ಯಾರ್ಯಾರ ಗ್ರಹಚಾರ ಹೇಗೇಗಿದೆ?

  • ಸುಳ್ಳು ಸುಳ್ಳುಶಾಸ್ತ್ರಿ
ಮೇಷ : ಧನಯೋಗವಿದೆ. ಹಾಗಂತ ನೀವು ಕೈಕಟ್ಟಿ ಕೂತರೇ ಆಗೋದಿಲ್ಲ. ಯಾರದಾದರೂ ತಲೆ ಹೊಡೆಯಲೇ ಬೇಕು ಅಥವಾ ಸೌಂಡ್‌ ಪಾರ್ಟಿಯಾಗಿರೋ ಹುಡುಗಿಗೆ ಡವ್‌ ಹೊಡೆದು ಮದುವೆಯಾಗಿ ಬಿಡಿ. ಅದೆಲ್ಲಾ ಕಷ್ಟ ಅನ್ನಿಸಿದರೇ ಯಾರನ್ನಾದರೂ ಕಿಡ್ನಾಫ್‌ ಮಾಡಿ. ರಾಜಯೋಗ ಬಂದಾಗ ನೀವು ಕಾರ್ಯಪ್ರವೃತ್ತರಾಗದಿದ್ರೆ ಬದುಕಿಡೀ ಪಶ್ಚತ್ತಾಪ ಅನುಭವಿಸಬೇಕಾಗುತ್ತೆ !

ಅದೃಷ್ಟ ಸಂಖ್ಯೆ -100, ಶುಭದಿನ -ವಾರದ ಎಲ್ಲಾ ದಿನ.

ವೃಷಭ : ವಿದ್ಯೆ ನೈವೇದ್ಯಆಗಿದೆ. ಆದರೂ ನಿಮಗೆ ಯಾಕೆ ಓದೋ ಹುಚ್ಚು? ನೇರವಾಗಿ ಸರಸ್ವತಿಬರೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಕಳ್ಳ ಬಾಗಿಲಲ್ಲಿ ಪ್ರಯತ್ನಿಸಿ. ಪರೀಕ್ಷೆ ಬರೆಯೋದನ್ನು ಯೋಚಿಸಲೇಬೇಡಿ. ಯಾರನ್ನಾದರೂ ಸರಿಯಾದ ಪಾರ್ಟಿಯನ್ನು ಹಿಡಿದು ರೇಟ್‌ ಫಿಕ್ಸ್‌ ಮಾಡಿ, ಮಾಕ್ಸ್‌ಕಾರ್ಡ್‌ನ ಖರೀದಿಗೆ ಪ್ರಯತ್ನಿಸಿ.

ಅದೃಷ್ಟ ಸಂಖ್ಯೆ -000, ಶುಭದಿನ- ಒಂದೂ ಇಲ್ಲ.

ಮಿಥುನ : ಸಿಡುಕುವುದರಿಂದ ನಿಮಗೆ ಸಾಕಷ್ಟು ಲಾಭಗಳಿವೆ. ಜನರು ನಿಮಗೆ ಗೌರವ ಕೊಡುತ್ತಾರೆ. ವಿಶೇಷವಾಗಿ ಮನೆಗೆ ಬರೋ ನೆಂಟರ ಸಂಖ್ಯೆ ಕಡಿಮೆಯಾಗಲಿದೆ. ಹೆಂಡತಿ ನಿಮ್ಮ ಕೆಂಡದಂತಹ ಮುಖ ನೋಡಿ, ಸೀರೆಗೀರೆ ಎಂದು ತಲೆ ತಿನ್ನೋದಿಲ್ಲ. ಮಕ್ಕಳು, ಚಾಕ್ಲೆಟ್‌-ಬಿಸ್ಕೆಟ್‌ ಅಂಥ ಪೀಡಿಸೋದಿಲ್ಲ.

ಅದೃಷ್ಟ ಸಂಖ್ಯೆ -ಹಾಗಂದ್ರೆ ಏನು?, ಶುಭದಿನ -ಮಂಗಳವಾರ

ಕರ್ಕಾಟಕ : ಫೋನ್‌ ಮೂಲಕ ಸುನಾಮಿ ಪ್ರವೇಶಿಸಲಿದೆ ಜಾಗೃತರಾಗಿರಿ! ನಿಮ್ಮ ಪ್ರೀತಿಯ ಹುಡುಗಿಗೆ ಈಗ ಮೂರು ತಿಂಗಳು. ನಿಮ್ಮನ್ನು ದೇವರೂ ಸಹಾ ಕಾಪಾಡೋ ಸ್ಥಿತಿಯಲ್ಲಿಲ್ಲ! ಮಹಿಳೆಯರಿಗೆ ಕೆಟ್ಟ ಸುದ್ದಿ. ನಿಮ್ಮ ಗುಟ್ಟುಗಳು ನಿಮ್ಮ ಗಂಡನಿಗೆ ಗೊತ್ತಾಗಲಿದೆ.

ಅದೃಷ್ಟ ಸಂಖ್ಯೆ -111, ಶುಭದಿನ -ಅದರ ಆಸೆ ಬಿಡಿ.

ಸಿಂಹ : ಪುರುಷರಿಗೆ ವಿವಾಹದ ಗಂಡಾಂತರವಿದೆ. ಹುಲಿ ಇಲಿಯಾಗುವ ದಿನಗಳನ್ನು ಎದುರಿಸಲು ಸಜ್ಜಾಗಿ. ಮದುವೆಯಾಗುವುದಕ್ಕಿಂತಲೂ ಬಾವಿಗೆ ಹಾರೋದೇ ಸುಲಭ ಅನ್ನಿಸೋದಾದ್ರೆ ನಿಮ್ಮ ನಿರ್ಣಯ ಸರಿಯಾಗಿದೆ.

ಮಹಿಳೆಯರಿಗೆ ಅದೃಷ್ಟದ ದಿನಗಳು. ಅವು ಮುಗಿಯುವ ಮೊದಲೇ ಯಾರನ್ನಾದರೂ ಬಕ್ರನಾ ಕಟ್ಟಿಕೊಳ್ಳಿ.

ಅದೃಷ್ಟ ಸಂಖ್ಯೆ -1001, ಶುಭದಿನ -ಕಾದು ನೋಡಿ.

ಕನ್ಯಾ : ಬಹಳ ದಿನಗಳಿಂದಲೂ ನಾಯಿ ಸಾಕಬೇಕು ಅನ್ನೋ ಬಯಕೆ ಈಗ ಫಲಿಸಲಿದೆ. ಅಂದ್ರೆ ನಿಮಗೆ ಟೂ-ಇನ್‌-ಒನ್‌ ನಾಯಿ ಸಿಕ್ತಾಯಿದೆ! ಹೌದು ಹೆಣ್ಣುಮಕ್ಕಳಿಗೆ ಮದುವೆಯೋಗವಿದೆ. ಡೈವರ್ಸ್‌ ಯೋಗ ಸಹಾ...

ಅದೃಷ್ಟ ಸಂಖ್ಯೆ -501, ಶುಭದಿನ -ಶುಕ್ರವಾರ

ತುಲಾ : ನಿಮಗೆ ಟಿ.ವಿಯಲ್ಲಿ ಕಾಣಿಸೋ ಯೋಗವಿದೆ. ಬಹುಶಃ, ಕ್ರೆೃಂಡೈರಿ ಅಥವಾ ಕುರಿಗಳು ಸಾರ್‌ ಕಾರ್ಯಕ್ರಮದಲ್ಲೋ ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ.

ಅದೃಷ್ಟ ಸಂಖ್ಯೆ-0000000000, ಶುಭದಿನ-ನಿಮಗೆ ಗೊತ್ತಲ್ಲ!

ವೃಶ್ಚಿಕ : ಬಾಸ್‌ಗೆ ನಿಮ್ಮ ಕರ್ತವ್ಯ ಪ್ರಜ್ಞೆ ತುಂಬಾ ಇಷ್ಟವಾಗಿದೆ. ಮತ್ತಷ್ಟು ಇಷ್ಟವಾಗಲಿದೆ. ಮಾಮೂಲಿನ ಹತ್ತುಗಂಟೆ ಜೊತೆಯಲ್ಲಿ, ಇನ್ನೂ ನಾಲ್ಕು ಗಂಟೆಯ ಕೆಲಸದ ಹೊರೆ ನಿಮ್ಮ ಮೇಲೆ ಬೀಳಲಿದೆ. ಭಾನುವಾರವೂ ಕೆಲಸಮಾಡಬೇಕಾದ ಪರಿಸ್ಥಿತಿ ಬರಬಹುದು. ಯಾವುದಕ್ಕೂ ರೆಡಿಯಾಗಿರಿ.

ಅದೃಷ್ಟ ಸಂಖ್ಯೆ -3333, ಶುಭದಿನ -ಎಲ್ಲವೂ ಮುಗಿದಿವೆ.

ಮಕರ : ಇನ್ನು ಮುಂದೆಯಾದ್ರೂ ನೀವು ನಗೋದನ್ನ ಕಲಿತರೆ, ಬಾಳು ಬಂಗಾರವಾಗುತ್ತೆ. ಇಲ್ಲದಿದ್ರೆ ಹೆಣಭಾರವಾಗುತ್ತೆ. ಬದುಕಿದ್ದಾಗಲೇ ನಗ್ರಿ, ಸತ್ತಮೇಲೆ ನಗೋದಕ್ಕೆ ಆಗೋದಿಲ್ಲ(ಬಾಯಲ್ಲಿ ಅಕ್ಕಿಕಾಳು ತುಂಬಿರ್ತಾರೆ!).

ಅದೃಷ್ಟ ಸಂಖ್ಯೆ -999, ಶುಭದಿನ -ಎಲ್ಲಾ ನಿಮ್ಮ ಕೈಯಲ್ಲೇ ಇದೆ.

ಧನು : ಈ ವಾರ ಅನಾರೋಗ್ಯ ಸಾಮಾನ್ಯ ಬಿಡಿ. ನಿಮ್ಮ ಕೆಮ್ಮನ್ನು ನೆವಮಾಡಿಕೊಂಡು, ನರ್ಸಿಂಗ್‌ ಹೋಮ್‌ನವರು ಸಾವಿರಗಟ್ಟಲೇ ಬಿಲ್‌ ಮಾಡ್ತಾರೆ. ನೀವು ಪಾರಾಗಲು ಸಾಧ್ಯವೇ ಇಲ್ಲ. ಆದರೂ ನಿಮ್ಮ ಕೆಮ್ಮು ನಿಲ್ಲೋದಿಲ್ಲ. ಮನೆಯಲ್ಲಿರೋ ಮೆಣಸು, ಅಥವಾ ಇಂಗ್ಲೀಷ್‌ ಟಾನಿಕನ್ನು ಪ್ರಯೋಗಿಸಿ ನೋಡಿ?

ಅದೃಷ್ಟ ಸಂಖ್ಯೆ -0, ಶುಭದಿನ -ವೈದ್ಯರಿಂದ ದೂರವಿದ್ದ ದಿನ

ಕುಂಭ : ನೀವು ಬಿಸ್ಕೆಟ್‌ ಹಾಕುತ್ತಿದ್ದ ಹುಡುಗಿ/ಹುಡುಗ ನಿಮಗೆ ಒಲಿಯುತ್ತಾರೆ. ಯಾವುದಕ್ಕೂ ಒಮ್ಮೆ ಅವರ ಗಂಡ/ಹೆಂಡತಿಯ ಅನುಮತಿ ಪಡೆದರೆ ಸೂಕ್ತ.

ಮೀನ : ನಿದ್ರೆಯಲ್ಲಿ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸಿ. ನಿದ್ರೆಯಲ್ಲಿಯೇ ಸುಖವಿದೆ. ನಿದ್ರೆಯಲ್ಲೂ ನಿಮ್ಮ ಹೆಂಡತಿ ಪ್ರಾಣ ಹಿಂಡಿದ್ರೆ ನಿಮ್ಮ ದುರಾದೃಷ್ಟ. ನಿಮ್ಮ ಗಂಡನ ಜೊತೆ ಹೆಣಗಿಹೆಣಗಿ ಸಾಕಾಗಿದೆಯೇ, ಪೋಲಿಸ್‌ಗೊಂದು ಕಂಪ್ಲೆಂಟ್‌ ಕೊಡಿ.

ಅದೃಷ್ಟ ಸಂಖ್ಯೆ -333, ಶುಭದಿನ -ವಾರದ ಎಂಟನೇ ದಿನ

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+