ನೀನು ಜೊತೆಯಾಳಿರುವ ವೇಳೆ...
- ಕೆ.ಎಸ್.ನಿಸಾರ್ ಅಹಮದ್
ಪಾಲುಗೊಳ್ಳದೆ ಮನಸು.
ಅಗಲಿದೊಡನೆ ಅಂಗಲಾಚಿ
ಕೂಗಿಕರೆವುದೆನ್ನ ಮನಸು;
ನಿನ್ನ ದನಿಯ ಜೇನ ಹನಿಗೆ
ಚಡಪಡಿಸುವುದೆನ್ನ ಮನಸು.
ನೀನು ಪರರ ಒಡವೆಯೆಂದು
ಎಚ್ಚರಿಸುವುದೆನ್ನ ಮನಸು,
ಏನೊ ಪಾಪವೆಸಗಿದಂತೆ
ಪರಿತಪಿಸುವುದೆನ್ನ ಮನಸು.
ಇಷ್ಟು ದೂರ ಬಂದ ಬಳಿಕ
ತಿರುಗಲೊಪ್ಪದೆನ್ನ ಮನಸು
ನಿನ್ನ ಸಂಗ ತೊರೆಯೆನೆಂಬ
ಪಣವ ತೊಡುತಲಿಹುದು ಮನಸು
ಪಾಪ ಪುಣ್ಯ, ಒಳಿತು ಕೆಡುಕು-
ಗುಣಿಸಲಾರದೆನ್ನ ಮನಸು.
ನಿನ್ನ ಪ್ರೇಮ ಕಲ್ಲೋಲದಿ
ಮುಳುಗಲೆಳಸುತಿಹುದು ಮನಸು
(‘ ಬಹಿರಂತರಂಗ ’ ಸಂಕಲನದಿಂದ)












Click it and Unblock the Notifications