Toxic Boss: ಟಾಕ್ಸಿಕ್ ಬಾಸ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಸಿಂಪಲ್ ಟಿಪ್ಸ್!
Toxic Boss: ಕೆಲಸ ಬದುಕಿನ ಅತ್ಯಂತ ಮುಖ್ಯಭಾಗ. ಆದರೆ ಕೆಲಸವೇ ಜೀವನವಲ್ಲ. ಆದರೆ ಒಬ್ಬ ಟಾಕ್ಸಿಕ್ ಮತ್ತು ಕಿರಿಕಿರಿಯ ಬಾಸ್ ಸಿಕ್ಕರೆ ನಿಮ್ಮ ವೈಯಕ್ತಿಯ ಜೀವನ ಹಾಗೂ ವೃತ್ತಿ ಎರಡೂ ಹಾಳಾಗುತ್ತೆ. ಪರ್ಸನಲ್ ಲೈಫ್ ಮತ್ತು ಜಾಬ್ ಎರಡನ್ನೂ ಬ್ಯಾಲೆನ್ಸ್ ಮಾಡುವುದು ಈಗ ಇರುವ ಪ್ರಮುಖ ಸವಾಲು. ಇತ್ತೀಚಿನ ವರ್ಷಗಳಲ್ಲಿ ಕಂಪನಿಗಳ ಬೇಡಿಕೆ ಹೆಚ್ಚಾಗುತ್ತಿದೆ. ಎಷ್ಟು ದುಡಿದರೂ ಸಾಕಾಗಲ್ಲ ಎನ್ನುವ ಟೈಮ್‌ನಲ್ಲಿ ನಿಮಗೊಬ್ಬರು ಟಾಕ್ಸಿಕ್ ಬಾಸ್ ಸಿಕ್ಕರೆಂದರೆ ನಿಮ್ಮ ಪರ್ಸನಲ್ ಲೈಫ್‌ಗೂ ಪೆಟ್ಟು ಬೀಳುತ್ತದೆ. ಇಷ್ಟಕ್ಕೂ ಕಿರಿಕಿರಿ ಕೊಡುವ ಬಾಸ್‌ನ ಲಕ್ಷಣಗಳೇನು, ಈ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಸಿಂಪಲ್ ಟಿಪ್ಸ್ ಇಲ್ಲಿವೆ.
ಒಬ್ಬ ಟಾಕ್ಸಿಕ್ ಬಾಸ್ ಇಡೀ ಉದ್ಯೋಗದ ಸ್ಥಳವನ್ನು ಕೆಡಿಸಬಲ್ಲ. ಉದ್ಯೋಗಿಗಳ ಕೆಲಸದ ಸಾಮರ್ಥ್ಯ, ಕೆಲಸದ ವಾತಾವರಣ ಹಾಗೂ ಉದ್ಯೋಗಿಗಳ ನಡುವೆ ಹೊಂದಾಣಿಕೆ ಕಡಿಮೆಯಾಗುವುದಕ್ಕೆ ಕಾರಣರಾಗಬಲ್ಲರು. ನಿಮಗೆ ವೈಯಕ್ತಿಕವಾಗಿಯೂ ಸಮಸ್ಯೆ ಇದ್ದರೆ ಕೆಲಸದ ಒತ್ತಡವನ್ನೂ ನಿಭಾಯಿಸುವುದು ಸವಾಲು. ಟಾಕ್ಸಿಕ್ ಬಾಸ್ ಎಂದರೆ ಯಾರು, ಅವರು ಯಾವ ರೀತಿ ರಿಯಾಕ್ಟ್ ಮಾಡುತ್ತಾರೆ ಅಂತ ಗೊತ್ತಾದರೆ ನೀವು ಅಲರ್ಟ್ ಆಗಬಹುದು. ಅದು ಹೇಗೆ ಅಂತ ನೋಡೋಣ..

ಟಾಕ್ಸಿಕ್ & ಕಿರಿಕಿರಿ ಬಾಸ್‌ನ ಪ್ರಮುಖ ಲಕ್ಷಣಗಳು
* ತಾನು ಹೇಳಿದ್ದೇ ನಡೆಯಬೇಕು: ಟಾಕ್ಸಿ ಬಾಸ್ ಯಾವಾಗಲೂ ತಾನು ಹೇಳಿದ್ದೇ ನಡೆಯಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಅವರಿಗೆ ಉದ್ಯೋಗಿಗಳ ಅಭಿಪ್ರಾಯ ಕೇಳಬೇಕು ಎಂದು ಅನಿಸುವುದಿಲ್ಲ, ಕೇಳುವುದೂ ಇಲ್ಲ.
* ಉದ್ಯೋಗಿಗಳ ಮೇಲೆ ನಂಬಿಕೆ ಕಡಿಮೆ: ಕಿರಿಕಿರಿಯ ಬಾಸ್‌ಗಳಿಗೆ ಅವರ ಉದ್ಯೋಗಿಗಳ ಸಾಮರ್ಥ್ಯ ಹಾಗೂ ಕೆಲಸದ ಬಗ್ಗೆ ಎಂದಿಗೂ ಸಮಾಧಾನ ಬರಲ್ಲ. ಅವರು ಮೈಕ್ರೋ ಮ್ಯಾನೇಜ್‌ಮೆಂಟ್‌ಗೆ ಅಂದರೆ ಪ್ರತಿ ಸಣ್ಣ ವಿಷಯಗಳನ್ನೂ ಪರಿಶೀಲಿಸುವುದಕ್ಕೆ ಹಾಗೂ ಪ್ರಶ್ನೆ ಮಾಡುವುದಕ್ಕೆ ಮುಂದಾಗುತ್ತಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಸುಲಭವಾಗಿ ಆಗಬಹುದಾದ ಕೆಲಸಗಳನ್ನೂ ಕಠಿಣವಾಗಿಸುತ್ತಾರೆ.
* ಮಾತು: ಮಾತು ಮಾಣಿಕ್ಯ. ಮಾತು ಆಡಿದರೆ ಹೋಯಿತು.. ಮುತ್ತು ಒಡೆದರೆ ಹೋಯಿತು ಎನ್ನುವ ನಾಣ್ಣುಡಿ ಕೆಲಸದ ವಿಚಾರದಲ್ಲೂ ಅನ್ವಯಿಸುತ್ತದೆ. ಕಿರಿಕಿರಿಯ ಬಾಸ್‌ಗಳು ತಮ್ಮ ಮಾತುಗಳಿಂದಲೇ ಉದ್ಯೋಗಿಗಳನ್ನು ಕೆಣಕುತ್ತಾರೆ. ಅವರೆಂದಿಗೂ ಉದ್ಯೋಗಿಗಳೊಂದಿಗೆ ಒಳ್ಳೆಯ ಸಂಬಂಧವನ್ನು ಬೆಳೆಸಿಕೊಳ್ಳುವುದಿಲ್ಲ. ಉದ್ಯೋಗಿಗಳ ಭಾವನೆ ಹಾಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ.
* ತಪ್ಪಾದರೆ ನಡೆದುಕೊಳ್ಳುವ ವಿಧಾನ: ಕೆಲಸದಲ್ಲಿ ಸಣ್ಣ ತಪ್ಪುಗಳಾದರೂ ಬಾಸ್ / ಮೇಲ್ವಿಚಾರಕರು ನಡೆದುಕೊಳ್ಳುವ ವಿಧಾನವೇ ನಿಮ್ಮ ಬಾಸ್ ಕಿರಿಕಿರಿಯ ಬಾಸ್ ಹೌದೋ ಅಲ್ಲವೋ ಎನ್ನುವುದನ್ನು ತಿಳಿಸುತ್ತದೆ. ಸಾಮಾನ್ಯವಾಗಿ ನಾರ್ಮಲ್ ಬಾಸ್ ನೋಡಿಕೊಳ್ಳಿ, ಈ ರೀತಿ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಿ ಅಂತ ಹೇಳಿದರೆ. ಕಿರಿಕಿರಿಯ ಬಾಸ್ ಇದೇ ವಿಚಾರಕ್ಕೆ ಟಾರ್ಗೆಟ್ ಮಾಡುವುದು ಇದೆ.
* ಅಧಿಕಾರವೇ ಅಸ್ತ್ರ: ಇನ್ನು ಸಾಮಾನ್ಯವಾಗಿ ಕಿರಿಕಿರಿಯ ಬಾಸ್ ನಿಮಗೆ ಮಾಡಲು ಸಾಧ್ಯವಾಗದಷ್ಟು ಹಾಗೂ ನೀವು ಹೆಚ್ಚು ಸಮಯವನ್ನು ಕೆಲಸದಲ್ಲೇ ಕಳೆಯುವಂತೆ ಮಾಡುತ್ತಾರೆ. ಬಾಸ್ ಯಾವ ಕೆಲಸವನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎನ್ನುವ ವಿಚಾರದಲ್ಲಿ ಉದ್ಯೋಗಿಗಳಲ್ಲಿ ಗೊಂದಲ ನಿರ್ಮಾಣವಾಗುತ್ತದೆ. ಇನ್ನು ಮುಖ್ಯವಾಗಿ ಬಾಸ್‌ಗಳು ತಮ್ಮ ಅಧಿಕಾರವನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ.
ಟಾಕ್ಸಿಕ್ ಬಾಸ್‌ನ ಡೀಲ್ ಮಾಡುವುದು ಹೇಗೆ
* ಅವರ ನಿರೀಕ್ಷೆ ಏನು ಎಂದು ಅರ್ಥ ಮಾಡಿಕೊಳ್ಳಿ: ಇನ್ನು ಟಾಕ್ಸಿಕ್ ಬಾಸ್ ಅಥವಾ ಕಿರಿಕಿರಿಯ ಬಾಸ್‌ನ ಜೊತೆ ಡೀಲ್ ಮಾಡುವ ಮುಂಚೆ ಅವರ ನಿರೀಕ್ಷೆ ಏನು ಹಾಗೂ ಅವರು ಏನು ಕೇಳುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಬಾಸ್‌ನ ಜೊತೆಗೆ ಕುಳಿತು ಮಾತನಾಡಿ. ಅವರು ನಿಮ್ಮಿಂದ ಏನು ನಿರೀಕ್ಷೆ ಮಾಡುತ್ತಿದ್ದಾರೆ ಎನ್ನುವುದನ್ನು ಕುಳಿತು ಮಾತನಾಡಿಕೊಂಡು. ಅವರು ನಿರೀಕ್ಷೆ ಮಾಡುತ್ತಿರುವ ಕೆಲಸ ನಿಮ್ಮದ ಆಗುತ್ತಾ ಅಥವಾ ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಯಾವುದಾದರೂ ಕೆಲಸ ಸಾಧ್ಯವಾಗದೆ ಇದ್ದರೆ. ಅದು ಯಾವ ಕಾರಣಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ವಿವರಿಸಿ.
* ಮನಸ್ಸಿಗೆ ಹಚ್ಚಿಕೊಳ್ಳಬೇಡಿ: ಕೆಲಸದ ಜಾಗದಲ್ಲಿ ನಡೆಯುವ ಎಲ್ಲಾ ವಿಷಯಗಳನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಇದರಿಂದ ನಿಮ್ಮ ಮನೆ ಹಾಗೂ ಕೆಲಸದ ಜಾಗ ಎರಡರಲ್ಲೂ ನಿಮಗೆ ನೆಮ್ಮದಿ ಇರುವುದಿಲ್ಲ. ಮಾನಸಿಕವಾಗಿ ಸ್ಟ್ರಾಂಗ್ ಆಗಿ. ಕಿರಿಕಿರಿ ಬಾಸ್ ಹೇಳುವ ಯಾವ ಮಾತುಗಳನ್ನು ಪರಿಗಣಿಸಬೇಕು. ಯಾವುದನ್ನು ಪರಿಗಣಿಸಬಾರದು ಅಂತ ನಿರ್ಧಾರ ಮಾಡಿ.
* ಹೆಚ್ಚು ಚರ್ಚೆ ಮಾಡಬೇಡಿ: ಕೆಲಸದ ಜಾಗದಲ್ಲಿ ಅಥವಾ ಹೊರಗೆ ಕಿರಿಕಿರಿ ಬಾಸ್‌ನ ಬಗ್ಗೆ ಹೆಚ್ಚು ಚರ್ಚೆ ಮಾಡಬೇಡಿ. ಯಾರ ಬಳಿಯೂ ಅಭಿಪ್ರಾಯಗಳನ್ನು ಹೇಳುವುದಕ್ಕೆ ಹೋಗಬೇಡಿ. ಇದು ನಿಮ್ಮ ಕೆಲಸದ ವಾತಾವರಣವನ್ನು ಕೆಡಿಸುವ ಸಾಧ್ಯತೆ ಇರುತ್ತದೆ. ಇಲ್ಲವೇ ಬಾಸ್ ಕಿರಿಕಿರಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಸಹ ಇರುತ್ತದೆ.
* ದಾಖಲೆ ಇರಿಸಿ: ಕೆಲಸದಲ್ಲಿ ಮಾತನಾಡುವುದೆಲ್ಲವೂ ದಾಖಲೆಗಳೇ. ನೀವು ಎಷ್ಟು ಕೆಲಸ ಮಾಡಿದ್ದೀರಿ. ಅವರು ಕೊಟ್ಟ ಟಾಸ್ಕ್‌ಗಳೇನು
ಎನ್ನುವುದನ್ನು ಲಿಸ್ಟ್ ಮಾಡಿಕೊಳ್ಳಿ. ಅಧಿಕೃತವಾಗಿ ಅವರು ಕೊಟ್ಟಿರುವ ಟಾಸ್ಕ್‌ಗಳನ್ನು ಸಾಧ್ಯವಾದಷ್ಟು ಇ ಮೇಲ್ ಮೂಲಕ ಮಾಡಿ. ಮೀಟಿಂಗ್‌ಗಳಲ್ಲಿ ಹೇಳುವ ಟಾಸ್ಕ್‌ಗಳನ್ನು ಮೇಲ್ ಮಾಡಿ ಈ ಟಾಸ್ಕ್‌ಗಳು ಸರಿ ಇವೆಯೇ ಎಂದು ಕೇಳಿಕೊಳ್ಳಿ. ಪೋನ್ ಅಥವಾ ಮೆಸೇಜ್‌ಗಳ ಮೂಲಕ ಅವರು ಏನು ಹೇಳಿದ್ದಾರೆ ಎನ್ನುವುದನ್ನು ಜೋಪಾನ ಮಾಡಿಕೊಳ್ಳಿ.
* HR ಸಹಾಯ ತೆಗೆದುಕೊಳ್ಳಿ: ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲವೇ ಕೆಲಸದಲ್ಲಿ ವಿಪರೀತ ಸಮಸ್ಯೆ ಆಗುತ್ತಿದೆ ಎಂದಾದರೆ ಎಚ್‌ಆರ್ ಸಹಾಯ ಪಡೆದುಕೊಳ್ಳಿ. ಎಚ್‌ಆರ್ ಸಹಾಯ ತೆಗೆದುಕೊಳ್ಳುವುದರಿಂದ ನೀವು ಅವರ ಗಮನಕ್ಕೂ ವಿಷಯವನ್ನು ತಂದಂತೆ ಆಗುತ್ತದೆ. ಅಲ್ಲದೆ ಕಂಪನಿಯ ನಿಯಮಗಳನ್ನು ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗುತ್ತೆ.
ಬೇರೆ ಆಯ್ಕೆಗಳನ್ನು ಹುಡುಕಿ: ಕೆಲಸದಲ್ಲಿ ಮುಂದುವರಿಯುವುದಕ್ಕೆ ಸಾಧ್ಯವಿಲ್ಲ. ಇನ್ನು ಈ ಕೆಲಸ ಮಾಡಲು ಆಗುತ್ತಲ್ಲೇ ಇಲ್ಲ ಎನ್ನುವ ಪರಿಸ್ಥಿತಿ ನಿಮಗೆ ಎದುರಾದರೆ ಬೇರೆ ಆಯ್ಕೆಗಳನ್ನು ನೋಡಿ. ಆದರೆ ಬೇರೆಯ ಆಯ್ಕೆಗಳನ್ನು ಮಾಡುವ ಮುಂಚೆ ಯಾವುದೇ ಕಾರಣಕ್ಕೂ ಕೆಲಸ ಬಿಡಬೇಡಿ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications