Crispy Chilli Bajji Recipe: ಮನೆಯಲ್ಲೇ ತಯಾರಿಸಿ ಗರಿಗರಿಯಾದ ಮೆಣಸಿನಕಾಯಿ ಬಜ್ಜಿ
ಇನ್ನೇನು ಮಳೆಗಾಲ ಆರಂಭವಾಯ್ತು..ಈ ಬೇಸಿಗೆಯಲ್ಲಿ ಬರೀ ತಂಪು ಪಾನಿಯಗಳನ್ನೇ ಹುಡುಕುತ್ತಿದ್ದ ನಾವು ಇನ್ನು ಮುಂದೆ ಜಿಟಿ ಜಿಟಿ ಮಳೆಗೆ ಬಿಸಿ ಬಿಸಿಯಾದ ತಿಂಡಿಗಳನ್ನೇ ಅರಸುತ್ತೇವೆ. ಸಂಜೆ ವೇಳೆ ಮಳೆಗೆ ಬಿಸಿ ಬಿಸಿಯಾದ ತಿಂಡಿಯಿದ್ದರೆ ವಾವ್ ಎನಿಸುತ್ತದೆ. ಹೀಗಾಗಿ ಮನೆಯಲ್ಲೇ ಮಳೆಗಾಲ ತಿಂಡಿಗಳನ್ನು ತಯಾರಿಸಲು ಆರಂಭಿಸಿ.
ಬರೀ ಮಳೆಗಾಲವಲ್ಲ..ಯಾವುದೇ ಸಮಯವಾದರೂ ಸಂಜೆ ವೇಳೆ ಟೀ ಜೊತೆಗೆ ಮೆಣಸಿನಕಾಯಿ ಬಜ್ಜಿ ಇದ್ದರೆ ನಾಲಿಗೆ ಕುಣಿದಾಡುತ್ತದೆ. ಹೊರಗಡೆ ಬೀದಿ ಬದಿಯ ಬಜ್ಜಿ ಅಂಗಡಿಗಳಲ್ಲಿ ರುಚಿ-ರುಚಿಯಾದ ಮೆಣಸಿನಕಾಯಿ ಬಜ್ಜಿ ಸಿಗುತ್ತದೆ. ಇದೇ ರೀತಿಯ ಮೆಣಸಿನಕಾಯಿ ಬಜ್ಜಿಯನ್ನು ಮನೆಯಲ್ಲೇ ತಯಾರಿಸುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಗರಿಗರಿಯಾದ ಮೆಣಸಿನಕಾಯಿ ಬಜ್ಜಿಯನ್ನು ನೆಯಲ್ಲೇ ತಯಾರಿಸುವ ವಿಧಾನ ಇಲ್ಲಿದೆ.

ಮೆಣಸಿನಕಾಯಿ ಬಜ್ಜಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
- ಕಡಲೆ ಹಿಟ್ಟು - 4 ಕಪ್
- ಖಾರ ಕಡಿಮೆ ಇರುವ ಬಜ್ಜಿ ಮೆಣಸಿನಕಾಯಿ-10 ಮೆಣಸಿನಕಾಯಿಗಳು
- ಕೆಂಪು ಮೆಣಸಿನ ಪುಡಿ-1/2 ಚಮಚ
- ಇಂಗು- ಒಂದು ದೊಡ್ಡ ಚಿಟಿಕೆ
- ಉಪ್ಪು- ನಿಮ್ಮ ರುಚಿಗೆ ತಕ್ಕಷ್ಟು
- ಎಣ್ಣೆ-ಹುರಿಯಲು ಅಗತ್ಯವಿರುವಷ್ಟು
- ಮೆಣಸಿನಕಾಯಿ ಬಜ್ಜಿ ತಯಾರಿಸುವ ವಿಧಾನ
ಮೊದಲು ಮೆಣಸಿನಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಶುಭ್ರವಾದ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಮೆಣಸಿನಕಾಯಿಯನ್ನು ಮಧ್ಯ ಸೀಳಿಕೊಳ್ಳಿ. ದೊಡ್ಡ ಮೆಣಸಿನಕಾಯಿಯಾದರೆ ನಾಲ್ಕು ತುಂಡುಗಳಾಗಿ ಕತ್ತರಿಸಿಕೊಳ್ಳಿ. ಒಂದು ತಟ್ಟೆಯಲ್ಲಿ ಬೇಳೆ ಹಿಟ್ಟು, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಇಂಗು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.

ಈ ಮಿಶ್ರಣಕ್ಕೆ ಅಗತ್ಯವಿರುವ ನೀರನ್ನು ಸೇರಿಸಿ ತೆಳುವಾಗಿ ಹಿಟ್ಟನ್ನು ತಯಾರಿಸಿಕೊಳ್ಳಿ. ಬಳಿಕ ಮೆಣಸಿನಕಾಯಿ ಬಚ್ಚಿ ತಯಾರಿಸಲು ಒಂದು ಬಾಣಲಿಯಲ್ಲಿ ಅಗತ್ಯವಿರುವಷ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕರಿಯುವಷ್ಟು ಬಿಸಿಯಾದ ಮೇಲೆ ಮೆಣಸಿನಕಾಯಿಯನ್ನು ಮೊದಲೇ ತಯಾರಿಸಿಕೊಂಡ ಹಿಟ್ಟಿನಲ್ಲಿ ಚನ್ನಾಗಿ ಅದ್ದಿ ಎಣ್ಣೆಯಲ್ಲಿ ಹಾಕಿ.
ಎರಡು ನಿಮಿಷಗಳ ಕಾಲ ಬಿಟ್ಟು ಮೆಣಸಿನಕಾಯಿಯನ್ನು ಎಣ್ಣೆಯಿಂದ ತೆಗೆದು ಬೇರೆ ಪಾತ್ರೆಗೆ ವರ್ಗಾಯಿಸಿದರೆ ಬಿಸಿ ಬಿಸಿಯಾದ ಗರಿ-ಗರಿಯಾದ ಮೆಣಸಿನಕಾಯಿ ಬಜ್ಜಿ ಸವಿಯಲು ಸಿದ್ಧವಾಗುತ್ತದೆ. ಸಂಜೆ ವೇಳೆ ಜಿಟಿ ಜಿಟಿ ಮಳೆಯಲ್ಲಿ ಒಂದು ಕಪ್ ಟೀ ಜೊತೆ ಗರಿ-ಗರಿಯಾದ ಮೆಣಸಿನಕಾಯಿ ಬಜ್ಜಿ ಸವಿಯುತ್ತಿದ್ದರೇ, ನೀವು ಇರುವ ಸ್ಥಳವೇ ಸ್ವರ್ಗವೆನಿಸುತ್ತದೆ.












Click it and Unblock the Notifications