ಎಫ್‌ಟಿಐಐಗೆ ಅನಂತಮೂರ್ತಿ
ನವದೆಹಲಿ : ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿ ಪ್ರೊ.ಯು.ಆರ್.ಅನಂತಮೂರ್ತಿ ಅವರು ಪುಣೆಯ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್(ಎಫ್‌ಟಿಐಐ) ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ಇವರ ಅಧಿಕಾರಾವಧಿ ಮಾರ್ಚ್ 4ರಿಂದ ಆರಂಭವಾಗಿದ್ದು, ಮೂರು ವರ್ಷಗಳ ಅವಧಿಯವರೆಗೆ ಇರುತ್ತದೆ. ನಟಿ ಶಬಾನಾ ಆಜ್ಮಿ, ನಟರಾದ ಟಾಮ್ ಆಲ್ಟರ್ ಹಾಗೂ ಡ್ಯಾನಿ ಡೆನ್‌ರೆkೂೕಗ್ಪಾ, ರಂಗಭೂಮಿ ಕಲಾವಿದರಾದ ಮೈಕ್ ಪಾಂಡೆ, ಬಾಬಿ ಬೇಡಿ, ಜಬ್ಬಾರ್ ಪಟೇಲ್, ಸಾಮಾಜಿಕ ಕಾರ್ಯಕರ್ತೆ ನಫೀಸಾ ಅಲಿ ಹಾಗೂ ಅರುಣಾ ವಾಸುದೇವ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಪುನಾರಚಿಸಲಾಗಿರುವ ಸಂಸ್ಥೆಯಲ್ಲಿ ಎ.ಕೆ.ಶ್ರೀವಾಸ್ತವ, ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಕೆ.ರಾಜೀವ್‌ಕುಮಾರ್, ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ನವತೇಜ್‌ಸಿಂಗ್ ಸರ್ನಾ ಕೂಡ ಇದ್ದಾರೆ.
(ಏಜನ್ಸೀಸ್)












Click it and Unblock the Notifications