ಡಾ.ಲಕ್ಷ್ಮಿನಾರಾಯಣ ಭಟ್ಟರೊಂದಿಗೆ ಮಾತುಕತೆ
*ನೀಲಿ
ಕವಿತೆಯ ಮಾಯೆ ಇರುವುದೇ ಲಯ, ನಾದ, ರೂಪಗಳ ಮುಪ್ಪರಿಯಲ್ಲಿ ಎನ್ನುವ ಡಾ.ಲಕ್ಷ್ಮಿನಾರಾಯಣ ಭಟ್ಟ- ಕಾವ್ಯದಲ್ಲೇ ‘ಬಾರೆ ನನ್ನ ದೀಪಿಕಾ, ಮಧುರ ಕಾವ್ಯ ರೂಪಕ’ ಎಂದವರು. ಅವರು ಮಾತಿಗೆ ಸಿಕ್ಕಾಗ-
ಹಿಂದೆಲ್ಲಾ ಹತ್ತಾರು ವರ್ಷ ಎಲ್ಲ ಥರದ ಪದ್ಯ ಬರೆದು ಆಮೇಲಷ್ಟೇ ಭಾವಗೀತೆಗೆ ಕೈ ಹಚ್ಚುವ ಮಂದಿ ಇದ್ರು, ಈಗ ..?
ಉಳಿದವರ ಬಗ್ಗೆ ಏಕೆ ಮಾತಾಡಲಿ ? ನಾನಂತೂ ನಾಲ್ಕಾರು ಕವನ ಸಂಕಲನ ತಂದು ‘ಕವಿ’ ಅಂತ ಎಲ್ಲರಿಂದ ಕರೆಸಿಕೊಂಡ ಮೇಲೇ ಭಾವಗೀತೆಗಳನ್ನು ಬರೆದದ್ದು . ನವೋದಯ ಕಾವ್ಯದ ಕೆಲವು ಉತ್ತಮ ಅಂಶಗಳು ನನ್ನಲ್ಲೂ ಉಳಿದುಕೊಳ್ಳಬೇಕಾಗಿತ್ತು . ಉಳಿಯಲಿಲ್ಲ , ಬಿಟ್ಟು ಹೋಯಿತು. ಹಾಗಂತ ನನಗರಿವಾದ ಮೇಲೆ ನಾನು ಭಾವಗೀತೆಗಳನ್ನೂ ಬರೆದೆ.
ಒಂದರ ಪಕ್ಕ ಇನ್ನೊಂದು ಚೆಂದದ ಪದ ನಿಂತರೆ ಅಲ್ಲೊಂದು ಕವಿತೆ ಹುಟ್ಟುತ್ತೆ ಅಂತಾರೆ ಈಗಿನ ಮಂದಿ. ಪದ್ಯಕ್ಕೆ ಪ್ರಾಸ ಮುಖ್ಯವೋ, ಪದಗಳ ಬಂಧ ಮುಖ್ಯವೊ?
ಬರೀ ಚೆಂದದ ಪದದಿಂದ ಕವಿತೆ ಆಗೊಲ್ಲ . ಬರೀ ಪ್ರಾಸದಿಂದಲೂ ಆಗಲ್ಲ . ಕವಿತೆಯಲ್ಲಿ ಹೇಳುವಂಥ ಆಶಯವೊಂದು ಕೊಂಚಮಟ್ಟಿಗಾದರೂ ಇರಬೇಕು. ಅದು ನಾದ, ಲಯ, ರೂಪಕಗಳನ್ನು ಬಳಸಿ ಮಾಡಿದಾಗ ಕವಿತೆಯಾದೀತು. ಹಾಗೆ ನೋಡಿದರೆ ಕವಿತೆ ನಾದ ಲಯ ರೂಪಕಗಳ ಔಚಿತ್ಯಪೂರ್ಣ ಸಂಗಮ.
ನಿಮ್ಮ ವೇಳಾಪಟ್ಟಿಯಲ್ಲಿ ‘ಕವಿತೆ ಹುಟ್ಟುವ ಸಮಯ’ ಅಂತಲೂ ಇದೆಯಾ?
ಖಂಡಿತ ಇಲ್ಲ . ಅದು ಯಾವಾಗ ಹಣಕಿ ನಮ್ಮ ಎದೆಯ ಕದ ತಟ್ಟುತ್ತದೆಯೋ ತಿಳಿಯದು. ‘ಮೂಡ್’ ಅನ್ನಿ , ಲಹರಿ ಅನ್ನಿ. ಅದನ್ನು ಹತ್ತಿ ಕವಿತೆ ಅನಿರೀಕ್ಷಿತವಾಗಿ ಬಂದುಬಿಡುತ್ತದೆ. ಬರೆಯಲು ಹೊರಟಾಗ ಮೊದಲ ಒಂದೆರಡು ಸಾಲು ಮಾತ್ರ ಗೊತ್ತಿರುತ್ತದೆ. ಬರೆಯುತ್ತ ಬರೆಯುತ್ತ ಅದರ ಬೆನ್ನು ಹಿಡಿದು ಉಳಿದವೂ ಬಂದುಬಿಡುತ್ತವೆ.
ನೀವು ಯಾವುದಾದ್ರೂ ಕವಿತೆ ಬರೆದ ನಂತರ ಬಿಕ್ಕಳಿಸಿ ಅತ್ತದ್ದುಂಟಾ ? ಹಾಗಿದ್ರೆ ಆ ಕವಿತೆ ಯಾವುದು?
ಇಲ್ಲ . ಆದರೆ ಭಾವವಶನಾಗಿ ಕೂತದ್ದುಂಟು. ಆ ಪದ್ಯವನ್ನು ಮತ್ತೆ ನಾಲ್ಕಾರು ಸಲ ಓದಿದ್ದುಂಟು. ಮಗುವನ್ನು ಹೆತ್ತ ತಾಯಿಯ ಸಂಭ್ರಮ ಸಡಗರದಲ್ಲಿ ಅದನ್ನು ಮನೆಯವರಿಗೆ, ಸ್ನೇಹಿತರಿಗೆ ತೋರಿಸಿ ‘ನಿನ್ನ ಮಗು ಚೆನ್ನಾಗಿದೆ, ಚುರುಕಾಗಿದೆ’ ಎಂದು ಹೇಳಿಸಿಕೊಳ್ಳಲು ಹಂಬಲಿಸಿದ್ದುಂಟು. ‘ಅರುಣಗೀತ’, ‘ಮಗನಿಗೊಂದು ಪತ್ರ’, ‘ಸೀಮಂತಿನಿ’, ‘ದೀಪಿಕಾ’, ‘ಶರೀಫಜ್ಜನಿಗೆ’- ಇವೆಲ್ಲ ಅವುಗಳಲ್ಲಿ ಕೆಲವು ಮಾತ್ರ.
(ವಿಜಯ ಕರ್ನಾಟಕ)
ಭಟ್ಟರ ಪರಪಂಚ
ಮುಖಪುಟ / ಸಾಹಿತ್ಯ ಸೊಗಡು
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications