• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಿಗರ ಹೆಮ್ಮೆಯ ‘ಹಂಪಿ ವಿವಿ’

By Super
|

ಬಳ್ಳಾರಿ: ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಚ್‌.ಜೆ.ಲಕ್ಕಪ್ಪ ಗೌಡರ ಯಶಸ್ವೀ ಇನಿಂಗ್ಸ್‌ ಮುಂದಿದೆ. ಅವರು ಶನಿವಾರ (ಮಾರ್ಚ್‌ 7) ಡಾ. ಕೆ.ವಿ ನಾರಾಯಣ್‌ ಅವರಿಗೆ ತಮ್ಮ ಉತ್ತರಾಧಿಕಾರವನ್ನು ಒಪ್ಪಿಸಿದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿವಿಗೆ ಹೊಸ ಕುಲಪತಿಗಳನ್ನು ನೇಮಿಸಲಾಗಿಲ್ಲ . ಹೊಸ ಕುಲಪತಿಗಳ ನೇಮಕಾತಿ ಆಗುವವರೆಗೂ ಕೆ.ವಿ.ನಾರಾಯಣ ಅವರು ಕುಲಪತಿಗಳ ಕಾರ್ಯಭಾರ ನಿರ್ವಹಿಸುವರು.

ಡಾ. ಲಕ್ಕಪ್ಪ ಗೌಡರ ಕಾಲಾವಧಿಯಲ್ಲಿ ಹಂಪಿ ವಿವಿ ತನ್ನ ಚಟುವಟಿಕೆಗಳ ಸಾಧ್ಯತೆಗಳನ್ನು ಹೆಚ್ಚಿಸಿಕೊಂಡಿದೆ. ಸ್ವತಃ ಜಾನಪದ ಪರಿಣತರಾದ ಲಕ್ಕಪ್ಪಗೌಡರ ವಿವಿಗೆ ನೀಡಿದ ಕೊಡುಗೆಗಳಲ್ಲಿ ಜಾನಪದ ಲೋಕ (ಜನಪದಕ್ಕೆ ಸಂಬಂಧಿಸಿದ ವಸ್ತು ಸಂಗ್ರಹಾಲಯ) ಮತ್ತು ನವೀಕೃತ ಗ್ರಂಥಾಲಯ ಬಹು ಮುಖ್ಯವಾದುದಾಗಿದೆ.

ಲಕ್ಕಪ್ಪ ಗೌಡರ ನೇತೃತ್ವದಲ್ಲಿದ್ದ ವಿಶ್ವವಿದ್ಯಾಲಯ ಸಾಂಸ್ಕೃತಿಕ ವಿಶ್ವವಿದ್ಯಾಲಯವಾಗಿಬಿಟ್ಟಿದೆ. ಹಂಪಿ (ಕಮಲಾಪುರ) ವಿಶ್ವವಿದ್ಯಾಲಯಕ್ಕೆ ಭೇಟಿಯಿತ್ತ ನ್ಯಾಕ್‌ ಕಮಿಟಿಯು(ಯುಜಿಸಿ) ಅಲ್ಲಿನ ಬೆಳವಣಿಗೆ ಮತ್ತು ಸಾಂಸ್ಕೃತಿಕ ರೂಪುರೇಷೆಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದೆ. ನ್ಯಾಕ್‌ ಬಿ++(85%) ದರ್ಜೆ ವಿಶ್ವವಿದ್ಯಾಲಯಕ್ಕೆ ದೊರೆತಿದೆ. ವಿಶ್ವವಿದ್ಯಾಲಯವು ಭೇಟಿಯಿತ್ತ ಪ್ರತಿಯಾಬ್ಬ ತಜ್ಞರ ಪ್ರಶಂಸೆಗೂ ಪಾತ್ರವಾಗಿದೆ.

13 ವರ್ಷಗಳ ಹಿಂದೆ, ಕಮಲಾಪುರ ಮತ್ತು ಪಪಿನಾಯಕನ ಹಳ್ಳಿಗಳ ನಡುವಿನ 600 ಎಕರೆಗಳ ಜಾಗದಲ್ಲಿ ಪ್ರಾರಂಭವಾದ ಕನ್ನಡ ವಿವಿ , ಡಾ. ಚಂದ್ರಶೇಖರ ಕಂಬಾರರ(ಸ್ಥಾಪಕ ಕುಲಪತಿ) ಕ್ರಿಯಾದಕ್ಷತೆಯಲ್ಲಿ ಅಲ್ಪಾವಧಿಯಲ್ಲೇ ತನ್ನ ಚಟುವಟಿಕೆಗಳ ಮೂಲಕ ನಾಡಿನ ಗಮನ ಸೆಳೆದಿತ್ತು . ಹಂಪಿ ವಿಶ್ವವಿದ್ಯಾಲಯದ ಆವರಣ ಮತ್ತು ಕಟ್ಟಡಗಳು ವಿಜಯನಗರ ಸಾಮ್ರಾಜ್ಯದ ್ಫಸೆಳಕನ್ನು ಕಣ್ಣೆದುರು ತಂದಿರಿಸುವಂತಿವೆ.

ಇತ್ತೀಚೆಗೆ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ , ಡಾ. ಚಂದ್ರಶೇಖರ್‌ ಕಂಬಾರರಿಗೆ ನಾಡೋಜ ಪ್ರಶಸ್ತಿ ಪ್ರದಾನ ಮಾಡಿ ಕಂಬಾರರ ಕ್ರಿಯಾಶೀಲತೆಯನ್ನು ಕೊಂಡಾಡಿದ್ದರು.

ಕನ್ನಡ ಮತ್ತು ಸಂಸ್ಕೃತಿಯ ಸರ್ವತೋಮುಖ ಬೆಳವಣಿಗೆಯ ಕಾರ್ಯದಲ್ಲಿ ಕನ್ನಡ ವಿವಿ ತೊಡಗಿದೆ. ಕನ್ನಡದ ಬಗೆಗಿನ ಪ್ರತಿಯಾಂದೂ ಮಾಹಿತಿ, ವಿಷಯಗಳು ಇಲ್ಲಿ ದೊರಕುತ್ತದೆ. ಒಟ್ಟು 16 ಅಧ್ಯಯನ ಕೇಂದ್ರಗಳಿದ್ದು ಗತಕಾಲದ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವಂಥಹ ನೂರಾರು ಪುಸ್ತಕಗಳನ್ನು ವಿವಿ ಹೊರ ತಂದಿದೆ. ವಿಶ್ವಕೋಶಗಳು, ವಿಜ್ಞಾನ ಸಂಪುಟಗಳು, ವೈದ್ಯಕೀಯ ವಿಶ್ವಕೋಶಗಳ್ನು ಮತ್ತು ಕನ್ನಡ ಶಾಸನಗಳು ವಿವಿ ಪ್ರಕಟಣೆಯಲ್ಲಿ ಸೇರಿವೆ. ಜಾನಪದರು ಹಾಗೂ ಬುಡಕಟ್ಟು ಜನಾಂಗಗಳ ಮೇಲೆ ಮಹತ್ವದ ಸಂಶೋಧನೆ ಇಲ್ಲಿ ನಡೆಯುತ್ತಿದೆ. ಬಾದಾಮಿಯಲ್ಲಿ ಗುಡಿ ಕೈಗಾರಿಕೆಗಳ ಶಾಲೆಗಳನ್ನು ವಿವಿ ವತಿಯಿಂದ ಪ್ರಾರಂಭಿಸಲಾಗಿದೆ.

20 ವಿಷಯಗಳ ಮೇಲೆ ಡಿಪ್ಲೊಮಾ ಕೋರ್ಸುಗಳು, ಕನ್ನಡ, ತೆಲಗು ಮತ್ತು ತಮಿಳು ಭಾಷೆಗಳ ಸರ್ಟಿಫಿಕೇಟ್‌ ಕೋರ್ಸುಗಳು, ಸಂಗೀತ ಕೋರ್ಸುಗಳು ಈಗಾಗಲೇ ನಡೆಯುತ್ತಿವೆ. ಕಳೆದ 10 ವರ್ಷಗಳಿಂದ 750 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಮುಂದಿನ ಮಾರ್ಚ್‌ ತಿಂಗಳೊಳಗಾಗಿ ಇನ್ನೂ 100 ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ ಎಂದು ವಿವಿ ಮೂಲಗಳು ತಿಳಿಸಿವೆ.

ಕುವೆಂಪುರವರ ಜನ್ಮಸ್ಥಳದಲ್ಲಿ ಹಂಪಿ ವಿವಿ ರಾಷ್ಟ್ರಕವಿ ಕುವೆಂಪು ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿದೆ. ಸಾಗರ, ಬೆಂಗಳೂರು ಮತ್ತು ಬೀದರ್‌ಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ಪ್ರಾರಂಭಿಸಿದ್ದು, ವಿಶ್ವವಿದ್ಯಾಲದ ಮಾರ್ಗದರ್ಶನದಡಿಯಲ್ಲಿ ಅವುಗಳು ನಡೆಯುತ್ತವೆ ಎಂದು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಲಕ್ಕಪ್ಪ ಗೌಡ ತಿಳಿಸಿದ್ದಾರೆ.

ಲಕ್ಕಪ್ಪಗೌಡರಿಗೆ ಅಭಿನಂದನೆಗಳು ಹಾಗೂ ಅವರ ಮುಂದಿನ ದಿನಗಳಿಗೆ ಶುಭಾಶಯಗಳು.

ಕನ್ನಡ ವಿಶ್ವ ವಿದ್ಯಾಲಯ ಕನ್ನಡಿಗರೆಲ್ಲರ ಹೆಮ್ಮೆಯ ಪ್ರಾತಿನಿಧಿಕ ಕೇಂದ್ರವಾಗಿದೆ,

English summary
Kannada University ViceChancellor Dr.Lakkappa Gowda handed over charge to registrar Dr.K.V.Narayan at Hampi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X