ಮಧಮೇಹವಿದ್ದರೆ ಹೃದಯದ ಕಾಯಿಲೆ ಅರಿವಿಗೇ ಬರೋಲ್ಲ, ತಜ್ಞರು ಹೇಳೋದನ್ನು ಕಿವಿಗೊಟ್ಟು ಕೇಳಿಸಿಕೊಳ್ಳಿ

ಡಾ. ನರಸಿಂಹ ಪೈ, ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು, ಹೃದ್ರೋಗ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು.

ಮಧುಮೇಹ ಎಂದರೆ ಕೇವಲ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವ ಕಾಯಿಲೆಯಲ್ಲ. ಇದು ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ಅಂಶಗಳಲ್ಲೊಂದು. ಇದರ ಪರಿಣಾಮಗಳು ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಹೃದಯದ ಮೇಲೆ ಪರಿಣಾಮ ಬೀರಲು ಆರಂಭಿಸುತ್ತವೆ.

ಹೃದ್ರೋಗ ತಜ್ಞರಾದ ನಾವು, ಮಧುಮೇಹದಿಂದ ಉಂಟಾಗುವ ಹೃದಯ ಕಾಯಿಲೆಯ ಮೊದಲ ಲಕ್ಷಣವಾಗಿ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ಬರುವ ಅನೇಕ ರೋಗಿಗಳನ್ನು ನೋಡುತ್ತೇವೆ. ಅಂತಹ ಸಂದರ್ಭದಲ್ಲಿ ರೋಗಿಗಳಿಗೆ ತಮಗೆ ಹೃದಯದ ಸಮಸ್ಯೆ ಇದೆ ಎಂಬ ಅರಿವೇ ಇರುವುದಿಲ್ಲ. ಉದಾಹರಣೆಗೆ, 56 ವರ್ಷದ ವ್ಯಕ್ತಿಯೊಬ್ಬರು ಕಳೆದ 10 ವರ್ಷಗಳಿಂದ ಟೈಪ್-2 ಮಧುಮೇಹದಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರಿಗೆ ಅತಿಯಾದ ಸುಸ್ತು ಹಾಗೂ ದೈಹಿಕ ಚಟುವಟಿಕೆ ನಡೆಸುವಾಗ ಸ್ವಲ್ಪ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದರು. ಅವರಿಗೆ ಸಾಮಾನ್ಯವಾಗಿ ಕಂಡುಬರುವ ಎದೆ ನೋವಿನ ಲಕ್ಷಣಗಳಿರಲಿಲ್ಲ. ಹೆಚ್ಚಿನ ಪರೀಕ್ಷೆ ನಡೆಸಿದಾಗ ಹೃದಯಕ್ಕೆ ರಕ್ತ ಪೂರೈಸುವ ಹಲವು ರಕ್ತನಾಳಗಳಲ್ಲಿ ಗಂಭೀರವಾದ ಅಡಚಣೆ ಇರುವುದು ಪತ್ತೆಯಾಯಿತು. ರೋಗದ ತೀವ್ರತೆ ಹೆಚ್ಚಿದ್ದರೂ ಯಾವುದೇ ಸ್ಪಷ್ಟ ಎಚ್ಚರಿಕೆಯ ಲಕ್ಷಣಗಳು ಕಾಣಿಸಿಕೊಳ್ಳದಿರುವುದು ಆತಂಕಕಾರಿ ಸಂಗತಿಯಾಗಿತ್ತು.

Heart Attack might occur without any symptom of having pain control sugar level in blood have healthy lifestyle

ಮಧುಮೇಹದಿಂದ Heart Attack

ಮಧುಮೇಹವು ರಕ್ತನಾಳಗಳ ಒಳಪದರಕ್ಕೆ ಹಾನಿ ಉಂಟುಮಾಡುತ್ತದೆ. ರಕ್ತನಾಳಗಳಲ್ಲಿ ಕೊಬ್ಬಿನ ಪದರ ಶೇಖರಣೆಯಾಗುವ ಪ್ರಕ್ರಿಯೆಯನ್ನು ವೇಗಗೊಳಿಸುವುದರ ಜೊತೆಗೆ ಉರಿಯೂತವನ್ನೂ ಹೆಚ್ಚಿಸುತ್ತದೆ. ಇದರಿಂದ ಹೃದಯಾಘಾತ, ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯು ಉಂಟಾಗುವ ಅಪಾಯ ಹೆಚ್ಚುತ್ತದೆ.

ಕೇವಲ 7 ಸೆಕೆಂಡ್‌ನಲ್ಲಿ ಹೃದಯದ ಕಾಯಿಲೆ ಪತ್ತೆಹಚ್ಚುವ ಆ್ಯಪ್ ಕಂಡುಹಿಡಿದ 14ರ ಈ ಪುಟ್ಟ ಬಾಲಕ
ಕೇವಲ 7 ಸೆಕೆಂಡ್‌ನಲ್ಲಿ ಹೃದಯದ ಕಾಯಿಲೆ ಪತ್ತೆಹಚ್ಚುವ ಆ್ಯಪ್ ಕಂಡುಹಿಡಿದ 14ರ ಈ ಪುಟ್ಟ ಬಾಲಕ

ಅಷ್ಟೇ ಅಲ್ಲದೆ, ಮಧುಮೇಹವು ಹೃದಯಕ್ಕೆ ಸಂಬಂಧಿಸಿದ ನರಗಳ ಮೇಲೂ ಪರಿಣಾಮ ಬೀರಬಹುದು. ಇದರಿಂದ ಹೃದಯಕ್ಕೆ ರಕ್ತದ ಹರಿವು ಕಡಿಮೆಯಾದಾಗ ಕಾಣಿಸಿಕೊಳ್ಳುವ ಸಾಮಾನ್ಯ ಲಕ್ಷಣಗಳು ಕೆಲವೊಮ್ಮೆ ಗೋಚರಿಸುವುದಿಲ್ಲ. ಹೀಗಾಗಿ ಮಧುಮೇಹ ಹೊಂದಿರುವವರು ಯಾವುದೇ ಮುನ್ಸೂಚನೆಯಿಲ್ಲದೆ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆಯಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ 'ಸೈಲೆಂಟ್ ಹಾರ್ಟ್ ಅಟ್ಯಾಕ್' ಎಂದು ಕರೆಯಲಾಗುತ್ತದೆ.

ಆದರೆ, ಇಂತಹ ಅಪಾಯಗಳನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು ಎಂಬುದು ಸಮಾಧಾನಕರ ಸಂಗತಿ.

ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರಲಿ

ರಕ್ತದಲ್ಲಿನ sugar ಪ್ರಮಾಣವನ್ನು ನಿಯಂತ್ರಣದಲ್ಲಿಡುವುದು ಮುಖ್ಯವಾದರೂ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅದೊಂದೇ ಸಾಕಾಗುವುದಿಲ್ಲ. ರಕ್ತದೊತ್ತಡ, ಕೊಲೆಸ್ಟ್ರಾಲ್, ಮೂತ್ರಪಿಂಡಗಳ ಕಾರ್ಯನಿರ್ವಹಣೆ ಮತ್ತು ದೇಹದ ತೂಕವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು ಅಷ್ಟೇ ಅಗತ್ಯ. ಧೂಮಪಾನ ತ್ಯಜಿಸುವುದು, ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಹೃದಯಕ್ಕೆ ಪೂರಕವಾದ ಆರೋಗ್ಯಕರ ಆಹಾರ ಸೇವಿಸುವುದು ಬಹಳ ಮುಖ್ಯ.

35 ವರ್ಷಗಳ ಕಾಲ ಸಾವಿರಾರು ಮಕ್ಕಳ ಜೀವ ಉಳಿಸಿದ ಡಾಕ್ಟರ್‌: ವೇದಿಕೆ ಮೇಲೆ ಬಂದು ಕಣ್ಣೀರಿಡುತ್ತಲೇ ಕೃತಜ್ಞತೆ ಸಲ್ಲಿಸಿದ ರೋಗಿಗಳು
35 ವರ್ಷಗಳ ಕಾಲ ಸಾವಿರಾರು ಮಕ್ಕಳ ಜೀವ ಉಳಿಸಿದ ಡಾಕ್ಟರ್‌: ವೇದಿಕೆ ಮೇಲೆ ಬಂದು ಕಣ್ಣೀರಿಡುತ್ತಲೇ ಕೃತಜ್ಞತೆ ಸಲ್ಲಿಸಿದ ರೋಗಿಗಳು

ಇತ್ತೀಚಿನ ದಿನಗಳಲ್ಲಿ ಲಭ್ಯವಿರುವ ಕೆಲವು ಹೊಸ ಮಧುಮೇಹ ಔಷಧಿಗಳಾದ SGLT2 ಇನ್ಹಿಬಿಟರ್ಸ್ ಮತ್ತು GLP-1 ರಿಸೆಪ್ಟರ್ ಅಗೊನಿಸ್ಟ್ಸ್ ಸೂಕ್ತ ರೋಗಿಗಳಿಗೆ ನೀಡಿದಾಗ ಹೃದಯ ಮತ್ತು ಮೂತ್ರಪಿಂಡಗಳ ಆರೋಗ್ಯದ ರಕ್ಷಣೆಯಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತಿವೆ.

Heart Health : ರಾತ್ರಿ ಮಲಗುವ ಮುನ್ನ ಈ 4 ತಪ್ಪುಗಳನ್ನು ಮಾಡುತ್ತಿದ್ದೀರಾ? ಹೃದಯದ ಆರೋಗ್ಯಕ್ಕೆ ಅಪಾಯ!
Heart Health : ರಾತ್ರಿ ಮಲಗುವ ಮುನ್ನ ಈ 4 ತಪ್ಪುಗಳನ್ನು ಮಾಡುತ್ತಿದ್ದೀರಾ? ಹೃದಯದ ಆರೋಗ್ಯಕ್ಕೆ ಅಪಾಯ!

ಎದೆ ನೋವು ಕಾಣಿಸಿಕೊಳ್ಳೋ ತನಕ ಕಾಯಬೇಡಿ

ಸಂದೇಶ ಸರಳವಾಗಿದೆ: ಎದೆನೋವು ಕಾಣಿಸಿಕೊಳ್ಳುವವರೆಗೆ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮುಂದೂಡಬೇಡಿ.

ನಿಮಗೆ ಮಧುಮೇಹವಿದ್ದರೆ, heart ಆರೋಗ್ಯಕ್ಕೂ ಕ್ಕೂ ಆದ್ಯತೆ ನೀಡಿ. ನಿಯಮಿತ ಆರೋಗ್ಯ ತಪಾಸಣೆ, ಆರಂಭಿಕ ಹಂತದಲ್ಲಿಯೇ ಅಪಾಯದ ಮೌಲ್ಯಮಾಪನ ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಗಂಭೀರ ತೊಂದರೆಗಳನ್ನು ತಡೆಗಟ್ಟಬಹುದು ಹಾಗೂ ಜೀವಗಳನ್ನು ಉಳಿಸಬಹುದು. ಏಕೆಂದರೆ ಮಧುಮೇಹ ನಿರ್ವಹಣೆ ಎಂದರೆ ಕೇವಲ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದಲ್ಲ; ಹೃದಯದ ಆರೋಗ್ಯವನ್ನು ಕಾಪಾಡುವುದೂ ಅಷ್ಟೇ ಮುಖ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+