ಈ ಕಾರಣಗಳಿಗೆ ಕಡಿಮೆ ನಿದ್ದೆ ಮಾಡ್ತಿದ್ದಾರೆ ಜನ, ಬೇಗ ನಿದ್ದೆ ಮಾಡುವುದು ಹೇಗೆ ?
ಪ್ರಕೃತಿ ನಮಗೆ ಸಹಜವಾಗಿ ನೀಡಿರುವ ನಿದ್ದೆಯಿಂದ ಮನಸ್ಸು ಮತ್ತು ದೇಹದ ದಣಿವು ಕಡಿಮೆಯಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಿದ್ದೆ ಮಾಡುವ ಸಮಯ ತುಂಬಾ ಕಡಿಮೆಯಾಗುತ್ತಿದೆ. ಜನ ರಾತ್ರಿ ವೇಳೆ ಬೇಗ ಮಲಗಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಈ ರೀತಿ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದೆ ಇರುವುದರಿಂದ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಎಷ್ಟು ಪ್ರಮಾಣದ ಜನ ಎಷ್ಟು ನಿದ್ದೆ ಮಾಡುತ್ತಿದ್ದಾರೆ. ಈ ರೀತಿ ನಿದ್ದೆ ಮಾಡದ ಸಮಯದಲ್ಲಿ ಜನ ಏನು ಮಾಡುತ್ತಿದ್ದಾರೆ. ಬೇಗ ನಿದ್ದೆ ಮಾಡುವುದು ಹೇಗೆ ಎನ್ನುವ ವಿವರಗಳು ಇಲ್ಲಿವೆ.
ಕೆಲವರು ಎಲ್ಲೇ ಮಲಗಿದರೂ ನಿದ್ರಾದೇವಿ ಆವರಿಸಿಕೊಳ್ಳುತ್ತಾಳೆ. ಇನ್ನೂ ಕೆಲವರಿಗೆ ಎಷ್ಟು ಗುದ್ದಾಡಿದರೂ ಸುಲಭವಾಗಿ ನಿದ್ದೆ ಬರುವುದಿಲ್ಲ. ಆದರೆ ಭಾರತದಲ್ಲಿ ನಿದ್ದೆ ಮಾಡುವವರ ಸಂಖ್ಯೆ ಹಾಗೂ ಪ್ರಮಾಣದಲ್ಲಿ ಭಾರೀ ದೊಡ್ಡ ಮಟ್ಟದ ವ್ಯತ್ಯಾಸವಾಗುತ್ತಿದೆ ಎಂದು Wakefit.co ವರದಿ ಮಾಡಿದೆ. ಈ ವರದಿಯಲ್ಲಿ ಹಲವು ಆಘಾತಕಾರಿ ಅಂಶಗಳು ಇವೆ. ಅದೇನು ಅಂತ ನೋಡೋಣ. ಇದರೊಂದಿಗೆ ಬೇಗ ನಿದ್ದೆ ಮಾಡುವುದಕ್ಕೆ ಸಿಂಪಲ್ ಟಿಪ್ಸ್‌ಗಳು ಸಹ ಇವೆ.

ಮೊಬೈಲ್ ಬಳಕೆ ಹಾಗೂ ದೈನಂದಿನ ಒತ್ತಡ ಮತ್ತು ಬದಲಾದ ಜೀವನ ಶೈಲಿಯು ದೇಶದ ಜನರ ನಿದ್ದೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತಿದೆ. ಹೌದು ದೇಶದಲ್ಲಿ ಜನ ನಿದ್ದೆ ಮಾಡುವಾಗ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನರು ಹಲವು ಕಾರಣಕ್ಕೆ ರಾತ್ರಿ ಮಲಗುವುದನ್ನು ಲೇಟ್ ಮಾಡುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಮಾತ್ರವಲ್ಲ. ಅವರ ಕೆಲಸದ ಮೇಲೂ ಪರಿಣಾಮ ಬೀರುತ್ತಿದೆ. ಹೌದು ಸರಿಯಾಗಿ ನಿದ್ದೆ ಮಾಡದೆ ಇರುವುದರಿಂದ ಜನ ಕೆಲಸದಲ್ಲಿ ಎಫೆಕ್ಟಿವ್ ಆಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನದ ವೇಳೆ ನಿದ್ದೆ ಬರುತ್ತಿದೆ. ಇದನ್ನು ತಪ್ಪಿಸುವುದಕ್ಕೆ ಪದೇ ಪದೇ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲವೂ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಕ್ಕೆ ಶುರುವಾಗಿದೆ.
ಭಾರತೀಯರು ಎದುರಿಸುತ್ತಿರುವ ಸಮಸ್ಯೆ: ಭಾರತೀಯರು ನಿದ್ರೆ ಮಾಡುವಾಗ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಶೇ 58% ಭಾರತೀಯರು ರಾತ್ರಿ 11 ಗಂಟೆಯ ಮೇಲೆ ನಿದ್ದೆ ಮಾಡುತ್ತಿದ್ದಾರೆ. ಇಷ್ಟೊಂದು ಜನ ನಿದ್ದೆ ಮಾಡುವ ಸಮಯವನ್ನು ದಾಟಿ ನಿದ್ದೆ ಮಾಡಲು ಹೋಗುತ್ತಿದ್ದಾರೆ. ಇನ್ನು ಶೇ 44% ಭಾರತೀಯರು ಮನಸ್ಸಿಗೆ ನೆಮ್ಮದಿ ಇಲ್ಲದೆ ಎಚ್ಚರವಾಗಿ ಇರುತ್ತಿರುವುದಾಗಿ ಹೇಳಿದ್ದಾರೆ. ಇದರಿಂದ ಅವರ ದೈನಂದಿನ ಕೆಲಸ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ಶೇ 51% ಜನರು ತಡರಾತ್ರಿಯ ವರೆಗೆ ಪೋನ್ ಸ್ಕ್ರೋಲಿಂಗ್ ಮಾಡುವುದು ಹಾಗೂ ವಿಡಿಯೋಗಳನ್ನು ವೀಕ್ಷಣೆ ಮಾಡುವುದರಿಂದ ಅನಿಯಮಿತ / ಹೆಚ್ಚು ನಿದ್ರೆಗೆ ಕಾರಣ ಎಂದು ಹೇಳಿದ್ದಾರೆ. ಇನ್ನು ದೇಶದ 35% ಜನರು ಭವಿಷ್ಯದ ಬಗ್ಗೆ ಯೋಚಿಸುತ್ತಲ್ಲೇ ಎಚ್ಚರವಾಗಿ ಇರುತ್ತಾರೆ. ಒತ್ತಡದಿಂದ ನಿದ್ರೆಗೆ ಅಡಚಣೆ ಆಗುತ್ತಿವೆ ಎಂದು ವರದಿ ಹೇಳಿದೆ.
ಬೇಗ ನಿದ್ರೆ ಮಾಡಲು ಈ ರೀತಿ ಮಾಡಿ
* ಮಲಗುವ ಮುಂಚೆ ಕನಿಷ್ಠ 30 ನಿಮಿಷ ಪೋನ್ / ಸ್ಕ್ರೀನ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ
* ಬೇಗ ಆಹಾರ ಅಥವಾ ಊಟ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
* ದಿನವೂ ಬೇಗ ನಿದ್ದೆಗೆ / ಮಲಗುವುದಕ್ಕೆ ಹೋಗುವ ಅಭ್ಯಾಸವನ್ನು ಮಾಡಿಕೊಳ್ಳಿ.












Click it and Unblock the Notifications