ದೇಹದ ಕೊಬ್ಬು ಕರಗಿಸಲು ಬೇಸಿಗೆಯೇ ಬೆಸ್ಟ್:ಈ ಆಹಾರ ಸೇವಿಸುವ ಮೂಲಕ ಸುಲಭವಾಗಿ ಕಳೆದುಕೊಳ್ಳಬಹುದು ತೂಕ!
ಪ್ರತಿ ಋತುವಿನಲ್ಲಿ ಒಂದೇ ರೀತಿಯ ಆಹಾರ ಸೇವಿಸುವಂತಿಲ್ಲ. ಆಯಾ ಋತುವಿಗೆ ತಕ್ಕಂತೆ ಆಹಾರ ಕ್ರಮಗಳನ್ನು ಬದಲಾಯಿಸಬೇಕಾಗುತ್ತದೆ. ಇನ್ನು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವಾಗಲೂ ಆಯಾ ಕಾಲಕ್ಕೆ ಸರಿಹೊಂದುವ ರೀತಿಯಲ್ಲಿ ಬೇರೆ ಬೇರೆಯ ರೀತಿಯ ಆಹಾರ ಕ್ರಮವನ್ನು ಅನುಸರಿಸಬೇಕಾಗುತ್ತದೆ. ತೂಕ ಇಳಿಸಿಕೊಳ್ಳಬೇಕು ದೇಹದಲ್ಲಿ ಸೇರಿಕೊಂಡಿರುವ ಕೊಬ್ಬು ಕರಗಿಸಬೇಕು ಎನ್ನುವವರಿಗೆ ಬೇಸಿಗೆ ಸರಿಯಾದ ಸಮಯ. ಈ ಋತುವಿನಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.
ಬೇಸಿಗೆಯಲ್ಲಿ ತೂಕ ಇಳಿಸಲು ಆಹಾರ:
ಇಲ್ಲಿ ಮೊದಲೇ ಹೇಳಿದಂತೆ ಪ್ರತಿ ಋತುವಿಗೂ ವಿಭಿನ್ನ ತೂಕ ಇಳಿಸುವ ಆಹಾರ ಪದ್ಧತಿ ಬೇಕಾಗುತ್ತದೆ . ಈ ಋತುವಿನಲ್ಲಿ ಅಥವಾ ಬೇಸಿಗೆಯಲ್ಲಿ ತೂಕ ಇಳಿಸುವ ಸಲುವಾಗಿ ಸೇವಿಸಬಹುದಾದ ಅನೇಕ ಆಹಾರಗಳಿವೆ. ಈ ಆಹಾರವನ್ನು ತಿನ್ನುವ ಮೂಲಕ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ತೂಕ ಇಳಿಸುವ ಪ್ರಯತ್ನಕ್ಕೆ ಕೈ ಹಾಕುವಾಗ ಆಹಾರ ಪದ್ಧತಿಯೇ ಮೊದಲ ಆದ್ಯತೆಯಾಗಿರಬೇಕು. ಬೇಸಿಗೆಯಲ್ಲಿಯೇ ಹೇಗೆ ತೂಕವನ್ನು ಕಳೆದುಕೊಳ್ಳುವುದು ಎನ್ನುವ ಪ್ರಶ್ನೆಗಳು ಈಗ ಉದ್ಭವಿಸಬಹುದು.ಆದರೆ ಬೇಸಿಗೆಯಲ್ಲಿ ಆಹಾರಗಳೇ ತೂಕವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗುತ್ತದೆ ಎನ್ನುವುದು ಗಮನಿಸಬೇಕಾಸ ಅಂಶ.

ಬೇಸಿಗೆಯಲ್ಲಿ ಹೆಚ್ಚು ವ್ಯಾಯಾಮ ಮಾಡುವತ್ತ ಒಲವು ತೋರಿಸಬಹುದು. ಆರೋಗ್ಯಕರ ಆಹಾರ ಯೋಜನೆಯ ಜೊತೆಗೆ ವ್ಯಾಯಾಮವು ಪರಿಣಾಮಕಾರಿಯಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕರಗಿಸಲು ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಬೇಸಿಗೆಯಲ್ಲಿ ದೇಹದ ಕೊಬ್ಬು ವೇಗವಾಗಿ ಕರಗಿಸಲು ಆಹಾರ ಕ್ರಮಗಳು:
1.ತಾಜಾ ಹಣ್ಣುಗಳು ಮತ್ತು ತರಕಾರಿಗಳು:
ದೈನಂದಿನ ಆಹಾರದಲ್ಲಿ ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಸಲಾಡ್‌ಗಳನ್ನು ಸೇರಿಸಿಕೊಳ್ಳುವ ಮೂಲಕ ದೇಹದ ಪೌಷ್ಟಿಕಾಂಶವನ್ನು ಸುಧಾರಿಸಬಹುದು. ಬೇಸಿಗೆ ತಾಪಮಾನದಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಬಹುದು. ಇದು ಎಲೆಕ್ಟ್ರೋಲೈಟ್ ನಷ್ಟಕ್ಕೆ ಕಾರಣವಾಗಬಹುದು. ಇದು ಸದಾ ದಣಿವಾಗಿರುವಂತೆ ಮಾಡುತ್ತದೆ. ಅತಿಸಾರ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳು ಕೂಡಾ ಉಂಟಾಗಬಹುದು. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕಾದರೆ ದೈನಂದಿನ ಆಹಾರದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು.
ಜ್ಯೂಸ್ ಮತ್ತು ಶರಬತ್ತು:
ನೀರಿನ ಜೊತೆಗೆ, ನಿಮ್ಮ ದೇಹವನ್ನು ಚೈತನ್ಯಪೂರ್ಣವಾಗಿಡಲು ಸಹಾಯ ಮಾಡುವ ಕೆಲವು ಪಾನೀಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಎಳ ನೀರು, ಕೋಕಮ್ ನೀರು, ಮಜ್ಜಿಗೆ, ಹಣ್ಣಿನ ರಸಗಳನ್ನು ಸೇವಿಸಬೇಕು. ಈ ಪಾನೀಯಗಳು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವಾಗ ಎಲೆಕ್ಟ್ರೋಲೈಟ್ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ.
3.ಹಣ್ಣು ಮತ್ತು ಗಿಡಮೂಲಿಕೆ ನೀರು:
ಸಾಕಷ್ಟು ನೀರು ಕುಡಿಯುವುದರ ಜೊತೆಗೆ ಪೌಷ್ಟಿಕ-ಭರಿತ ನೀರನ್ನು ಕೂಡಾ ಕುಡಿಯಬೇಕು. ಅದು ನಿಮ್ಮ ಬಾಯಾರಿಕೆಯನ್ನು ತಣಿಸುವುದಲ್ಲದೆ, ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ನಿತ್ಯ ಕುಡಿಯುವ ನೀರಿಗೆ ಕಿವಿ, ಸ್ಟ್ರಾಬೆರಿ ಅಥವಾ ತುಳಸಿ ಬೀಜಗಳನ್ನು ಸೇರಿಸಬಹುದು.ಈ ನೀರನ್ನು ಕೆಲವು ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಡಬೇಕು, ಇದು ನಿಮ್ಮ ನೀರಿಗೆ ರಿಫ್ರೆಶ್ ರುಚಿಯನ್ನು ನೀಡುತ್ತದೆ.
ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಬಾರದು:
1.ಎಣ್ಣೆಯುಕ್ತ ಮತ್ತು ಜಂಕ್ ಫುಡ್:
ತೂಕ ನಷ್ಟದ ವಿಷಯಕ್ಕೆ ಬಂದಾಗ ಅನಾರೋಗ್ಯಕರ ಕೊಬ್ಬು, ಸಕ್ಕರೆ ಮತ್ತು ಲವಣಗಳಿಂದ ತುಂಬಿರುವ ಜಂಕ್ ಮತ್ತು ಎಣ್ಣೆಯುಕ್ತ ಆಹಾರಗಳನ್ನು ಮುಟ್ಟಿಯೂ ನೋಡುವಂತಿಲ್ಲ. ಈ ಆಹಾರಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹೃದಯ ಕಾಯಿಲೆ ಮತ್ತು ಇತರ ಗಂಭೀರ ಆರೋಗ್ಯ ಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತವೆ. ಚರ್ಮದ ಆರೋಗ್ಯಕ್ಕೂ ಇದು ಹಾನಿಯನ್ನು ಉಂಟು ಮಾಡುತ್ತದೆ. ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ಹೆಚ್ಚು ಬೆವರುವಂತೆ ಮಾಡುತ್ತದೆ, ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.
2.ಹೆಚ್ಚುವರಿ ಪ್ರೋಟೀನ್:
ಮಾನವ ದೇಹವು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಪ್ರೋಟೀನ್ ಅತ್ಯಗತ್ಯ ಪೋಷಕಾಂಶವಾಗಿದೆ. ಆದರೆ ಅದರಲ್ಲಿ ಹೆಚ್ಚಿನವು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಅತ್ಯಂತ ಸಂಕೀರ್ಣವಾದ ಮ್ಯಾಕ್ರೋನ್ಯೂಟ್ರಿಯೆಂಟ್ ಆಗಿರುವ ಪ್ರೋಟೀನ್ ಅನ್ನು ಜೀರ್ಣಿಸಿಕೊಳ್ಳಲು ದೇಹವು ಹೆಚ್ಚು ಶ್ರಮಿಸಬೇಕಾಗುತ್ತದೆ. ಶಾಖ ಮತ್ತು ನಿರ್ಜಲೀಕರಣದೊಂದಿಗೆ ಸೇರಿಕೊಂಡು, ಇದು ನಿಮಗೆ ಅನಾನುಕೂಲತೆಯನ್ನುಂಟು ಮಾಡಬಹುದು. ಇದನ್ನು ಅಧಿಕವಾಗಿ ಸೇವಿಸಿದರೆ ವಾಕರಿಕೆ, ವಾಂತಿ ಸಮಸ್ಯೆ ಕಾಡಬಹುದು. ಆದ್ದರಿಂದ, ನಿಮ್ಮ ಆಹಾರ ತಜ್ಞರು ಶಿಫಾರಸು ಮಾಡಿದ ಪ್ರೋಟೀನ್ ಅನ್ನೇ ಸೇವಿಸಿ.
3.ಮದ್ಯ:
ಮದ್ಯ ಮತ್ತು ಬಿಸಿ ವಾತಾವರಣ ಯಾವತ್ತೂ ಅಪಾಯಕಾರಿ ಸಂಯೋಜನೆಯಾಗಬಹುದು. ಮಾದಕತೆಯ ಮಟ್ಟದಲ್ಲಿ, ಮದ್ಯವು ವಾಸೋಡಿಲೇಟರ್ ಆಗಿ ಅಂದರೆ ದೇಹದ ಸಿಸ್ಟಮ್ ಮೂಲಕ ಹೆಚ್ಚು ರಕ್ತ ಹರಿಯುವಂತೆ ಮಾಡುತ್ತದೆ.ಇದು ನಿಮ್ಮನ್ನು ಬೆಚ್ಚಗಿಡುತ್ತದೆ ಮತ್ತು ಬೆವರುವಂತೆ ಮಾಡುತ್ತದೆ. ಇದಲ್ಲದೆ, ಬಿಸಿ ವಾತಾವರಣದಲ್ಲಿ ಮದ್ಯ ಸೇವಿಸುವುದರಿಂದ ನಿರ್ಜಲೀಕರಣದಂತಹ ಅಪಾಯವನ್ನು ಉಂಟು ಮಾಡಬಹುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications