ಚಾರ್ಲ್ಸ್‌ ಮ್ಯಾಕ್‌ಲೀನ್‌ ಎಂಬ ‘ಗುಂಡು’ ಲೇಖಕ!


ಗುಂಡಿನ ಗತ್ತು-ಗಮ್ಮತ್ತು ವರ್ಣಿಸಿದ ಪತ್ರಕರ್ತ ಮತ್ತು ಲೇಖಕ ಚಾರ್ಲ್ಸ್‌ ಮ್ಯಾಕ್‌ಲೀನ್‌ ಜೊತೆ ಒಂದು ಹರಟೆ. ಇದು ಗುಂಡು ಪ್ರಿಯರಲ್ಲದವರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸ ನಮ್ಮದು.

Charles Maclean: The Man Who Knows His Whiskies Wellಸ್ಕಾಟ್‌ಲ್ಯಾಂಡ್‌ನ ಚಾರ್ಲ್ಸ್‌ ಮ್ಯಾಕ್‌ಲೀನ್‌ ಒಂದು ರೀತಿ ಭಿನ್ನ ವ್ಯಕ್ತಿ. ವಿಸ್ಕಿ ಹಾಗೂ ಜೀವನದ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿರುವ ನಿಪುಣ. ವಿಸ್ಕಿಗೆ ಸಂಬಂಧಿಸಿದ ಜಗತ್ತಿನ ವಿವಿಧ ಪತ್ರಿಕೆಗಳಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಎಂ.ಎ., ಎಲ್‌ಎಲ್‌.ಬಿ., ಡಬ್ಲ್ಯೂ.ಎಸ್‌., ಎಫ್‌.ಎಸ್‌.ಎ.,(ಸ್ಕಾಟ್‌ಲ್ಯಾಂಡ್‌) ಪದವೀಧರರಾಗಿರುವ ಮ್ಯಾಕ್‌ಲೀನ್‌, ವಿಸ್ಕಿ ಮ್ಯಾಗಜೀನ್‌ ಪತ್ರಿಕೆಯ ಸಂಸ್ಥಾಪಕ ಸಂಪಾದಕರು. ತಮ್ಮ ವಕೀಲಿ ವೃತ್ತಿ ತ್ಯಜಿಸಿ, ಮ್ಯಾಕ್‌ಲೀನ್‌ 1981ರಲ್ಲಿ ವಿಸ್ಕಿ ಕುರಿತು ಬರೆಯಲು ಆರಂಭಿಸಿದರು. ಇಲ್ಲಿಯತನಕ ಒಟ್ಟು ಎಂಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳ ಪೈಕಿ ಮ್ಯಾಕ್‌ಲೀನ್ಸ್‌ ಮಿಸೆಲನಿ ಆಫ್‌ ವಿಸ್ಕಿ, ಸ್ಕಾಚ್‌ ವಿಸ್ಕಿ : ಎ ಲಿಕ್ವಿಡ್‌ ಹಿಸ್ಟರಿ, ಮಾಲ್ಟ್‌ ವಿಸ್ಕಿ, ದಿ ಪಾಕೆಟ್‌ ಗೈಡ್‌ ಟು ಸ್ಕಾಚ್‌ ವಿಸ್ಕಿ ಎಂಬ ಪುಸ್ತಕಗಳು ಭಾರೀ ಜನಪ್ರಿಯವಾಗಿವೆ.

ಮ್ಯಾಕ್‌ಲೀನ್‌ ಅವರು, ತಮಗೆ ಎದುರಾಗುವ ಯಾರೊಂದಿಗೂ ಮುಗುಳುನಗೆ ಬೀರುತ್ತಾ ಬೆರೆಯುತ್ತಾರೆ. ಅವರೊಂದಿಗೆ ಮಧುಪಾನ ಮಾಡುತ್ತಾ, ಜೊತೆಗೆ ಸಿಗರೇಟನ್ನೂ ಸೇದುತ್ತಾರೆ. ಒಂದೊಂದೋ ಗುಟುಕು ಹೀರುತ್ತಾ ಆ ಕ್ಷಣಗಳಿಗೆ ಧನ್ಯವಾದ ಹೇಳುತ್ತಾರೆ. ಬನ್ನಿ ಅವರೊಡನೆ ನಾಲ್ಕು ಮಾತಾಡೋಣ...

ಪ್ರಶ್ನೆ : ನೀವು ವಕೀಲಿ ವೃತ್ತಿ ತ್ಯಜಿಸಿ ಸ್ಕಾಚ್‌ ಬಗ್ಗೆ ಬರೆಯಲು ಶುರು ಮಾಡಿದವರು. ನೀವು ಹೀಗೆ ಮಾಡಲು, ನಿಮ್ಮನ್ನು ಆಕರ್ಷಿಸಿದ ಸಂಗತಿ ಯಾವುದು?

ಉತ್ತರ : ಇಲ್ಲ. ವಕೀಲನಾಗುವುದಕ್ಕಿಂತ ಮೊದಲು ನಾನೊಬ್ಬ ಕಲಾವಿದನಾಗಿದ್ದೆ. ಮೂರು ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಕೂಡ ಮಾಡಿದ್ದೇನೆ. ವಕೀಲಿ ವೃತ್ತಿಯಿಂದ ನಾನು ಸಂತುಷ್ಟನಾಗಲಿಲ್ಲ. ಹಾಗಾಗಿ, ಬರಹಗಾರಿಕೆ ಆಯ್ದುಕೊಂಡೆ. ಆರಂಭದಲ್ಲಿ ಸ್ಕಾಟ್‌ಲ್ಯಾಂಡ್‌ ಇತಿಹಾಸ, ಪ್ರವಾಸ ಹಾಗೂ ವಾಣಿಜ್ಯ-ಉದ್ಯಮಗಳಿಗೆ ಸಂಬಂಧಿಸಿದ್ದನ್ನು ಬರೆದೆ. ಅದೇ ನನ್ನ ಬರಹಗಾರಿಕೆಗೆ ತಿರುವು ನೀಡಿದ್ದು, ಆನಂತರ ವಿಸ್ಕಿ ಬರಹ ಆರಂಭಿಸಿದೆ. ಸದ್ಯಕ್ಕೆ ಟಿವಿ ವೆಬ್‌ ಚಾನಲ್‌ ಸಿಂಗಲ್‌ಮಾಲ್ಟ್‌ ಡಾಟ್‌ ಟಿವಿ ಪ್ರಸಾರ ಮಾಡುವುದರಲ್ಲಿ ಉತ್ಸುಕನಾಗಿದ್ದೇನೆ.

ಪ್ರ : ನೀವು ಈ ವೃತ್ತಿ ಆಯ್ದುಕೊಂಡಾಗ, ಆರಂಭದಲ್ಲಿ ತೊಡಕು-ತೊಂದರೆಗಳನ್ನು ಎದುರಿಸಬೇಕಾಯ್ತಾ?

ಉ : ಖಂಡಿತ...! ಒಬ್ಬ ಬರಹಗಾರನಾಗಿ ಇದನ್ನು ಆರಂಭಿಸುವುದು ನನಗೆ ಕಷ್ಟವೇ ಆಗಿತ್ತು. ಇದನ್ನು ವಾಣಿಜ್ಯೀಕರಿಸಲು ಉದ್ಯಮಗಳಿಗೆ ವಾಣಿಜ್ಯ ಪ್ರತಿ, ಇತಿಹಾಸ ಹಾಗೂ ಪ್ರವಾಸ ಕಥನಗಳನ್ನು ಬರೆಯಲು ಶುರುಮಾಡಿದೆ.

ಪ್ರ : ನಿಮ್ಮ ನೆಚ್ಚಿನ ಲೇಖಕ ಯಾರು?

ಉ : ನನ್ನ ನೆಚ್ಚಿನ ಲೇಖಕನಾರು...!? ವಿಲಿಯಂ ಡನ್‌ರೋಪ್‌ನ ಬರಹಗಳನ್ನು ಓದುವುದು ಇಷ್ಟ. ಆತ ಭಾರತದವನಾಗಿದ್ದು, ನನ್ನ ಅತ್ಯುತ್ತಮ ಗೆಳೆಯ. ಭಾರತೀಯ ಬಂಡಾಯದ ಬಗ್ಗೆ ಆತ ಬರೆದ ವೈಟ್‌ ಮಂಗೂಸ್‌ (ಬಿಳಿ ಮುಂಗುಸಿ) ನನಗೆ ಅಚ್ಚುಮೆಚ್ಚು. ಆತನ ಏಜ್‌ ಆಫ್‌ ಕಾಳಿ ತುಂಬಾ ಸೊಗಸಾಗಿದೆ. ಆಮೇಲೆ ಅಲೆಕ್ಸಾಂಡರ್‌ ಗೋಲ್ಡ್‌ಸ್ಮಿತ್‌ ಹಾಗೂ ವಿಕ್ರಮ್‌ ಟಂಡನ್‌ ಬರಹಗಳು ಇಷ್ಟವಾಗುತ್ತವೆ.

ಪ್ರ : ಇತಿಹಾಸದ ಬಗ್ಗೆ ಇಷ್ಟೆಲ್ಲ ಮಾಹಿತಿ ಹೇಗೆ ಕಲೆಹಾಕುತ್ತೀರಿ?

ಉ : ಹೆಚ್ಚು ಓದುತ್ತೇನೆ ಅಷ್ಟೆ. ಇದು ಒಂದು ರೀತಿಯ ಮಾಹಿತಿ ಸಂಚಯ. ನನ್ನಲ್ಲಿ ಅತ್ಯುತ್ತಮ ಪುಸ್ತಕ ಸಂಗ್ರಹ ಹಾಗೂ ವಿಸ್ಕಿ ಕುರಿತ ದಾಖಲೆಗಳು ಇವೆ. ವಿಸ್ಕಿ ಕುರಿತು ಮಾಹಿತಿಗಾಗಿ ನಾನು 17ನೇ ಶತಮಾನದತ್ತ ನೋಟ ಬೀರುತ್ತೇನೆ. ಸಾಮಾನ್ಯವಾಗಿ ಒಂದು ಕೆಲಸ ಪೂರ್ಣಗೊಳಿಸಲು ನಾಲ್ಕರಿಂದ ಐದು ವರ್ಷ ತೆಗೆದುಕೊಳ್ಳುತ್ತೇನೆ. ಪ್ರವಾಸಿಗರ ಅನುಭವಗಳನ್ನು ಕೂಡ ನನ್ನ ಬರಹಗಳಲ್ಲಿ ಕಾಣಿಸುತ್ತೇನೆ. ಪ್ರಯಾಣ ಕಾಲದಲ್ಲಿ ಅನೇಕ ಜನರೊಂದಿಗೆ ಮಾತಾಡುತ್ತೇನೆ. ಏನೇ ಇರಲಿ, ಇನ್ನೂ ನಾನು ವಿಸ್ಕಿ ಕುರಿತೇ ಕೆಲಸ ಮಾಡುತ್ತಿದ್ದೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+