Ragi Mudde: ರಾಗಿ ಮುದ್ದೆ ತಿನ್ನುವುದರಿಂದ ಸಿಗಲಿದೆ 5 ಆರೋಗ್ಯ ಲಾಭಗಳು!
Ragi Mudde: ಇಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ ಎನ್ನುವ ಗಾದೆ ಕನ್ನಡದಲ್ಲಿದೆ. ಮುದ್ದೆಯ ಮಹತ್ವವನ್ನು ಒಂದೇ ಸಾಲಿನಲ್ಲಿ ಹೇಳುವ ಗಾದೆ ಇದು. ಮುದ್ದೆ ಕನ್ನಡಿಗರ ಆಹಾರ ಸಂಸ್ಕೃತಿಯಲ್ಲಿರುವ ಪ್ರಮುಖವಾಗಿದೆ. ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದಲ್ಲಿ ಮುದ್ದೆಯ ಬಳಕೆ ಹೆಚ್ಚು. ರಾಗಿ ಮುದ್ದೆಯ ಮತ್ತೊಂದು ವಿಶೇಷವೆಂದರೆ ಇದು ನಾನ್‌ವೆಜ್ ಹಾಗೂ ವೆಜ್ ಎರಡಕ್ಕೂ ಬೆಸ್ಟ್ ಕಾಂಬಿನೇಷನ್. ಇನ್ನು ಮುದ್ದೆಯಿಂದ ನಿಮಗೇ ತಿಳಿಯದೆ ಇರುವ ಹಲವು ಆರೋಗ್ಯ ಉಪಯೋಗಗಳು ಇವೆ. ಮುದ್ದೆಯನ್ನು ತಿನ್ನುವುದರಿಂದ ದೇಹದ ಅಂಗಾಂಗಗಳು ಬಲಿಷ್ಠವಾಗಲಿವೆ. ಅಲ್ಲದೇ ಇನ್ನೂ ಹಲವು ಆರೋಗ್ಯಕರ ಅಂಶಗಳು ಮುದ್ದೆಯಲ್ಲಿ ಇವೆ. ಅದೇನು ಎನ್ನುವ ವಿವರ ನೋಡೋಣ.
ಕರ್ನಾಟಕದಲ್ಲಿ ಮುದ್ದೆಗೆ ತನ್ನದೇ ಇತಿಹಾಸವಿದೆ. ರಾಗಿ ಮುದ್ದೆಯ ಬಗ್ಗೆ ಗಾದೆಗಳಲ್ಲಿ ಹಾಗೂ ಹಾಡುಗಳಲ್ಲೂ ಉಲ್ಲೇಖವಿದೆ. ಇಷ್ಟರ ಮಟ್ಟಿಗೆ ಕರುನಾಡಿನ ಆಹಾರ ಪದ್ಧತಿಯಲ್ಲಿ ಮುದ್ದೆಗೆ ವಿಶೇಷವಾದ ಸ್ಥಾನವಿದೆ. ಮಸ್ಸೊಪ್ಪು, ಸೊಪ್ಪಿನ ಸಾರು ಹಾಗೂ ಚಿಕನ್ ಸಾರು, ಮಟನ್ ಸಾರಿನೊಂದಿಗೂ ಮುದ್ದೆ ಬೆಸ್ಟ್ ಕಾಂಬಿನೇಷನ್. ಬಾಯಿಗೂ ರುಚಿ ದೇಹಕ್ಕೂ ತಂಪು ದಿನಕ್ಕೊಂದು ಮುದ್ದೆಯನ್ನಾದರೂ ತಿನ್ನುವುದರಿಂದ ನೀವು ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ಎನ್ನುತ್ತಾರೆ ವೈದ್ಯರು. ಹಾಗಾದರೆ ಮುದ್ದೆಯ ಲಾಭಗಳೇನು ನೋಡೋಣ ಬನ್ನಿ.

ರಾಗಿ ಮುದ್ದೆಯ ಬಗ್ಗೆ ಪ್ರಸಿದ್ಧ ಪೌಷ್ಟಿಕತಜ್ಞ ರಯಾನ್ ಫೆರ್ನಾಂಡೊ (Ryan Fernando) ಅವರು ವಿವರಿಸಿರುವ ವಿಡಿಯೋ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗುತ್ತಿದೆ. ನೀವು ದಕ್ಷಿಣ ಭಾರತೀಯರಾಗಿದ್ದರೆ ನಿಮಗೆ ಖಂಡಿತವಾಗಿಯೂ ಮುದ್ದೆಯ ಬಗ್ಗೆ ತಿಳಿದಿರುತ್ತದೆ ಎಂದು ಹೇಳಿರುವ ಅವರು ಮುದ್ದೆಯಲ್ಲಿ ಏನೆಲ್ಲ ಸಂಪದ್ಭರಿತ ಪೌಷ್ಟಿಕಾಂಶಗಳು ಇವೆ ಎನ್ನುವುದನ್ನು ವಿವರಿಸಿದ್ದಾರೆ.
ರಾಗಿ ಮುದ್ದೆಯಲ್ಲಿ ಏನೆಲ್ಲಾ ಇದೆ ?
150 ಗ್ರಾಂ ತೂಕದ ರಾಗಿ ಮುದ್ದೆಯಲ್ಲಿ ಹಲವು ಪೌಷ್ಟಿಕಾಂಶಗಳು ಇವೆ. 150 ಗ್ರಾಂನಷ್ಟು ತೂಕದ ಮುದ್ದೆಯಲ್ಲಿ 220 ಕ್ಯಾಲೋರಿ ಇದ್ದು ನಿಮ್ಮನ್ನು ಶಕ್ತಿಯುತವಾಗಿ ಇರಿಸುವುದಕ್ಕೆ ಸಹಾಯ ಮಾಡುತ್ತದೆ. ಅಂದರೆ ನೀವು ದಿನ ಪೂರ್ತಿ ಎನರ್ಜಿಯಿಂದ ಇರುವುದಕ್ಕೆ ಮುದ್ದೆ ಸಹಕಾರಿಯಾಗಿದೆ. ಮುಂದುವರಿದು 45 ಗ್ರಾಂನಷ್ಟು (Complex Carbs) ಕಾರ್ಬೋಹೈಡ್ರೇಟ್ ಇದೆ. ಕಾರ್ಬೋಹೈಡ್ರೇಟ್ ನಿಮ್ಮ ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಲ್ಲದೇ ಹಾರ್ಮೋನ್ ಸಮತೋಲನ ಹಾಗೂ ಚಯಾಪಚಯ ಕ್ರಿಯೆಗೂ ಇದು ಸಹಕಾರಿಯಾಗಿದೆ. ಒಂದು ಮುದ್ದೆಯಲ್ಲಿ 45 ಗ್ರಾಂಗೂ ಹೆಚ್ಚು ಕಾರ್ಬೋಹೈಡ್ರೇಟ್ ಇರುವುದರಿಂದ ನಿಮ್ಮ ದೇಹದ ಶಕ್ತಿಗೆ ಬೂಸ್ಟ್ ಕೊಡುತ್ತದೆ. 4ರಿಂದ 6 ಗ್ರಾಂನಷ್ಟು (Fibber) ನಾರಿನ ಅಂಶವಿದೆ. ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗಲಿದೆ. ಇನ್ನು 100ರಿಂದ 200ಕ್ಕೂ ಹೆಚ್ಚು ಗ್ರಾಂನಷ್ಟು (Calcium) ಕ್ಯಾಲ್ಸಿಯಂ, ಮೂಳೆಗಳ ಬಲವರ್ಧನೆಗೆ ಬೇಕಾಗುವ 15ರಿಂದ 20% ರಷ್ಟು ಪೌಷ್ಟಿಕಾಂಶವನ್ನು ಇದು ಒಳಗೊಂಡಿದೆ. ಇನ್ನು 3ರಿಂದ 5 ಗ್ರಾಂನಷ್ಟು (Iron) ದೇಹಕ್ಕೆ ಅವಶ್ಯವಿರುವ ಕಬ್ಬಿಣದ ಅಂಶ ಇದರಲ್ಲಿ ಇದೆ. ಇದು (Anemia) ಅನಿಮಿಯ ಅಂದರೆ ದೇಹದಲ್ಲಿ ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಶುಗರ್ ಸಮಸ್ಯೆ ಇರುವವರಿಗೂ ಇದು ಅತ್ಯುತ್ತಮ ಆಹಾರವಾಗಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications