ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರೆಂಟು ಮಾತು ಎದೆಯಾಳದಿಂದ...

By Staff
|
Google Oneindia Kannada News

Vishweshwar Bhat
ಕಳೆದ ಭಾನುವಾರ(28-06-2009) ನನ್ನ ಜೀವನದಲ್ಲಿ ಮಹತ್ತರವಾದ ದಿನ. ಅಂದು ನೂರೆಂಟು ಮಾತಿನ ಸರದಾರ ವಿಶ್ವೇಶ್ವರ ಭಟ್ ಅವರ "ನೂರೆಂಟು ಮಾತು" ಮತ್ತು "ತಲೆ ಬರಹ ಪತ್ರಿಕೆ ಹಣೆಬರಹ" ಈ ಎರಡು ಪುಸ್ತಕಗಳ ಬಿಡುಗಡೆ. ವಿಶ್ವೇಶ್ವರ ಭಟ್ ಮತ್ತು ಜಯಂತ ಕಾಯ್ಕಿಣಿ ಕನ್ನಡದಲ್ಲಿ ನನ್ನ ನೆಚ್ಚಿನ ಲೇಖಕರು. ಅದೃಷ್ಟವೆಂಬಂತೆ ಕಾಯ್ಕಿಣಿಯವರು ಅಂದು ಮುಖ್ಯ ಅತಿಥಿಗಳು. ಭಟ್ಟರನ್ನು ಇದುವರೆಗೆ ಭೇಟಿ ಮಾಡದ ನಾನು ಹೇಗಾದರೂ ಈ ಸಮಾರಂಭಕ್ಕೆ ಹೋಗಬೇಕೆಂದು ಆಶಿಸಿದ್ದೆ. ಅವರನ್ನು ಭೇಟಿಯಾದದ್ದು, ಕೈಕುಲುಕಿದ್ದು ಕನಸು ನನಸಾದಂತಾಗಿದೆ. ಆ ಹೊಸ ಅನುಭವ, ನನಗೆ ಇದ್ದ ಆತಂಕ, ನನ್ನ ಮಿಡಿತಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

* ಪ್ರಕಾಶ್ ಉಪಾಧ್ಯಾಯ

ನಾನು basically shy & introvert ಪರ್ಸನ್. ನಮ್ಮ ಕಚೇರಿಗೆ ಬಿಡುಗಡೆ ಸಮಾರಂಭದ ಅಹ್ವಾನ ಪತ್ರಿಕೆ ಬಂದಿತ್ತು. ನನ್ನ ಗೆಳೆಯ ಮಹೇಶ್ ಮಲ್ನಾಡ್ ನನ್ನು ನನ್ನೊಡನೆ ಸಮಾರಂಭಕ್ಕೆ ಬರಲು ಕೇಳಿಕೊಂಡೆ. ಅವರು ಒಪ್ಪಿಕೊಂಡರೂ, ಅನಿವಾರ್ಯ ಕಾರಣಗಳಿಂದಾಗಿ ಕಡೆಗಳಿಗೆಯಲ್ಲಿ ಕೈಕೊಟ್ಟರು. ಆದರೂ ನನ್ನ ಪರಿಸ್ಥಿತಿ ಕಂಡು ಅವರು ಅವರ ಸ್ನೇಹಿತ ನಟೇಶ್ ಬಾಬು(ವಿ.ಕೆ.ಯಲ್ಲಿ ಉಪಸಂಪಾದಕ) ಅವರೊಡನೆ ಹೋಗಲು ವ್ಯವಸ್ಥೆ ಮಾಡಿದರು. ನನಗೆ ಮುಂಚಿನಿಂದಲೂ ಸಭೆ ಸಮಾರಂಭವೆಂದರೆ ಏನೋ ಒಂದು ಥರ ಅಲರ್ಜಿ. ಈ ಫೋಬಿಯಾವನ್ನು ದೂರ ಮಾಡಲು ಹೊಸ ಗೆಳೆಯ ನಟೇಶ್ ಅವರೊಡನೆ ನವ ವಧು ಗಂಡನ ಮನೆಗೆ ಹೋಗುವಂತೆ ಅಂಜುತ್ತಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಒಳಗೆ ಕಾಲಿಟ್ಟೆ.

ನನ್ನ ಮನಸ್ಥಿತಿ ಬಗ್ಗೆ ಬಹುಶಃ ಮಹೇಶ್ ರವರು ನಟೇಶ್ ಗೆ ಹೇಳಿರಬೇಕು, ಆತ ನನ್ನ ಜತೆಗಿದ್ದಷ್ಟು ಕಾಲ ವರ್ಷದ ಹಳೆಯ ಸ್ನೇಹಿತನಂತೆ ಇದ್ದರು. ಅವರೊಡನೆ ಕಳೆದ ಸ್ವಲ್ಪ ಹೊತ್ತಿನಲ್ಲೇ ನನಗೆ ತುಂಬಾ ಅಪ್ತರಾದರು. ನೇರವಾಗಿ ನಟೇಶ್ ನನ್ನನು ಫಲಹಾರ ವ್ಯವಸ್ಥೆ ಮಾಡಿದ್ದ ಕಡೆ ಕರೆದೊಯ್ದರು. ಹೋಗುತ್ತಿದ್ದಂತೆ ಅಲ್ಲಿ ಭಟ್ಟರು ಯಾರೋಡನೆಯೋ ಮತನಾಡುತ್ತಿದ್ದರು, ನಟೇಶ್ ಕಂಡ ಅವರು ಹತ್ತಿರ ಬಂದು ಕೈ ಕುಲುಕಿದರು, ಅವರನ್ನು ಹತ್ತಿರದಿಂದ ಕಂಡ ಖುಷಿಯಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ನನ್ನ ಕೈ ಕುಲುಕಿ ನನ್ನ ಪರಿಚಯ ಮಾಡಿಸಿದರು. ನಾನು ಹಿಂದಿನ ದಿನ ಕಂಡ ಕನಸೆಲ್ಲ ಒಂದೇ ಸಾರಿ ಏರುಪೇರಾಗತೊಡಗಿತು! ನಾನು ಅವರನ್ನು ಹತ್ತಿರದಿಂದ ನೋಡಿದರೆ ಸಾಕು ಎಂದು ಹೋದವನು, ಅಲ್ಲಿ ಏಕಾಏಕಿ ಅವರಿಗೆ ಹ್ಯಾಂಡ್ ಶೇಕ್ ಕೊಟ್ಟು ಮಾತನಾಡುವ ಅವಕಾಶ ಸಿಕ್ಕಿದ ಖುಷಿ. 5 ಪರ್ಸೆಂಟ್ Hike ಸಿಗಬಹುದು ಎಂದು ಅಂದುಕೊಂಡವನಿಗೆ 500 ಪರ್ಸೆಂಟ್ Hike ಸಿಕ್ಕಿದರೆ ಹೇಗಾಗಬೇಡ? ಅದೇ ಗುಂಗಿನಲ್ಲೇ ನಾನು ಸ್ವಲ್ಪ ಕೇಸರಿಬಾತ್ ಸ್ವೀಕರಿಸಿದೆ.

ಭಟ್ಟರನ್ನು ಭೇಟಿಮಾಡುವ ಬಯಕೆಯೇನೋ ಈಡೇರಿತು. ಆದರೆ ಅಲ್ಲೇ ನಿಂತು ಯಾರೊಡನೆಯೋ ಮಾತನಾಡುತ್ತಿದ್ದ ಜಯಂತ್ ಕಾಯ್ಕಿಣಿಯವರನ್ನು ಮಾತನಾಡಿಸಲು ತವಕಿಸುತ್ತಿತ್ತು ಮನ. ಆದರೆ ಮಾತನಾಡಿಸಲು ಆಗದೆ ಸಭಾಂಗಣಕ್ಕೆ ಬಂದೆವು. ಕಾರ್ಯಕ್ರಮ 10.50ಕ್ಕೆ ಶುರುವಾಯಿತು. ಜಿ.ಎನ್.ಮೋಹನ್, ಕಾಯ್ಕಿಣಿ, ಭಟ್ಟರೆಲ್ಲರ ಮಾತುಗಳನ್ನು ಕೇಳಿದೆ. ಕಾರ್ಯಕ್ರಮ ಮುಗಿದೊಡನೆ ಕಾಯ್ಕಿಣಿಯವರ ಬಳಿ ಹೋಗಿ ಆಟೋಗ್ರಾಫ್ ತೆಗೆದುಕೊಂದು ಹ್ಯಾಂಡ್ ಶೇಕ್ ಮಾಡಿದೆ. ಕೈ ಸಣ್ಣಗೆ ನಡುಗುತ್ತಿತ್ತು. ತದನಂತರ "ತಲೆ ಬರಹ ಪತ್ರಿಕೆ ಹಣೆ ಬರಹ" ಪುಸ್ತಕದಲ್ಲಿ ಭಟ್ಟರ ಆಟೋಗ್ರಾಫ್ ಆಮೇಲೆ ಟಿ.ಎನ್. ಸೀತಾರಾಂರ ಆಟೋಗ್ರಾಫ್ ತೆಗೆದುಕೊಂಡೆ.

ಪುಸ್ತಕದ ಬಗ್ಗೆ

82 ಪುಟಗಳ 'ತಲೆಬರಹ ಪತ್ರಿಕೆ ಹಣೆಬರಹ' ಯುವ ಬರಹಗರರು ಓದಲೇ ಬೇಕಾದ ಒಂದು ಅದ್ಬುತ ಪುಸ್ತಕ. ಮುಖಪುಟದಲ್ಲಿ "Headline Suck" ಎಂದು ಕಾಣಬಹುದು. ಇದನ್ನು ಹತ್ತು ವರ್ಷದ ಹಿಂದೆ ಪ್ರಕಟಿಸಿದರು. ಇದು ಅದರ ಎರಡನೆಯ ಆವೃತ್ತಿ. ನಾನು ಈಗಾಗಲೇ ಅರ್ಧ ಪುಸ್ತಕವನ್ನು ಓದಿದೇನೆ. ಬೇಗನೆ ಕೊಳ್ಳಿ ಮೊದಲ ಆವೃತ್ತಿಯೆಲ್ಲ ಬಹು ಬೇಗನೆ ಮಾರಾಟವಾಗಿ ಭಟ್ಟರ ಬಳಿಯೇ ಒಂದು ಪ್ರತಿ ಇರಲಿಲ್ಲವಂತೆ.

ಪುಸ್ತಕದ ಹೆಸರು : ತಲೆಬರಹ ಪತ್ರಿಕೆ ಹಣೆಬರಹ
ಲೇಕಕರು : ವಿಶ್ವೇಶ್ವರ ಭಟ್
ಪ್ರಕಾಶಕರು : ಅಂಕಿತ ಪ್ರಕಾಶನ
ಬೆಲೆ : 60.00 ರೂಪಾಯಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X