ಹೊಸ ವರ್ಷದ ಮೊದಲ ದಿನದಿಂದಲೇ ಮದ್ಯ, ತಂಬಾಕು ತ್ಯಜಿಸಲು ಇಲ್ಲಿವೆ ಸುಲಭದ ಉಪಾಯಗಳು
New Year 2026: ಇನ್ನೂ ಕೇವಲ ಎರಡನೇ ದಿನಗಳಲ್ಲಿ 2025 ಮುಗಿದು 2026ನೇ ಹೊಸ ವರ್ಷ ಎಂಟ್ರಿ ಕೊಡಲಿದೆ. ಕೆಟ್ಟ ನೆನಪುಗಳನ್ನೆಲ್ಲ ಮರೆತು ಉತ್ತಮ ಬದುಕು ಕಟ್ಟಿಕೊಡಬಲ್ಲ ಹೊಸ ಚಾಲೆಂಜ್‌ಗಳ ಮೂಲಕ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿ. ಒಂದು ವೇಳೆ ನೀವು ಅತಿಯಾದ ಕುಡಿತ, ತಂಬಾಕು ವ್ಯಸನಿಯಾಗಿದ್ದರೆ, ಅಂದಿನಿಂದಲೇ ಇದರಿಂದ ಹೊರಬರಲು ದೃಢ ನಿರ್ಧಾರ ಮಾಡಿದವರಿಗೆ ಇಲ್ಲಿವೆ ನೋಡಿ ಸುಲಭದ ಉಪಾಯಗಳು.
ಬಹುತೇಕ ಮಂದಿ ಹೊಸ ವರ್ಷವನ್ನು ಎಣ್ಣೆ ಪಾರ್ಟಿಯೊಂದಿಗೆ ಅದ್ಧೂರಿಯಾಗಿ ಸ್ವಾಗತ ಮಾಡಿದರೆ, ಮತ್ತೊಂದೆಡೆ ಇನ್ನೂ ಕೆಲವರು ಹೊಸ ಸಂಕಲ್ಪಗಳ ಮೂಲಕ ಸ್ವಾಗತ ಮಾಡುತ್ತಾರೆ. ಒಂದು ವೇಳೆ ನೀವು ಕುಡಿತ ಹಾಗೂ ತಂಬಾಕು ವ್ಯಸನಿಗಳಾಗಿದ್ದು, ಇದರಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದರೆ ಇಲ್ಲಿವೆ ನೋಡಿ ಸುಲಭ ಮಾರ್ಗಗಳು.

ಮೂಲಗಳ ಪ್ರಕಾರ, ಮದ್ಯ ಹಾಗೂ ತಂಬಾಕು ಸೇವನೆಯಿಂದ ಹೊರಬವುದು ಅಷ್ಟು ಸುಲಭದ ಮಾತಲ್ಲ. ನಿಧಾನವಾಗಿ ಬಿಡಬೇಕಾಗುತ್ತದೆ. ಇಲ್ಲದಿದ್ದರೆ, ಆರೋಗ್ಯದ ಸಮಸ್ಯೆಗಳು ಕಂಡುಬರುತ್ತದೆ ಎನ್ನುತ್ತಾರೆ. ಆದ್ದರಿಂದ, ಕೆಲವರು ಈ ಚಟಗಳನ್ನು ಹಂತ-ಹಂತವಾಗಿ ಕಡಿಮೆ ಮಾಡಿ ಕೊನೆಗೆ ಸಂಪೂರ್ಣವಾಗಿ ನಿಲ್ಲಿಸುವ ದೃಢ ನಿರ್ಧಾರ ಮಾಡುತ್ತಾರೆ. ಈಗಾಗಲೇ ಇಂತಹ ಚಟಗಳಿಗಳಿಂದ ದೂರ ಉಳಿದು ಉತ್ತಮ ಜೀವನ ಕಟ್ಟಿಕೊಂಡಂತಹ ಸಾಕಷ್ಟು ಉದಾಹರಣೆಗಳಿವೆ.
ಮದ್ಯ, ತಂಬಾಕು ಸೇವನೆ ನಿಲ್ಲಿಸಲು ಸುಲಭ ಮಾರ್ಗಗಳು
* ಮದ್ಯ, ತಂಬಾಕು ಸೇವನೆ ತ್ಯಜಿಸಲು ದೃಢ ನಿರ್ಧಾರ ತೆಗೆದುಕೊಳ್ಳಿ.
* ಒಂದೇ ದಿನದಲ್ಲಿ ಸಂಪೂರ್ಣವಾಗಿ ಬಿಡಲು ಕಷ್ಟ ಆದರೆ, ಹಂತ-ಹಂತವಾಗಿ ಕಡಿಮೆ ಮಾಡುತ್ತಾ ಬನ್ನಿ.
* ಆದಷ್ಟು ಸ್ನೇಹಿತರ ಜೊತೆಗಿನ ಪಾರ್ಟಿಗಳಿಂದ ದೂರ ಇರಿ. ಅತೀಯಾಗಿ ಯೋಚನೆ ಮಾಡಬೇಡಿ ಹಾಗೂ ಒಂಟಿತನದಿಂದ ಇರಬೇಡಿ.
* ಸಿಗರೇಟ್ ಬದಲಿಗೆ ಜ್ಯೂಸ್, ಜೀರಿಗೆ ಅಥವಾ ಸೊಂಪು, ನೀರು ಸೇವನೆ ಮಾಡಿ.
* ಖಾಲಿ ಸಮಯದಲ್ಲಿ ಕುಡಿಯಬೇಕು, ಸಿಗರೇಟ್ ಹೊಡೆಯಬೇಕು ಅನಿಸುತ್ತದೆ. ಹೀಗೆ ಅನ್ನಿಸಿದಾಗ, ಇದೇ ಸಮಯವನ್ನು ವ್ಯಾಯಾಮ, ಓದುವುದು, ವಾಕ್ ಮಾಡುವುದಕ್ಕೆ ಬಳಸಿಕೊಳ್ಳಿ.
* ಒಂದು ವೇಳೆ ಮನೆಯಲ್ಲಿ ಮದ್ಯ, ತಂಬಾಕು ಸ್ಟಾಕ್ ಇಟ್ಟುಕೊಂಡಿದ್ದರೆ, ಅವುಗಳನ್ನು ನಿಮ್ಮ ಕಣ್ಣಿಗೆ ಕಾಣದಂತೆ ಎಸೆಯಿರಿ.
ಸಿಗರೇಟ್, ಗಟ್ಕಾ, ಮದ್ಯ ಇವುಗಳಲ್ಲಿ ಯಾವುದನ್ನೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ.
* ಕುಟುಂಬ ಅಥವಾ ಸ್ನೇಹಿತರ ಬೆಂಬಲ ಪಡೆದು ನಾನು ಈ ಚಟಗಳನ್ನು ಸಂಪೂರ್ಣ ಬಿಡುತ್ತಿರುವೆ ಎಂದು ದೃಢ ನಿರ್ಧಾರ ಮಾಡಿ.
* ಯೋಗ, ಧ್ಯಾನ ಮಾಡಿದರೆ, ಅವುಗಳ ಕಡೆಗಿನ ಗಮನ ಸಂಪೂರ್ಣವಾಗಿ ಮರೆಯಾಗುತ್ತದೆ.
* ವೈದ್ಯರ ಜೊತೆ ಮಾತಾಡಿ, ಅವರು ಸಲಹೆಯ ಮೇರೆಗೆ ಔಷಧಗಳನ್ನು ಪಡೆಯಿರಿ.
* ಒಂದು ವಾರ, ಒಂದು ತಿಂಗಳು ಇವುಗಳಿಂದ ದೂರ ಇರಿ. ಆಗ ತಮ್ಮಷ್ಟಕ್ಕೆ ತಾವೇ ಈ ಚಟಗಳನ್ನು ಮರೆಯುತ್ತೀರಿ. ಪ್ರಯಾಣ, ಪುಸ್ತಕ ಓದುವ, ಹಾಗೂ ನಿಮ್ಮಿಷ್ಟದ ವಸ್ತುಗಳ ಜೊತೆ ಕಾಲ ಕಳೆಯುವುದನ್ನು ರೂಢಿ ಮಾಡಿಕೊಳ್ಳಿ.
ಮದ್ಯ, ತಂಬಾಕು ಸೇವನೆ ಬಿಡುವುದರಿಂದ ಆಗುವ ಅನುಕೂಲ
* ಹೃದಯದ ಆರೋಗ್ಯದಲ್ಲಿ ಸುಧಾರಣೆ
* ಕ್ಯಾನ್ಸರ್ ಅಪಾಯ ಕಡಿಮೆ
* ಹಣ ಉಳಿತಾಯ
* ಕುಟುಂಬ-ಸಂಬಂಧಗಳ ನಡುವೆ ಉತ್ತಮ ಬಾಂಧವ್ಯ
* ಆತ್ಮವಿಶ್ವಾಸ ಹೆಚ್ಚುತ್ತದೆ
ಯಾವುದಾರೂ ಒಂದು ಸಮಸ್ಯೆ ಅಂದಮೇಲೆ ಅದಕ್ಕೆ ಪರಿಹಾರ ಇದ್ದೇ ಇರುತ್ತದೆ. ಹಾಗೆಯೇ ನೀವು ಮದ್ಯ ಹಾಗೂ ತಂಬಾಕು ಸೇವನೆಯಿಂದ ಹೊರಬರಲು ಕೂಡ ಪರಿಹಾರಗಳಿವೆ. ಆದರೆ, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರಿಗೆ ಮಾತ್ರ. ಮೇಲೆ ಹೇಳಿದಂತೆ ಈ ಕೆಲಸವನ್ನು ಒಮ್ಮ ಅಳವಡಿಕೆ ಮಾಡಿದರೆ, ಈ ಚಟಗಳಿಂದ ಹೊರಬರಲು ತುಂಬಾ ಅನುಕೂಲಗಳಾಗಲಿವೆ. ಇದರಿಂದ ಮುಂದಿನ ನಿಮ್ಮ ಜೀವ ಹಾಗೂ ಜೀವನವನ್ನು ಉತ್ತಮವಾಗಿಯೂ ಕಟ್ಟಿಕೊಳ್ಳಬಹುದು.












Click it and Unblock the Notifications