‘ಆಟೊ ಸಾಹಿತ್ಯ’ ಓದಿ, ನಂತರ ಆಟೋ ಹತ್ತಿ!
‘abcd ಕಲಿತ ನಾರಿ, ಪ್ರೇಮಿ ಜೊತೆ ಪರಾರಿ’, ‘ಅಕ್ಕನ ಆಶಿರ್ವಾದ, ಭಾವನ ಕಾಣಿಕೆ’, ‘ಲವ್ ಮಾಡಿದ್ರೆ ಲವ್ ಸ್ಟೊರಿ, ಕೈ ಕೊಟ್ರೆ ಕ್ರೈಮ್ ಸ್ಟೋರಿ’ -ಇಂತಹ ಅನೇಕ ನುಡಿಮುತ್ತು(?)ಗಳು ಆಟೊ ಬೆನ್ನ ಮೇಲಿರುತ್ತವೆ! ಇವನ್ನು ಕಂಡಾಗ ನಿಮಗೇನನ್ನಿಸುತ್ತದೆ?
- ಚಂದ್ರಮ, ಬೆಂಗಳೂರು
ನೀವೂ ನೋಡಿರಬಹುದು, ಓದಿರಬಹುದು ಈ ಹಿಂಬರಹಗಳನ್ನು. ಇವು ತುಂಬಾ Interesting ಕೆಲವೊಮ್ಮೆ mind bogling ಆಗಿರುತ್ತವೆ, ವಿಚಿತ್ರವಾಗಿರುತ್ತವೆ. ಓದಿದ ತಕ್ಷಣ ನಿಮ್ಮ ತುಟಿಯರಳುತ್ತವೆ. ಕೆಲವೊಮ್ಮೆ ಬರೆದವನ, ಬರೆಸಿದವನ ಬುದ್ದಿವಂತಿಕೆ ಕಂಡು ‘ಹೌದಲ್ಲ’ ಅನ್ನಿಸುತ್ತದೆ. ಒಂದೆ ಪದದಲ್ಲಿ ಸಮಾಜ ಶಾಸ್ತ್ರ ಹೇಳಿದ್ದಾನಲ್ಲಾ ಎನಿಸುತ್ತದೆ. ಇನ್ನು ಕೆಲವೊಮ್ಮೆ ನಿಮಗೆ ತಲೆಬುಡ ಅರ್ಥವೇ ಆಗುವುದಿಲ್ಲ. ಈ ಬರಹಗಳು ಕರ್ನಾಟಕದಲ್ಲಿ ಸ್ವಲ್ಪ ಹೆಚ್ಚು. ಬೇರೆ ಯಾವ ರಾಜ್ಯದಲ್ಲೂ ನಾನಿಂಥವನ್ನು ಕಂಡಿಲ್ಲ.
ಬೆನ್ನುಡಿ ಸಾಹಿತ್ಯವನ್ನು ಯಾಕೆ ಬರೆಯುತ್ತಾರೆ? ಕೆಲವು ಚಾಲಕರನ್ನು ಮಾತನಾಡಿಸಿದೆ. ಅವರು ಕೊಟ್ಟ ಉತ್ತರಗಳು ಹೀಗಿವೆ.
-‘ ಸುಮ್ನೆ ಸಾರ್’
-‘ನಾನು ಅವರ fan ಸಾರ್’
-‘ಅವಳು ಕೈಕೊಟ್ಲು ಸಾರ್’
-‘ಈ ಆಟೊ ನಮ್ ಭಾವ ಕೊಡಿಸಿದ್ದು, ಅದಕ್ಕೆ ಅವರ ಹೆಸ್ರು ಹಾಕಿಸ್ದೆ’
ನಾನು ಓದಿ ಸಂಗ್ರಹಿಸಿದ ಕೆಲವು ಬರಹಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಓದಿ ಆನಂದಿಸಿ.
ಈ ಆಟೊ ಚಾಲಕರು ಕನ್ನಡದವರಾಗಿದ್ದರೆ ಅವರೆಲ್ಲ ಶಂಕರನಾಗರ ಅಭಿಮಾನಿಗಳು, ಇದರಲ್ಲಿ ಎರಡು ಮಾತಿಲ್ಲ (ಈಗ ಬೆಂಗಳೂರಿನಲ್ಲಿ ಬೇರೆ ಭಾಷೆಯ ಜನರೂ ಆಟೊ ಓಡಿಸುತ್ತಾರೆ). ಅವರ ಅಭಿಮಾನಿಗಳೆಂದ ಮೇಲೆ ಅವರ ಆಟೊ ಮೇಲೆ ಶಂಕರನಾಗ್ ಅವರ ಚಿತ್ರವಿದ್ದೆ ಇರುತ್ತದೆ. ಅದರ ಜೊತೆಗೆ ‘ಆಟೊ ಶಂಕರ’ ಎಂಬ ಬರಹ.
ಇನ್ನೂ ಕೆಲ ಚಾಲಕರು ಕನ್ನಡಾಭಿಮಾನಿಗಳು. ಅವರ ಬರಹಗಳನ್ನು ನೋಡಿ
- ಜೈ ಕನ್ನಡಾಂಬೆ
- ಜೈ ಕರ್ನಾಟಕ ಮಾತೆ
- IT BT ಬರಲಿ ಕನ್ನಡವು ಜೊತೆಗಿರಲಿ
- ಕನ್ನಡಿಗ
- ಕನ್ನಡದ ಕಂದ
- ಸಾಹಸಸಿಂಹ
- ಜೋಗಿ
- ಪ್ರೀತ್ಸೆ
- ಡಾ. ರಾಜ್
- ಉಪೇಂದ್ರ
- ಯಜಮಾನ
- ‘ಜೈ ಮಾರುತಿ’
- ‘ಶ್ರೀ ಅಣ್ಣಮ್ಮ ದೇವಿ’
- ‘ಕಬ್ಬಾಳಮ್ಮನ ಕೃಪೆ’
- ‘ಸ್ವಾಮಿಯೇ ಶರಣಂ ಅಯ್ಯಪ್ಪ’
- God is Great
- ‘ನೀವು ಕೊಟ್ಟದ್ದು ಬಂಕ್‌ತನಕ, ದೇವರು ಕೊಟ್ಟದ್ದು ಮನೆತನಕ’
- ‘ತಂದೆ ತಾಯಿಯ ಆಶಿರ್ವಾದ’
- ‘ಅಕ್ಕನ ಆಶಿರ್ವಾದ, ಭಾವನ ಕಾಣಿಕೆ’
- ‘ಅಣ್ಣನ ಕಾಣಿಕೆ’
- ‘ಧರ್ಮ-ಕರ್ಮ-ಸಂಯೋಗ ’
- ಕೆಳಗಿನವನ್ನು ನೋಡಿ. ಇವರು ಪ್ರೀತಿಸಿದವರು, ಪ್ರೀತಿ ಬೇಕೆನ್ನುವವರು ಇಲ್ಲಾ ಭಗ್ನ ಪ್ರೇಮಿಗಳು. ಇವರು ಬರೆಸಿದ ಬರಹಗಳು ತುಂಬಾ emotional ಆಗಿರುತ್ತವೆ. ಆಟೊ ಚಾಲಕರೆಲ್ಲಾ ಹುಡುಗರೆ ಆಗಿದ್ದರಿಂದ, ಈ ಬರಹಗಳೆಲ್ಲಾ ಹುಡುಗಿಯರ ಮೇಲೆ ಗುರಿ ಇಡುತ್ತವೆ. ಚಾಲಕರು ಹುಡುಗಿಯರಾಗಿದ್ದರೆ ಅವರೇನು ಬರೆಸುತ್ತಿದ್ದರೊ? ನೀವು ಊಹಿಸಿ ಬರೆಯಿರಿ.
- ‘ಪ್ರೀತಿಯ ಹುಡುಗ, ಮೋಸದ ಹುಡುಗಿ’
- ‘ಓ ಮಲ್ಲಿಗೆ ನೀ ಎಲ್ಲಿಗೆ’
- ‘ಮೋಸಗಾತಿ’
- love is slow poison
- ‘ನಾನು ನಿನಗಾಗಿ, ನೀನು?’
- ‘ದೇವರು ವರವನು ಕೊಟ್ರೆ, ನಾ ನಿನ್ನೆ ಕೋರುವೆ ಚೆಲುವೆ’
- ‘ಪ್ಲೀಸ್ ಪ್ರೀತ್ಸೆ’
- ‘ಪ್ರೀತ್ಸೊ ಮುನ್ನ ಯಾಚಿಸು ಚಿನ್ನ’
- ‘ನೀನಿಲ್ಲದ ನಾನು, ನೀರಿಲ್ಲದ ಮೀನು’
- ‘ಲವ್ ಓಕೆ, ಫೀಲಿಂಗ್ ಯಾಕೆ’
- ‘ಲವ್ ಮಾಡಿದ್ರೆ ಲವ್ ಸ್ಟೊರಿ, ಕೈ ಕೊಟ್ರೆ ಕ್ರೈಮ್ ಸ್ಟೋರಿ’
- ‘ನಲ್ಲೆಯ ಸಿಹಿ ನಗೆ, ನಲ್ಲನ ಫುಲ್ ಹೊಗೆ’
- ‘ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿಬ್ಯಾಡ’
- abcd ಕಲಿತ ನಾರಿ, ಪ್ರೇಮಿ ಜೊತೆ ಪರಾರಿ’
- ‘ಗೊತ್ತಲ್ಲಾ !!!’
- ‘ಏನಿವಾಗ?’
- ‘ಫ್ರೀನಾ?’
- ‘ಯಾವ್ ಕಡೆ?’
- ‘ಧಮ್ ಇದ್ರೆ ಬಾರೊ’
- ‘ಛೀ ತುಂಟಿ / ಛೀ ಕಳ್ಳಿ’
- ‘ಆರತಿಗೊಂದು ಕಿರುತಿಗೊಂದು’
- ‘ಹುಟ್ಟು ಉಚಿತ, ಸಾವು ಖಚಿತ, ಪ್ರೀತಿ ಶಾಶ್ವತ’
- ‘ಗರ್ಭಿಣಿಯರಿಗೆ ಉಚಿತ’
- ‘ಅತಿ ವೇಗ, ತಿಥಿ ಬೇಗ’











Click it and Unblock the Notifications