ಬರಗೂರರ ಪದಕೋಶ ‘ಓದಿ ತಿಳಿ, ಕನ್ನಡದಲ್ಲಿ ಕಂಪ್ಯೂಟರ್‌ ಕಲಿ’

ಬೆಂಗಳೂರು : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರ ಅವರ ಉತ್ಸಾಹ ಈಗ ಇಮ್ಮಡಿಯಾಗಿದೆ. ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸದಿದ್ದಲ್ಲಿ ಬಡ್ತಿ, ಪಗಾರ ಹೆಚ್ಚಳಕ್ಕೂ ಕುತ್ತು ತರುವುದಾಗಿ ತಿಂಗಳ ಹಿಂದಷ್ಟೇ ಹೇಳಿದ್ದ ಅವರು, ಈಗ ಮಹತ್ತರ ಕೆಲಸದಲ್ಲಿ ಬ್ಯುಸಿ. ಕಂಪ್ಯೂಟರ್‌ ಸಂಬಂಧಿ ಇಂಗ್ಲಿಷ್‌- ಕನ್ನಡ ಲಘು ನಿಘಂಟು ಈಗ ಬರಗೂರು ನೇತೃತ್ವದಲ್ಲಿ ಸಿದ್ಧವಾಗುತ್ತಿದ್ದು, ಬರಗೂರರ ಪದ ಚಿಂತನೆ ಗಂಭೀರವಾಗುತ್ತಿದೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಂತಹಂತವಾಗಿ ಕಂಪ್ಯೂಟರೀಕರಣವಾಗುತ್ತಿದೆ. ಇದಕ್ಕೆ ಕೊಡುವ ತರಪೇತಿಯ ಮೊದಲ ದಿನವೇ ಇಂಗ್ಲಿಷ್‌ನಲ್ಲಿ ಪಾಠ ಮಾಡಲು ಶುರುವಿಟ್ಟರೆ ಬರಗೂರರಿಗೇ ಕಷ್ಟ. ಯಾಕೆಂದರೆ, ಕನ್ನಡ ಎನೆ ಕುಣಿದಾಡುವುದೆನ್ನೆದೆ ಎನ್ನುತ್ತಿರುವ ಅವರೇ ಇಂಗ್ಲಿಷ್‌ಗೆ ಜೋತು ಬಿದ್ದಂತಾಗುತ್ತದೆ. ಅದಕ್ಕೇ ಈ ತರ್ಜುಮೆಯ ಸಾಹಸ. ಕೀ ಬೋರ್ಡ್‌ಗೆ ಕೀಲಿಮಣೆ, ಸ್ಪೆಲ್‌ ಚೆಕ್‌ಗೆ ಪದ ಪರೀಕ್ಷೆ, ಇಂಡೆಕ್ಸ್‌ಗೆ ಸೂಚೀಕರಣ, ಕಟ್‌ ಅಂಡ್‌ ಪೇಸ್ಟ್‌ಗೆ ಕತ್ತರಿಸು ಮತ್ತು ಅಂಟಿಸು- ಹೀಗೆ ಸಾಗಿದೆ ಪದಗಳ ತರ್ಜುಮೆಯ ಕೆಲಸ.

ಬರಗೂರು ಕನ್ನಡ ಪ್ರೇಮಿಯಾದರೂ, ಭಾಷೆಯ ಕುರಿತು ಮಡಿವಂತರಲ್ಲ. ಅದಕ್ಕೇ ಅವರು ಮೌಸ್‌ ಎಂಬ ಪದವನ್ನು ಇಲಿ ಅಂತ ತರ್ಜುಮೆ ಮಾಡುವ ಗೊಡವೆಗೆ ಹೋಗಿಲ್ಲ. ಮೌಸು ಅಂತ ಕನ್ನಡದಲ್ಲಿ ಬರೆದಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಆಡಳಿತದಲ್ಲಿ ಕನ್ನಡವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಇನ್ನೊಂದು ಕಿರಿ ಪದಕೋಶ ಸಿದ್ಧವಾಗುತ್ತಿದೆ. ತಾಂತ್ರಿಕ ಹಾಗೂ ಆಡಳಿತಾತ್ಮಕ ಪದಗಳನ್ನು ಕನ್ನಡಕ್ಕೆ ಅನುವಾದಿಸಿ, ಸರ್ಕಾರಿ ಸಿಬ್ಬಂದಿಯ ಕನ್ನಡ ಬಳಕೆಯನ್ನು ಸರಳವಾಗಿಸುವುದು ಬರಗೂರರ ಗುರಿ.

ಇನ್ನೊಂದು ತಿಂಗಳಲ್ಲಿ ಹೊಸ ‘ನುಡಿ’ : ಇದರ ನಡುವೆಯೇ ಗಣಕ ಪರಿಷತ್ತು ಇನ್ನೊಂದು ತಿಂಗಳಲ್ಲಿ ಕನ್ನಡ ತಂತ್ರಾಂಶ ‘ನುಡಿ’ಯ ಹೊಸ ಆವೃತ್ತಿಯನ್ನು ಕೊಡಲಿರುವುದು ಸಂತೋಷದ ಸುದ್ದಿ. ಕಟ್‌ ಅಂಡ್‌ ಪೇಸ್ಟ್‌, ವ್ಯಾಕರಣ ಪರೀಕ್ಷೆ ಮೊದಲಾದ ಸವಲತ್ತುಗಳೂ ಇದರಲ್ಲಿದ್ದು, ಕಂಪ್ಯೂಟರ್‌ನಲ್ಲಿ ಕನ್ನಡಕ್ಕೆ ಹೊಸ ವೇಗ ದಕ್ಕಲಿದೆ. ಆದರೆ ಅದು ಇನ್ನೂ ಪರೀಕ್ಷಾ ಹಂತದಲ್ಲಿದೆ.

‘ಜನ ಸಾಮಾನ್ಯನಿಗೆ ಕನ್ನಡ ಕಂಪ್ಯೂಟರ್‌’ ಅನ್ನೋದು ಬರಗೂರರ ಕನಸು. ಆದರೆ ಏಕ ರೂಪ ತಂತ್ರಾಂಶದ ಸದ್ದೇ ಈಗ ಮದಲಿನ ಮೊನಚು ಕಳಕೊಂಡಿರುವುದರಿಂದ ಇದು ನನಸಾಗುವ ಕಾಲ ತೀರಾ ಹತ್ತಿರವೇನೂ ಇಲ್ಲ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+