Get Updates
Get notified of breaking news, exclusive insights, and must-see stories!

ಕನ್ನಡ ಸಾಹಿತ್ಯ.ಕಾಂ ಬೆಂಬಲಿಗರ ‘ಸಮಕ್ಷಮ’

  • ಇನ್‌ಸೈಡ್‌ ಇನ್ಫೋ
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಬೆಂಗಳೂರಿನ ಸದಸ್ಯರ ‘ಸಮಕ್ಷಮ’ದ ತುಣುಕುಗಳು

Kannadasaahithya.com logoಬೆಂಗಳೂರಿನಲ್ಲಿ ನಡೆದ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ‘ಸಮಕ್ಷಮ’ ದ ಬಗ್ಗೆ ಬಹಳ ಜನ ಕಾತರರಾಗಿರುವುದರಿಂದ, ಕೆಲವು ತುಣುಕನ್ನು ಇಲ್ಲಿ ತಿಳಿಸುತ್ತಿದ್ದೇನೆ.

ಸಭೆಯ ವಿವರ
ದಿನಾಂಕ : 10ನೇ ಆಗಸ್ಟ್‌ 2003
ವೇಳೆ : 10.45 ರಿಂದ 2.50 ರ ವರೆಗೆ
ಸ್ಥಳ : ನ್ಯಾಷನಲ್‌ ಕಾಲೇಜು, ಬಸವನಗುಡಿ, ಬೆಂಗಳೂರು
ಹಾಜರಾತಿ : 20 ಕ್ಕೊ ಹೆಚ್ಚು.

ಸಭೆಯ ಮುಖ್ಯಾಂಶಗಳು :

1. ಹೊಸ ಆತ್ಮ-ವಿಶ್ವಾಸ: ಕನ್ನಡಸಾಹಿತ್ಯ.ಕಾಂಗೆ ಹೊಸ ಆತ್ಮ-ವಿಶ್ವಾಸವನ್ನು ತಂದುಕೊಟ್ಟ ಸಭೆ ಇದಾಗಿತ್ತು. ಬಹುಶಃ ಬೆಂಗಳೂರಿನಲ್ಲಿ ಕಸಾಕಾಂನ ಬೆಂಬಲಕ್ಕೆ ಹಿಂದೆಂದೂ ಇಷ್ಟು ಜನ ಸೇರಿದ್ದಿಲ್ಲ. ಎಲ್ಲರ ಅಭಿಪ್ರಾಯ ಒಂದೆ - ಕಸಾಕಾಂ ನಿಲ್ಲಬಾರದು. ಅದು ನಡೆಯಬೇಕು. ನದಿ ಉದ್ಭವವಾಗಿದೆ. ಅದು ನಿಲ್ಲಬಾರದು, ನಿಲ್ಲಲಾಗದು. ಶೇಖರ್‌ಪೂರ್ಣ ರವರು ಪ್ರಸ್ತುತ ಸ್ಥಿತಿ-ಗತಿ ಬಗ್ಗೆ ಹೇಳುತ್ತಾ , ‘ಸರಿಯಾದ ಬೆಂಬಲ ಸಿಗದಿದ್ದರೆ, ಸಮೂಹಕ್ಕೇ ಬೇಡದಿದ್ದರೆ ನಿರ್ದಯದಿಂದ ಕಸಾಕಾಂ ಅನ್ನು ಕೊಲ್ಲುತ್ತೇನೆ’ ಎಂದರು. ಇದರಿಂದ ಎಲ್ಲರ ಮನ ಕದಡಿತು ಎನ್ನುವುದು ನಿಜ. ನಂತರ ಶಿವಾನಂದ್‌ ಹೊಂಬಾಳ್‌ ಅವರು ಮಾತನಾಡುತ್ತ - ‘ಕಸಾಕಾಂನ್ನು ಕೊಲ್ಲಲು ಶೇಖರ್‌ಪೂರ್ಣ ಅವರಿಗೆ ಹಕ್ಕಿಲ್ಲ . ಅವರ ಕೈಯನ್ನು ನಾವು ಕಟ್ಟಿ ಹಾಕುತ್ತೇವೆ’ ಎಂದು ಎಲ್ಲರ ಪರವಾಗಿ ನುಡಿದರು. ಇದೊಂದು ಸಣ್ಣ ಮಿಂಚಿನಂತೆ ಗೋಚರಿಸಿತು.

2. ಅಳಿವು-ಉಳಿವು: ರಾಮಚಂದ್ರ ಶಾಸ್ತ್ರಿಯವರು ಬಹಳ ಉತ್ತಮವಾಗಿ ಕಸಾಕಾಂನ ಮುಂದಿನ ಬೆಳವಣಿಗೆಯ ಹಂತಗಳನ್ನು ಗುರುತಿಸಿದರು. ಮೊದಲಿಗೆ ನಾವು ಕೇಂದ್ರೀಕರಿಸಬೇಕಾಗಿರುವುದು ಕಸಾಕಾಂ ನ ಅಳಿವು-ಉಳಿವಿನ ಬಗ್ಗೆ ಎಂದು ಚೆನ್ನಾಗಿ ವಿಶ್ಲೇಷಿಸಿದರು. ಅವರೇ ಒಂದು ಮಾದರಿಯಾಗಿ, ಮೊದಲು ಕೊಡುತ್ತಿದ್ದ 500.00 ರೂ (ತಿಂಗಳಿಗೆ) ಅನ್ನು 1000.00 ರೂಗೆ (ತಿಂಗಳಿಗೆ) ಹೆಚ್ಚಿಸಿದರು.

Shekharpoorna3. ಕಸಾಕಾಂ ನ ಉದ್ದೇಶ: ಬಹಳ ದೊಡ್ಡದಾದ ವಿಷಯ ಅಷ್ಟೇ ದೊಡ್ಡ ಚರ್ಚೆಗೆ ಎಡೆಮಾಡಿಕೊಟ್ಟಿತು. ಶೇಖರ್‌ಪೂರ್ಣರವರು ಮತ್ತು ಮನು ಚಕ್ರವರ್ತಿಯವರು ಬಹಳ ಆಳವಾಗಿ ಇದನ್ನು ವಿವರಿಸಿದರು. ಒಂದಂತೂ ನಿಜ- ನೂರಾರು ದಿಕ್ಕಿನ ಮನಸ್ಸುಗಳನ್ನು ಒಂದೆಡೆ ಕೂರಿಸಿ ಒಂದು ಉತ್ತಮ ಪ್ರಯತ್ನದತ್ತ ದೃಷ್ಟಿ ಹರಿಸುವಂತೆ ಕಸಾಕಾಂ ಮಾಡುತ್ತಿದೆ.

4. ತಾಂತ್ರಿಕ ತಂಡ : ಶೇಖರ್‌ಪೂರ್ಣ ಅವರ ಹಿಡಿತಕ್ಕೆ ಮೀರಿ ಕಸಾಕಾಂ ಬೆಳೆಯುತ್ತಿದೆ ಎನ್ನುವುದು ಘನಸತ್ಯ. ಹೀಗಾಗಿ ಅವರೇ ಎಲ್ಲವನ್ನೂ ನೋಡಿಕೊಳ್ಳಲು ಆಗುವುದಿಲ್ಲ. ಈಗಾಗಲೆ ಆಡಳಿತ ಮಂಡಳಿ ಮತ್ತು ಸಂಪಾದಕೀಯ ಮಂಡಳಿಯಿದ್ದರೂ, ಎರಡನೆಯ ಮಂಡಳಿ ವಿಸರ್ಜಿತವಾಗಿವೆ. ತಾಂತ್ರಿಕವಾಗಿ ಒಂದು ಬಲವಾದ ತಂಡವನ್ನು ಕಟ್ಟಬೇಕು. ಉದಾಹರಣೆಗೆ - ಬರಹಕ್ಕಿಳಿಸುವ ತಂಡ, ಅಂತರ್ಜಾಲದ ಕಾರ್ಯ ನಿರ್ವಹಿಸುವ ತಂಡ, ತಪ್ಪನ್ನು ತಿದ್ದುವ ತಂಡ - ಹೀಗೆ. ಇದೂ ಕೂಡ ಬಹಳವಾಗಿ ಚರ್ಚಿತವಾಯಿತು. ಬರಹಕ್ಕೆ ಇಳಿಸಲು ಸುಮಾರು 13 ಜನ ಸಿದ್ಧರಾದರು. ಇವರೆಲ್ಲರೂ ತಿಂಗಳಿಗೆ 10 ಪುಟಗಳನ್ನು ಬರಹಕ್ಕೆ ಇಳಿಸಿದರೂ ತಿಂಗಳಿಗೆ 100 ಪುಟಗಳಿಗೆ ಕೊರತೆ ಇರುವುದಿಲ್ಲ. ಈಗಾಗಲೆ ಸೀತಾ ಶೇಖರ್‌, ರೋಹಿತ್‌, ಕೃಷ್ಣಾನಂದ್‌, ಪ್ರೀತಿ ಮುಂತಾದವರು ಕೃತಿಗಳನ್ನು ಬರಹಕ್ಕೆ ಇಳಿಸುತ್ತಿದ್ದಾರೆ. ಕಸಾಕಾಂನ ಮತ್ತೊಬ್ಬ ಬೆನ್ನೆಲುಬಾದ ರಕ್ಷಿತ್‌ ಅವರು ತಂಡಗಳ ಅಗತ್ಯದ ಬಗೆಗೆ ಸೂಕ್ಷ್ಮವಾಗಿ ತಿಳಿಸಿದರು.

5. ನಮ್ಮ ಲೇಖಕರು: ಶಶಿಧರ ದೊಂಗ್ರೆಯವರು ಮಾತನಾಡುತ್ತಾ ತಮಗಿರುವ ಲೇಖಕರ ಪರಿಚಯದ ಬಗ್ಗೆ ಹೇಳಿದರು. ಅ.ರಾ.ಮಿತ್ರ, ಪ್ರಭುಶಂಕರ ಮುಂತಾದ ಲೇಖಕರು ತಮಗೆ ಪರಿಚಯವೆಂದೂ, ಅವರ ಕೃತಿಗಳನ್ನು ಕಸಾಕಾಂನಲ್ಲಿ ಬಳಸಲು ಅನುಮತಿಗಾಗಿ ಕೋರುವುದಾಗಿ ತಿಳಿಸಿದರು.

6. ಕಸಾಕಾಂ ನ ವ್ಯಾಪ್ತಿ : ಶಿವಾನಂದ ಹೊಂಬಾಳ್‌ ಪ್ರಸ್ತುತ ಒಬ್ಬ ಶಿಕ್ಷಕರು. ಅವರು ಮಾತನಾಡಿ ಶಿಕ್ಷಕರಿಗೆ ಕಸಾಕಾಂ ಬಹಳ ಉಪಯೋಗವಾಗುತ್ತಿದೆ ಎಂದು ತಿಳಿಸಿದಾಗ ಬಹಳ ಜನ ಹುಬ್ಬೇರಿಸಿದರು. ಇದರಿಂದ ಕಸಾಕಾಂ ನ ವ್ಯಾಪ್ತಿ ಹೆಚ್ಚಾಗುತ್ತಿದೆ ಎಂದು ಖಂಡಿತವಾಗಿ ಹೇಳಬಹುದು. ಅವರು ತಮ್ಮಿಂದ ಹಾಗು ತಮ್ಮ ಗೆಳೆಯರ ವೃಂದದಿಂದ ಕಸಾಕಾಂ ಗೆ ನೆರವಾಗುವ ಭರವಸೆಯನ್ನು ಕೊಟ್ಟರು.

7. ಮುಂದಿನ ಸಭೆಗಳು : ನಿಜಕ್ಕೂ ಈ ಸಭೆ ಎಲ್ಲರಲ್ಲಿ ಒಂದು ಹೊಸ ಅನುಭವವನ್ನು ಕೊಟ್ಟಿದೆ. ತಿಂಗಳಿಗೊಂದು ಸಭೆ ಸೇರಬೇಕು ಎನ್ನುವುದು ಎಲ್ಲರ ಒಕ್ಕೊರಲು. ಹೀಗಾಗಿ ಪ್ರತಿ ತಿಂಗಳ ಮೊದಲನೆ ಭಾನುವಾರ ಸಭೆ ಸೇರುವುದೆಂದು ನಿರ್ಧಾರವಾಯಿತು.

ಸರಿಯಾದ ನಿರ್ವಹಣೆಯ ಕೊರತೆ, ಕೆಲವು ನಿರ್ಧಾರ ತೆಗೆದುಕೊಳ್ಳಲಾಗದ ಅನಿವಾರ್ಯತೆ, ಊಟ-ತಿಂಡಿಯ ಅಸೌಲಭ್ಯ, ಕೆಲವು ಸಲ ಕೈಬಿಟ್ಟು ಹೋದ ಚರ್ಚೆ - ಕಪ್ಪು ಚುಕ್ಕಿಗಳಾಗಿ ಕಂಡರೂ ಮುಂದಿನ ಸಭೆಗಳು ಶುಭ್ರ ಶ್ವೇತವಸ್ತ್ರವಾಗುವುದೆಂಬ ಆಶಾಭಾವನೆ ನಮ್ಮದು.ಈ ಸಭೆಯನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು.

- ಅಂಜನ್‌
ಯಾಹೂ ಕನ್ನಡಿಗರ ಕಮಿಟಿಯ ಭಾರತದಲ್ಲಿನ ಮಾಡರೇಟರ್‌

ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+