ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ವರ್ಷಕ್ಕೇ ಗೆಜ್ಜೆ ಕಟ್ಟಿದ ಶ್ವೇತಾ ಪುರೋಹಿತ್

By * ನಿತಿನ್ ನಾಗರಾಜ್, ಬೆಂಗಳೂರು
|
Google Oneindia Kannada News

Shwetha Purohit
ಕುಮಾರಿ ಶ್ವೇತಾ-ಸಿಂಧು ಸಹೋದರಿಯರಿಗೆ ಬಾಲ್ಯದಿಂದಲೇ ಸಂಗೀತ, ನೃತ್ಯಕಲೆಯಲ್ಲಿ ವಿಶೇಷವಾದ ಆಸಕ್ತಿ. ಆರಂಭದಲ್ಲಿ ಗುರು ಶ್ರೀಮತಿ ಮೀರಾ ಅವರಲ್ಲಿ, ನಂತರ ವೆಂಕಟೇಶ ನಾಟ್ಯಮಂದಿರದ ಗುರು ಕರ್ನಾಟಕ ಕಲಾ ತಿಲಕ ರಾಧಾ ಶ್ರೀಧರ್ ಅವರಲ್ಲಿ ಶಾಸ್ತ್ರೀಯ ಭರತ ನಾಟ್ಯ ಅಭ್ಯಾಸ ನಡೆಸಿದರು. ಕ್ರಮೇಣ ನೃತ್ಯ, ನೃತ್ಯ ರೂಪಕ, ಬ್ಯಾಲೆ ಮುಂತಾದ ಕಲಾ ಪ್ರಕಾರಗಳಲ್ಲಿ ಹೆಚ್ಚಿನ ತರಬೇತಿ ಹೊಂದಿದರು.

ಕರ್ನಾಟಕ ಸೆಕಂಡರಿ ಎಜುಕೇಷನ್ ಬೋರ್ಡ್‌ನವರು ನಡೆಸಿದ ಜ್ಯೂನಿಯರ್, ಸೀನಿಯರ್ ಗ್ರೇಡ್ ಪರೀಕ್ಷೆಗಳಲ್ಲಿ ಹಾಗೂ ಕರ್ನಾಟಕ ಮ್ಯೂಸಿಕ್ ವೋಕಲ್ ಜ್ಯೂನಿಯರ್ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿದ್ದಾರೆ. ಶ್ವೇತಾ-ಸಿಂಧು ಸಹೋದರಿಯರು ನೃತ್ಯ-ಸಂಗೀತ, ನೃತ್ಯ ನಾಟಕ ಮತ್ತು ಬ್ಯಾಲೆಗಳಲ್ಲಿ ಸಾಕಷ್ಟು ತರಬೇತಿ ಹೊಂದಿ ತಮ್ಮ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ.

ಶ್ವೇತಾ ಪುರೋಹಿತ್

ಮೂರು ವರ್ಷ ಇದ್ದಾಗಲೇ ಗೆಜ್ಜೆ ಕಟ್ಟಿದ ಶ್ವೇತಾ ಮುಂಬಯಿಯ ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯ ಮಂಡಲದವರು ನಡೆಸಿದ ಮಾಧ್ಯಮ-2 ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಕರ್ನಾಟಕ ಸೆಕಂಡರಿ ಎಜುಕೇಷನ್ ಬೋರ್ಡ್‌ನವರು ನಡೆಸಿದ ವಿದ್ವತ್ ಪೂರ್ವ ಗ್ರೇಡ್ ಪರೀಕ್ಷೆಯಲ್ಲಿಯೂ ತೇರ್ಗಡೆ ಹೊಂದಿದ್ದಾರೆ.

ಹೊರ ರಾಜ್ಯಗಳಲ್ಲಿಯೂ ಹಲವಾರು ಸೋಲೋ ನೃತ್ಯ ಪ್ರದರ್ಶನ ನೀಡಿದ್ದಾರೆ. ಗುರು ರಾಧಾ ಶ್ರೀಧರ್ ನಿರ್ದೇಶಿಸಿದ 'ಗೋದಾದೇವಿ, 'ಶ್ರೀನಿವಾಸ ಕಲ್ಯಾಣ, 'ಹನುಮದ್ವಿಲಾಸ, 'ಗೀತಗೋವಿಂದ... ಮುಂತಾದ ರಾಜ್ಯ ಮಟ್ಟದ ನೃತ್ಯ ನಾಟಕಗಳಲ್ಲೂ ಹೆಸರು ಮಾಡಿದ್ದಾರೆ.

ಮುಂಬಯಿಯ ಕರ್ನಾಟಕ ಕಲ್ಚರಲ್ ಅಸೋಸಿಯೇಷನ್, ಕರ್ನಾಟಕ ನೃತ್ಯ ಕಲಾ ಅಕಾಡೆಮಿ, ಬೆಂಗಳೂರಿನಲ್ಲಿ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನ, ರಾಷ್ಟ್ರೀಯ ಸಂಸ್ಕೃತ ಸಮ್ಮೇಳನ (ಬೆಂಗಳೂರು)... ಮುಂತಾದ ವೇದಿಕೆಗಳಲ್ಲಿ ಶ್ವೇತಾ ನೃತ್ಯದ ಝಲಕ್ ನೀಡಿದ್ದಾರೆ.

ಬೆಳ್ಳಿದೀಪ, ಯುವಭಾರತ ಪುಸ್ತಕ ನಿಧಿ, ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿ ಮತ್ತು ರೋಟರಿ ಕ್ಲಬ್‌ನವರು ನಡೆಸಿದ ರಾಜ್ಯ ಮಟ್ಟದ ನೃತ್ಯ ಪ್ರದರ್ಶನಗಳಲ್ಲಿ ಜಯಗಳಿಸಿದ್ದಾರೆ. ಶ್ವೇತಾ ಸದ್ಯ ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 'ಆರ‍್ಕಿಟೆಕ್ಚರ್' ಅಭ್ಯಾಸ ಮಾಡುತ್ತಿದ್ದಾರೆ.

English summary
Bharatanatyam arangetram of Shwetha Purohit and her sister Sindhu Purohit was organized at ADA Rangamandira in Bangalore on Aug 6. Two talented sisters gave wonderful performance together to enthrall the completely packed auditorium. Both have been trained under the able guidance of their guru Radha Sridhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X