್ಯ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. ಬೆಳ್ಳಿದೀಪ, ಗಾನ ಗಂಧರ್ವ ಕಲಾವೃಂದ, ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿ ಮುಂತಾದ ಸಂಸ್ಥೆಯವರು ನಡೆಸಿದ ಹಲವಾರು ನೃತ್ಯ ಪ್ರದರ್ಶನಗಳಲ್ಲಿ ವಿಜೇತರಾಗಿದ್ದಾರೆ.











Click it and Unblock the Notifications