Reels: ರೀಲ್ಸ್‌ ನೋಡುವುದನ್ನು ತಪ್ಪಿಸುವುದು ಹೇಗೆ ?

Reels: ಈಗೆಲ್ಲ ರೀಲ್ಸ್‌ ದುನಿಯಾ. ನಮಗೇ ತಿಳಿಯದಂತೆ ನಾವು ರೀಲ್ಸ್‌ಗಳಲ್ಲಿ ಮುಳುಗಿ ಹೋಗುತ್ತಿದ್ದೇವೆ. ಇದರಿಂದ ಪ್ರಮುಖ ಹಾಗೂ ಆಯಾ ದಿನದಂದು ಮಾಡಬೇಕಾದ ಪ್ರಮುಖ ಕೆಲಸಗಳು ಅರ್ಧಕ್ಕೆ ನಿಂತು ಹೋಗುವುದು ಇದೆ. ಸುಮ್ಮನೆ ಯಾರಿಗೋ ಪೋನ್‌ ಮಾಡಬೇಕು ಇಲ್ಲ ವಾಟ್ಸಪ್‌ ಚೆಕ್‌ ಮಾಡಬೇಕು ಅಂದುಕೊಂಡು ಪೋನ್‌ ತೆಗೆದರೆ ಕೈಬೆರಳುಗಳು ನಿಧಾನವಾಗಿ ರೀಲ್ಸ್‌ ಮೇಲೆ ಹೋಗುವುದು ಇದೆ. ರೀಲ್ಸ್‌ ನೋಡುತ್ತಲ್ಲೇ ಅತೀ ಮುಖ್ಯವಾದ ಕೆಲಸಗಳಿಗೆ ಸಮಯ ಸಿಗದೆ ಪರದಾಡುವುದು ಇದೆ. ರೀಲ್ಸ್‌ ಎನ್ನುವುದು ಸ್ವಲ್ಪ ಟೈಮ್‌ ಪಾಸ್‌ ಅಥವಾ ರಿಲ್ಯಾಕ್ಸ್‌ ಆಗಿರಬೇಕು. ಹಾಗಾದರೆ ರೀಲ್ಸ್‌ ನೋಡುವುದನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ, ರೀಲ್ಸ್‌ ನೋಡದೆ ಸಮಯ ಉಳಿಸಿಕೊಳ್ಳುವುದು ಹೇಗೆ ಹಾಗೂ ಇದರಿಂದ ಯಾವೆಲ್ಲ ಲಾಭ ನಿಮಗೆ ಆಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

ರೀಲ್ಸ್‌ಗಳನ್ನು ನೋಡುವುದನ್ನು ಕಡಿಮೆ ಮಾಡುವುದಕ್ಕೆ ನೀವು ಸರಳ ವಿಧಾನಗಳನ್ನು ಅನುಸರಿಸಬಹುದಾಗಿದೆ. ನೀವು ರೀಲ್ಸ್‌ನಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡಲು ಮೊದಲು ನಿಮ್ಮ Instagram ಸೆಟ್ಟಿಂಗ್‌ಗಳನ್ನು ಆಟೋ-ಪ್ಲೇ ರೀಲ್ ಎನ್ನುವ ಆಯ್ಕೆಯನ್ನು ಆಫ್ ಮಾಡಬಹುದಾಗಿದೆ. ಕೆಲವೊಂದು ರೀಲ್‌ಗಳನ್ನು ಪೋಸ್ಟ್ ಮಾಡುವ ಖಾತೆಗಳನ್ನು ಫಾಲೋ ಮಾಡುವುದನ್ನು ಕಡಿಮೆ ಮಾಡಿ. ಪೋನ್‌ ಅಥವಾ ರೀಲ್ಸ್‌ ಟ್ಯಾಬ್‌ನಲ್ಲಿ ನೀವು ರೀಲ್ಸ್‌ ನೋಡಿಕೊಂಡು ಸಮಯ ಕಳೆಯುವುದಕ್ಕಿಂತ ಟೈಮ್‌ ಫಿಕ್ಸ್‌ ಮಾಡಿಕೊಳ್ಳಿ. ಬೇರೆ ನಿಮಗೆ ಇಷ್ಟವಾಗುವ ವಿಷಯಗಳನ್ನು ಮಾಡಿ.

How to Avoid Watching Reels

ರೀಲ್ಸ್‌ ನೋಡುವುದನ್ನು ಕಡಿಮೆ ಮಾಡಲು ಸಿಂಪಲ್‌ ಟಿಪ್ಸ್‌

* ನಿಮ್ಮ ಸೆಟ್ಟಿಂಗ್‌ಗಳನ್ನು ಬದಲಾಯಿಸಿ: ನಿಮ್ಮ Instagram ಪ್ರೊಫೈಲ್‌ಗೆ ಹೋಗಿ ಅಲ್ಲಿ ಬಲಭಾಗದಲ್ಲಿ ಕಾಣುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್‌ ಮಾಡಿ ಸೆಟ್ಟಿಂಗ್‌ಗಳು ನಂತರ ಗೌಪ್ಯತೆ ಎನ್ನುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ Auto ಪ್ಲೇ ನಂತಹ ಸೆಟ್ಟಿಂಗ್‌ಗಳನ್ನು ಹೊಂದಿಸಲು "ರೀಲ್ಸ್ ಮತ್ತು ರೀಮಿಕ್ಸ್" ಎನ್ನುವ ಆಯ್ಕೆಗೆ ಹೋಗಿ. ಆಟೋ-ಪ್ಲೇ ರೀಲ್ಸ್‌ ಆಯ್ಕೆಯನ್ನು ಆಫ್ ಮಾಡಿ.

* ನಿಮ್ಮ ಖಾತೆಗೆ ಬರುವ ಫೀಡ್‌ಗಳನ್ನು ಕಡಿಮೆ ಮಾಡಿ: ಹಲವು ಖಾತೆಗಳನ್ನು ಫಾಲೋ ಮಾಡುವುದನ್ನು ತಪ್ಪಿಸಿ.

* ಬೇರೆ ಬೇರೆ ವಿಷಯಗಳನ್ನು ನೋಡಿ: ಒಂದೇ ವಿಷಯದ ರೀಲ್ಸ್‌ಗಳನ್ನು ಹೆಚ್ಚು ನೋಡುವುದರಿಂದ ಸಮಯ ಕಳೆಯುವುದು ಗೊತ್ತಾಗುವುದಿಲ್ಲ. ಇದರ ಬದಲಿಗೆ ಸ್ಕ್ರೋಲಿಂಗ್ ಮಾಡುವಾಗ, ಅಲ್ಗಾರಿದಮ್ ನೋಡಿ. ನಿಮಗೆ ರೀಲ್‌ಗಳು ಹೆಚ್ಚು ಬರುವುದನ್ನು ತಪ್ಪಿಸಲು ಅಪ್ಲಿಕೇಶನ್‌ ಬದಲಾಯಿಸಿ. ಇಲ್ಲವೇ ಬೇರೆ ಬೇರೆ ವಿಷಯದ ಉಪಯುಕ್ತ ರೀಲ್ಸ್‌ ನೋಡಿ.

ಟೈಮ್‌ ಫಿಕ್ಸ್‌ ಮಾಡಿಕೊಳ್ಳಿ: Instagramನಲ್ಲಿ ನೀವು ಹೆಚ್ಚು ಸಮಯ ಕಳೆಯುವುದನ್ನು ಕಡಿಮೆ ಮಾಡಲು ಅಪ್ಲಿಕೇಶನ್ ಟೈಮರ್‌ಗಳು ಅಥವಾ ಟೈಮ್‌ ಫಿಕ್ಸ್‌ ಮಾಡಿಕೊಳ್ಳಿ. ಅಲ್ಲದೆ ಅಪ್ಲಿಕೇಶನ್ ತೆಗೆದ ಕೂಡಲೇ ರೀಲ್‌ಗಳಿಗೆ ಹೋಗುವ ಬದಲು ಪೋಸ್ಟ್‌ಗಳು ಅಥವಾ ಸ್ಟೋರಿಗಳಂತಹ ಇತರ ವಿಷಯಗಳನ್ನು ಸರ್ಚ್‌ ಮಾಡಿ. ನೀವು ಸ್ಕ್ರಾಲ್ ಮಾಡುವುದನ್ನು ತಪ್ಪಿಸಲು ಮುಖ್ಯವಾಗಿ ಸಣ್ಣ ವೀಡಿಯೊಗಳು ಇಲ್ಲದೆ ಇರುವ ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+