ಚಾರ್ಲ್ಸ್‌ ಮ್ಯಾಕ್‌ಲೀನ್‌ ಎಂಬ ‘ಗುಂಡು’ ಲೇಖಕ!


ಪ್ರ : ವಿಸ್ಕಿಯನ್ನು ಒಂದು ಶಬ್ದದಲ್ಲಿ ವರ್ಣಿಸಿ

ಉ : ನನ್ನ ಗೆಳೆಯನೊಬ್ಬ ಬರೆದ ಸಾಲು ನೆನಪಾಗುತ್ತಿದೆ. ‘‘ವಿಸ್ಕಿ ರಾಷ್ಟ್ರದ ರಕ್ತವಿದ್ದಂತೆ. ವಿಸ್ಕಿಯನ್ನು ಕೊಳ್ಳುವಾಗ ನೀವು ಕೇವಲ ಮದ್ಯದ ಬಾಟಲಿಯಷ್ಟೇ ಖರೀದಿಸುತ್ತಿರುವುದಿಲ್ಲ, ಬದಲಿಗೆ ದೇಶವೊಂದರ ಸಂಸ್ಕೃತಿ, ಉನ್ನತ ಕಲೆ, ಸಂಪ್ರದಾಯ ಹಾಗೂ ಸ್ಫೂರ್ತಿ ಕೂಡ ಪಡೆಯುತ್ತೀರಿ.’’

ಪ್ರ : ವಿಸ್ಕಿಯ ಮೂಲಗಳಿರುವುದು ಸ್ಕಾಟಿಷ್‌ನಲ್ಲೋ ಅಥವಾ ಐರಿಶ್‌ನಲ್ಲೋ?

ಉ : ಅದೊಂದು ದೊಡ್ಡ ಕತೆ. ಅದರ ಮೂಲ ಐರಿಶ್‌. ಆದರೆ ಸ್ಕಾಟ್‌ಲ್ಯಾಂಡಿಗೆ ವಲಸೆ ಹೋಗಿ ಅಲ್ಲಿ ಪ್ರಬುದ್ಧವಾಯಿತು.

ಪ್ರ : ಐರಿಶ್‌, ಸ್ಕಾಟಿಷ್‌, ಕೆನಡಿಯನ್‌ ಅಥವಾ ಅಮೆರಿಕನ್‌ ವಿಸ್ಕಿ ಪೈಕಿ ಯಾವುದು ರುಚಿಯಾಗಿರುತ್ತದೆ? ಮತ್ತು ಯಾಕೆ?

ಉ : ಸ್ಕಾಟಿಷ್‌. ಯಾಕಂದ್ರೆ ಅದು ಸ್ಕಾಚ್‌, ಅತ್ಯಂತ ಸಂಕೀರ್ಣ ಆಸಕ್ತಿದಾಯಕ ಹಾಗೂ ತೃಪ್ತಿಕರವಾಗಿರುತ್ತೆ. ಆನಂತರ ಐರಿಶ್‌, ಜಾಪನೀಸ್‌, ಇಂಡಿಯನ್‌ ಮತ್ತು ರೋಮನ್‌.

ಪ್ರ : ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಜಗತ್ತಿನಲ್ಲೇ ಅತ್ಯಧಿಕ ವಿಸ್ಕಿ ಬಳಸುತ್ತೆ. ಈ ಬಗ್ಗೆ ನಿಮ್ಮ ಅನಿಸಿಕೆ?

ಉ : ಇಲ್ಲ! ಫ್ರಾನ್ಸ್‌ ಅತ್ಯಧಿಕ ವಿಸ್ಕಿ ಬಳಸುತ್ತಿರಬಹುದು. ಆಮೇಲೆ ಯುಎಸ್‌ನಂತರ ಸ್ಪೇನ್‌ಗೆ ಸ್ಥಾನ. ಆಸಕ್ತಿದಾಯಕ ವಿಚಾರವೆಂದರೆ, ಸ್ಕಾಚ್‌ ವಿಸ್ಕಿ ಭಾರತದಲ್ಲಿ ಅತ್ಯಧಿಕವಾಗಿ ಬಳಕೆಯಾಗುವುದು! ಕಳೆದ ವರ್ಷ ವಿಶ್ವಾದ್ಯಂತ 85.5ಮಿಲಿಯನ್‌ ವಿಸ್ಕಿ ಉಪಯೋಗಿಸಲಾಗಿದ್ದು, ಈ ಪೈಕಿ ಭಾರತದ್ದೇ 70ಮಿಲಿಯನ್‌ ಪಾಲು.

ಪ್ರ : ಈ ಪ್ರಶ್ನೆ ತಮಾಷೆ ಎನಿಸಬಹುದು. ಆದರೂ ಹೇಳಿ ನೀವು ಮೊದಲ ಬಾರಿಗೆ ವಿಸ್ಕಿ ರುಚಿ ನೋಡಿದ್ದು ಯಾವಾಗ?

ಉ : (ನಗುತ್ತಾ...)ನಾನು ಯಾವಾಗ ಮೊದಲ ಬಾರಿಗೆ ರುಚಿ ನೋಡಿದೆ ಎಂಬುದು ನೆನಪಿಲ್ಲ. ಆದರೆ ಮೊದಲ ಸಲ ಕುಡಿದದ್ದು ನೆನಪಿದೆ. ನಾವು ಐಲ್‌ ಎಂಬ ದ್ವೀಪದ ಬಳಿ ಇದ್ದೆವು. ಪ್ರತಿವರ್ಷದಂತೆ ನಮ್ಮ ತಂದೆ ಔತಣಕೂಟ ಏರ್ಪಡಿಸಿದ್ದರು. ನನಗೆ ಮತ್ತು ನನ್ನ ಗಳೆಯನಿಗೆ ಬಂದ ಅತಿಥಿಗಳಿಗೆ ವಿಸ್ಕಿ ಸರಬರಾಜು ಮಾಡುವಂತೆ ಹೇಳಲಾಗಿತ್ತು. ಅವರಿಗೆ ವಿಸ್ಕಿ ನೀಡುತ್ತಲೇ ಒಂದೊಂದೇ ಗುಟುಕು ಕುಡಿಯುತ್ತಾ ಹೋದೆವು. ಅದೊಂದು ಭಯಂಕರ ಅನುಭವ. ಆನಂತರ ವರ್ಷಗಳ ಕಾಲ ವಿಸ್ಕಿ ಮುಟ್ಟಲೇ ಇಲ್ಲ.

ಸ್ಕಾಟ್‌ಲ್ಯಾಂಡ್‌ನಲ್ಲಿ ಸಂಜೆ ಆರು ಗಂಟೆ ನಂತರ ಮದ್ಯ ಸೇವನೆ ಮಾಡಿದರೆ ಅದು ಕಾನೂನುಬದ್ಧ. ನಾವು ಪದ್ಧತಿಯಾಂದನ್ನು ಅನುಸರಿಕೊಂಡು ಹೋಗುತ್ತೇವೆ. ನಿಮಗೆ ಯಾರಾದರೂ ಮದ್ಯ ಕೊಡಿಸಿದರೆ, ಅವರಿಗೂ ನೀವು ಮದ್ಯ ಕೊಡಿಸುವುದು ವಾಡಿಕೆ. ನೀವೂ ಈ ಪದ್ಧತಿ ಅನುಸರಿಸಬಹುದು?

ಪ್ರ : ಭಾರತ ಎಂಬ ಪದ ನಿಮ್ಮ ಕಿವಿಗೆ ಬಿದ್ದ ತಕ್ಷಣ ನಿಮಗೆ ಏನು ನೆನಪಾಗುತ್ತೆ?

ಉ : ಟ್ರ್ಯಾಫಿಕ್‌(ಕಣ್ಣು ಮುಚ್ಚಿಕೊಳ್ಳುತ್ತಾ). ನಂಬಲಸಾಧ್ಯ! ಇಲ್ಲಿ ಜನ ಮೋಟಾರ್‌ಸೈಕಲ್‌ ಹಾಗೂ ಸೈಕಲ್‌ಗಳನ್ನು ಹೇಗೆ ಓಡಿಸ್ತಾರೋ ಎಂದು ಆಶ್ಚರ್ಯವಾಗುತ್ತೆ. ಆದರೆ ತುಂಬಾ ಮಜವಾಗಿ ಸುತ್ತುತ್ತಾರೆ. ಗಾಡಿ ಓಡಿಸಲು ಧೈರ್ಯ ಬೇಕು. ಇಷ್ಟಾಗಿಯೂ ಜಗತ್ತಿನ ಇತರ ದೇಶಗಳಿಗಿಂತ ಭಾರತದಲ್ಲಿ ಕಡಿಮೆ ಪ್ರಮಾಣದ ಅಪಘಾತಗಳು ನಡೆಯುತ್ತವೆ ಎಂದು ನನಗನಿಸುತ್ತೆ.

ಭಾರತ ನನ್ನಲ್ಲಿ ಅತ್ಯಂತ ಖುಷಿ ಉಂಟುಮಾಡುತ್ತೆ. ಆದರೆ ಅಲ್ಲಿ ನಾನು ಹೆಚ್ಚಾಗಿ ಸುತ್ತಾಡಿಲ್ಲ, ನೋಡಿಲ್ಲ.

ಪ್ರ : ಚಾರ್ಲ್ಸ್‌ ಮ್ಯಾಕ್‌ಲೀನ್‌ ಜೀವನದಲ್ಲೊಂದು ದಿನ-ಅದು ಹೇಗೆ ಇರುತ್ತೆ?

ಉ : ರೊಟೀನ್‌ಆಗಿ ಇರಲ್ಲ. ಇಂದು ಬೆಂಗಳೂರು, ನಾಳೆ ಹೈದರಾಬಾದ್‌, ನಾಡಿದ್ದು ಕೋಲ್ಕತಾ, ಆಮೇಲೆ ಗೋವಾ, ದೆಹಲಿ ಹೀಗೆ... ಈ ತಿಂಗಳು ನಾನು ಮೂರು ದಿನ ಒಂದೇ ಹಾಸಿಗೆಯಲ್ಲಿ ಮಲಗಿದ್ದೇನೆ. ಇದೂ ಕೂಡ ನನ್ನ ಮಟ್ಟಿಗೆ ಅಸಹಜ.

ಸಾಮಾನ್ಯವಾಗಿ, ಸ್ಕಾಟಿಷ್‌ ಪರ್ವತಗಳಲ್ಲಿರುವ ನನ್ನ ತೋಟದ ಮನೆ(ಫಾರ್ಮ್‌ಹೌಸ್‌)ಯಲ್ಲಿ ನಾನು ರಜಾದಿನಗಳನ್ನು ಕಳೆಯುತ್ತೇನೆ. ಬೆಳಗ್ಗೆ 7ಗಂಟೆ ಸುಮಾರು ನನ್ನ ಪುಟ್ಟ ಲ್ಯಾಬ್ರಾಡರ್‌ನೊಂದಿಗೆ, ಪರ್ವತಗಳಲ್ಲಿ 45ನಿಮಿಷ ಕಾಲ್ನಡಿಗೆ ಮಾಡುತ್ತೇನೆ. ನನ್ನ ಮಕ್ಕಳನ್ನು 8.15ಗಂಟೆ ಸುಮಾರು ಶಾಲೆಗೆ ಬಿಟ್ಟು ಬರುತ್ತೇನೆ. ಉಪಾಹಾರದ ನಂತರ ಗೆಳೆಯರೊಂದಿಗೆ ಕಾಲ ಕಳೆಯಲು ಹೊರಗೆ ಹೋಗುತ್ತೇನೆ. ಊಟದ ನಂತರ ಮಧ್ಯಾಹ್ನ 3ಗಂಟೆ ಸುಮಾರು ವಾಪಸು ಬರುತ್ತೇನೆ, ಸಂಜೆ 7ರವರೆಗೆ ಕೆಲಸ ಮಾಡುತ್ತೇನೆ. ಆಮೇಲೆ ಮನೆಯವರೆಲ್ಲ ಸೇರಿ ಮಾತಾಡುವುದು, ಒಟ್ಟಿಗೆ ಊಟಮಾಡುವುದು.

ಪ್ರ : ನಿಮ್ಮ ಭವಿಷ್ಯ ಅಥವಾ ವೃತ್ತಿ ಕುರಿತು ನಿಮ್ಮ ಕುಟುಂಬದ ಪ್ರತಿಕ್ರಿಯೆ ಏನು?

ಉ : (ಮತ್ತೆ ನಗುತ್ತಾ)ನನ್ನ ಹೆಂಡತಿ ವಿಸ್ಕಿಯನ್ನು ಮೂಸಿ ಕೂಡ ನೋಡುವುದಿಲ್ಲ. ಆಕೆ ಕಲಾವಿದೆ, ಪೇಂಟರ್‌. ಸದ್ಯಕ್ಕೆ ಆಕೆ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾಳೆ. ನಮಗೆ ಮೂರು ಗಂಡು ಮಕ್ಕಳಿವೆ. ಒಬ್ಬನಿಗೆ 8, ಇನ್ನೊಬ್ಬನಿಗೆ 13 ಹಾಗೂ ಮತ್ತೊಬ್ಬನಿಗೆ 14ವರ್ಷ.

ಪ್ರ : ಚಾರ್ಲ್ಸ್‌ ಮ್ಯಾಕ್‌ಲೀನ್‌ಗಷ್ಟೇ ಗೊತ್ತಿರುವ ಹಾಗೂ ಜಗತ್ತಿಗೆ ಗೊತ್ತಿಲ್ಲದಿರುವ ವಿಚಾರ ಸ್ವಲ್ಪ ಹೇಳಿ...

ಉ : (ಗಟ್ಟಿಯಾಗಿ ನಗುತ್ತಾ) ಮೊದಲಬಾರಿ ನಾನು ಕುಡಿದ ಅನುಭವ ಆಗಿರಬಹುದು.

ವಿಸ್ಕಿ ಇತಿಹಾಸಗಳಿಗಾಗಿ ಹುಡುಕಾಡುವ ಓರ್ವ ಬರಹಗಾರ, ತನ್ನ ವಿಷಯದಲ್ಲಿ ಪ್ರಭುತ್ವವಿರುವ ವಾಗ್ಮಿ, ಸಾಮಾನ್ಯ ಜೀವನಕ್ಕೆ ಅಚ್ಚುಕಟ್ಟಾಗಿ ಒಗ್ಗುವ ಪ್ರತಿಷ್ಠಿತ, ಮತ್ತೊಂದು ಸಾಹಸಕ್ಕೆ ಮುಂದೆ ಅಡಿಯಿಡುವವ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+