ಮಹಿಳೆಯರಿಗೆ ಗುಡ್‌ನ್ಯೂಸ್: ಬೆಂಗಳೂರು ಸೀರೆ ಉತ್ಸವ, ಕಡಿಮೆ ಬೆಲೆಗೆ ಸಿಗಲಿದೆ ಸೀರೆ!
ಮಹಿಳೆಯರಿಗೆ ಇಲ್ಲೊಂದು ಭರ್ಜರಿ ಗುಡ್‌ನ್ಯೂಸ್ ಇದೆ. ಮಹಿಳೆಯರಿಗೆ ಸೀರೆ ಎಂದರೆ ಎಲ್ಲಿಲ್ಲದ ಪ್ರೀತಿ. ಇದೀಗ ಮಹಿಳೆಯರಿಗೆ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಹಾಗೂ ಅತ್ಯಾಕರ್ಷಕ ವಿನ್ಯಾಸದ ಸೀರೆ ಸಿಗುವ ಸುವರ್ಣ ಅವಕಾಶವೊಂದು ಸಿಕ್ಕಿದೆ. ನವದೆಹಲಿಯ ರಾಷ್ಟ್ರೀಯ ವಿನ್ಯಾಸ ಕೇಂದ್ರದಿಂದ ಆಫರ್‌ವೊಂದನ್ನು ಕೊಡಲಾಗುತ್ತಿದೆ. ಜವಳಿ ಸಚಿವಾಲಯದ ಕೈಮಗ್ಗ ಅಭಿವೃದ್ಧಿ ಆಯುಕ್ತಾಲದ ಸಹಯೋಗದಲ್ಲಿ ಮಾರ್ಚ್ 14ರಿಂದ 20ರವರೆಗೆ ಬೃಹತ್ ಸೀರೆ ಉತ್ಸವ ನಡೆಯಲಿದೆ. ಇದರ ಕಂಪ್ಲೀಟ್ ಮಾಹಿತಿ ಹಾಗೂ ಸೀರೆ ಉಡಲು ಸಿಂಪಲ್ ಟಿಪ್ಸ್ ಇಲ್ಲಿದೆ.
ಬೆಂಗಳೂರಿನಲ್ಲಿ ಮಹಿಳೆಯರು ಇಷ್ಟಪಡುವ ಸೀರೆಗಳು ಅದರಲ್ಲೂ ಕಡಿಮೆ ಬೆಲೆಗೆ ಸಿಗುವ ಆಫರ್ ಸುದ್ದಿ ಇಲ್ಲಿದೆ. ಬೆಂಗಳೂರಿನ ಜೆ.ಪಿ.ನಗರದ ಶುಭ್ ಕನ್ವೆನ್ಷನ್ ಸೆಂಟರ್‌ನಲ್ಲಿ ಬೆಂಗಳೂರು ಸೀರೆ ಉತ್ಸವವನ್ನು ಆಯೋಜಿಸಲಾಗಿದೆ. ಈ ಉತ್ಸವವು ಮಾರ್ಚ್ 14ರಿಂದ 20ರ ವರೆಗೆ ಪ್ರತಿದಿನ ಬೆಳಿಗ್ಗೆ 11ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಹಾಗೂ ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸೀರೆಗಳು ಈ ಉತ್ಸವದಲ್ಲಿ ಇರಲಿವೆ. ತಯಾರಿಕರಿಂದ ನೇರವಾಗಿ ಹಾಗೂ ಕಡಿಮೆ ಬೆಲೆಗೆ ನೀವು ಸೀರೆಗಳನ್ನು ಖರೀದಿಸಬಹುದಾಗಿದೆ.

ಈ ಸೀರೆ ಉತ್ಸವದ ವಿಶೇಷವೆಂದರೆ ದೇಶದ ವಿವಿಧ ಭಾಗದಿಂದ 75ಕ್ಕೂ ಹೆಚ್ಚು ಕೈಮಗ್ಗ ಉದ್ಯಮಿಗಳು, ಸ್ವ-ಸಹಾಯ ಗುಂಪುಗಳು ಹಾಗೂ ಸಹಕಾರಿ ಸಂಘಗಳ ಪ್ರತಿನಿಧಿಗಳು ಸೀರೆಗಳ ಸಂಗ್ರಹ ಪ್ರದರ್ಶಿಸಲಿದ್ದಾರೆ.
ಕಡಿಮೆ ಬೆಲೆಗೆ ಸೀರೆ: ಇನ್ನು ನಾಲ್ಕು ದಿನಗಳ ಈ ಉತ್ಸವದಲ್ಲಿ ಕಡಿಮೆ ಬೆಲೆಗೆ ಸೀರೆಗಳು ಸಿಗಲಿವೆ. ಕಡಿಮೆ ಬೆಲೆಯ ಹಾಗೂ ಅತ್ಯಾಕರ್ಷಕ ಸೀರೆಗಳು ಈ ಉತ್ಸವದಲ್ಲಿ ಸಿಗಲಿವೆ. ದೇಶದ ವಿವಿಧ ರಾಜ್ಯಗಳಿಂದ ವಿವಿಧ ಮಾದರಿಯ ಸೀರೆಗಳ ಮಾರಾಟ ಇಲ್ಲಿ ನಡೆಯಲಿದೆ. ಪ್ರವೇಶ ಶುಲ್ಕ ನಿಗದಿ ಮಾಡಿಲ್ಲ. ಹೀಗಾಗಿ ಆಸಕ್ತರು ಉಚಿತವಾಗಿ ಈ ಉತ್ಸವದಲ್ಲಿ ಪಾಲ್ಗೊಳ್ಳಬಹುದಾಗಿದೆ. 75ಕ್ಕೂ ಹೆಚ್ಚು ಕೈಮಗ್ಗಗಳಿಂದ ತಯಾರಿಸಿರುವ ಹಲವು ವಿಶೇಷ ವಿನ್ಯಾಸದ ಸೀರೆಗಳು ಇಲ್ಲಿ ಮಾರಾಟವಾಗಲಿವೆ ಎಂದು ಹೇಳಲಾಗಿದೆ.
ಸೀರೆ ಉಡಲು ಇಲ್ಲಿದೆ ಸಿಂಪಲ್ ಟಿಪ್ಸ್!
ನೀವು ಹೊಸದಾಗಿ ಸೀರೆ ಉಡುವುದನ್ನು ಕಲಿಯುತ್ತಿದ್ದೀರಾ. ಇಲ್ಲ ನಿಮಗೆ ಸೀರೆ ಉಡುವುದಕ್ಕೆ ಕಷ್ಟವಾಗುತ್ತಿದೆಯಾ ಹಾಗದರೆ ಇಲ್ಲಿ ನಿಮಗೊಂದಿಷ್ಟು ಟಿಪ್ಸ್ ಇವೆ. ಟಿಪ್ಸ್‌ಗಳನ್ನು ಫಾಲೋ ಮಾಡಿದರೆ ನೀವು ಸರಳವಾಗಿ ಸೀರೆ ಉಡುವುದಕ್ಕೆ ತುಂಬಾನೇ ಹೆಲ್ಪ್ ಆಗಲಿದೆ.
ಸೀರೆ ಉಡುವುದಕ್ಕೆ ಸಹಕಾರಿಯಾಗುವಂತೆ ಇದೀಗ ಮಾರುಕಟ್ಟೆಯಲ್ಲಿ ಶೇಪ್‌ವೇರ್ ಪರಿಚಯಿಸಲಾಗಿದೆ. ಈ ಶೇಪ್‌ವೇರ್ ಅನ್ನು ಬಳಸುವುದರಿಂದ ನಿಮಗೆ ಕಾಟನ್ ಲಂಗ ಅಥವಾ ಪೆಟಿಕೋಟ್ ಧರಿಸುವ ಬದಲಾಗಿ ಶೇಪ್‌ವೇರ್ ಸೀರೆಗೆ ಹೊಂದಾಣಿಕೆಯಾಗುತ್ತದೆ. ಇನ್ನು ನೀವು ಹೀಲ್ಸ್ ಹಾಕಿಕೊಳ್ಳುವುದಿದ್ದರೆ ಹೀಲ್ಸ್ ಹಾಕಿಕೊಂಡು ಸೀರೆ ಉಟ್ಟುಕೊಳ್ಳಬಹುದು. ಇದರಿಂದ ಕಾಲಿಗೆ ಸೀರೆ ಸಿಕ್ಕಿ ಹಾಕಿಕೊಳ್ಳದಂತೆ ಎಚ್ಚರಿಕೆ ವಹಿಸಲು ಸಾಧ್ಯವಿದೆ. ಸೀರೆ ಉಡುವುದಕ್ಕಿಂತ ಮುಂಚೆ ಆರಾಮದಾಯಕ ಉಡುಪುಗಳನ್ನು ಧರಿಸಿ.












Click it and Unblock the Notifications