ಸಖತ್ ಜೋಕ್ಸ್: ನನ್ ಸಿನಿಮಾದಲ್ಲಿ ನಟಿಸ್ತೀಯಾ? ಹೆಂಡ್ತಿಗೆ ಗಂಡ ಕೊಟ್ಟ ಆಫರ್!
ಜೀವನದಲ್ಲಿ ನಗು ಬಹಳ ಮುಖ್ಯ. ನಕ್ಕರೆ ನಮ್ಮ ಮುಖ ಅರಳುವುದರ ಜೊತೆಗೆ ನಮ್ಮ ಆರೋಗ್ಯವೂ ಅರಳುತ್ತದೆ. ನಮ್ಮ ಬಿಡುವಿಲ್ಲದ ಜೀವನದಲ್ಲಿ ನಗುವಿಗೆ ಸಮಯವೇ ಇಲ್ಲದಂತೆ ಮಾಡಿಕೊಂಡಿದ್ದೇವೆ.
ನಿಮ್ಮ ಮೊಗದಲ್ಲಿ ಮಂದಹಾಸ ಮೂಡಿಸಲು ಇಲ್ಲೊಂದಿಷ್ಟು ಹಾಸ್ಯ ಹೂರಣಗಳಿವೆ. ಬಹುಶಃ ಇಷ್ಟವಾಗಬಹುದು. ಅಜ್ಜಿ ಜೊತೆ ತರಲೆ ಮೊಮ್ಮಗನ ಕಿತಾಪತಿ, ಗಂಡ ಹೆಂಡತಿ ಜಗಳ, ಟೀಚರ್ ಸ್ಟೂಡೆಂಟ್ ಜೋಕ್ ಮೊದಲಾದವಿವೆ.
ಅವರವರ ಪಾಪ ಕರ್ಮ:
ಹೆಂಡತಿ: ರೀ, ನಿಮಗೆ ಒಂದ್ ವಿಷಯ ಗೊತ್ತಾಯ್ತಾ?
ಗಂಡ: ಏನು?
ಹೆಂಡತಿ: ನಮ್ಮಿಬ್ರು ಮದ್ವೆ ಮಾಡ್ಸಿದ್ರಲ್ಲ ಆ ಬ್ರೋಕರ್ ಶಿವಯ್ಯ ಇವತ್ತು ಸತ್ತು ಹೋದ್ರಂತೆ ಕಣ್ರೀ.
ಗಂಡ: ಮಾಡಿದ್ದುಣ್ಣೋ ಮಾರಾಯ ಅಂತ ಅವರವರ ಪಾಪ ಕರ್ಮ ಅವ್ರು ಯಾವತ್ತಾದರೂ ಅನುಭವಿಸಬೇಕು ಬಿಡೆ.
ಇನ್ನಷ್ಟು ನಗೆಬುಗ್ಗೆಗಳು ನಿಮಗಾಗಿ ಮುಂದಿದೆ ಓದಿ....

ಅಜ್ಜಿ ಮೊಮ್ಮಗ ಜೋಕ್
ಗುಂಡ: ಅಜ್ಜಿ ನೀನು ನಿದ್ದೆ ಮಾಡ್ತಿಲ್ಲ. ನಾನು ಟಿವಿ ನೋಡ್ಲಾ?
ಅಜ್ಜಿ: ನನ್ ಜೊತೆ ಮಾತ್ನಾಡು ಪುಟ್ಟ
ಗುಂಡ: ಅಜ್ಜಿ ನಮ್ ಮನೇಲಿ ಯಾವಾಗ್ಲೂ ಆರೇ ಜನ ಇರೋದು. ನಾನು, ನೀನು, ಅಮ್ಮ, ಅಪ್ಪ, ತಂಗಿ ಮತ್ತೆ ಈ ಬೆಕ್ಕು. ಯಾಕಜ್ಜಿ?
ಗುಂಡ: ಇಲ್ಲ ಪುಟ್ಟ, ನಾಳೆ ಮನೆಗೆ ನಾಯಿ ಬರ್ತಿದೆ. ಆಗ ಏಳು ಜನ ಆಗ್ತೀವಿ
ಗುಂಡ: ಆದ್ರೆ ಅಜ್ಜಿ ಅ ನಾಯಿ ಬಂದ್ರೆ ಬೆಕ್ಕನ್ನು ತಿಂದುಬಿಡುತ್ತಲ್ಲ. ಆಗ ಮತ್ತೆ ಆರೇ ಆಗುತ್ತೆ
ಅಜ್ಜಿ: ಇಲ್ಲ ಮಗು ನೀನು ದೊಡ್ಡವನಾದ ಮೇಲೆ ಮದುವೆ ಆಗ್ತೀಯಲ್ಲ ಅಗ ಏಳು ಆಗುತ್ತೆ.
ಗುಂಡ: ಅಯ್ಯೋ ಅಜ್ಜಿ, ತಂಗಿ ಮದ್ವೆಯಾಗಿ ಮನೆಯಿಂದ ಹೋಗಿ ಬಿಡ್ತಾಳಲ್ಲ.. ಮತ್ತೆ ಆರೇ ಆಗೋದು.
ಅಜ್ಜಿ: ನಿಂಗೆ ಮಗು ಅಗುತ್ತಲ್ಲ, ಆಗ ಮತ್ತೆ ಏಳು ಆಗುತ್ತೆ.
ಗುಂಡ: ಅಷ್ಟೊತ್ತಿಗೆ ನೀನೇ ಇರಲ್ವಲ್ಲ. ಮತ್ತೆ ಆರೇ ಆಗುತ್ತೆ.
ಅಜ್ಜಿಗೆ ಪಿತ್ತ ನೆತ್ತಿಗೇರಿ, "ಸಾಕು, ಹೋಗು ಟಿವಿ ನೋಡ್ ಹೋಗು" ಅಂತ ರೇಗುತ್ತಾರೆ.

ನೀರಿಗಿಳಿದ ಎಮ್ಮೆ
ಗಂಡ: ನೀನು ನನ್ನ ಸಿನಿಮಾದಲ್ಲಿ ಕೆಲಸ ಮಾಡ್ತೀಯಾ?
ಹೆಂಡತಿ: ಹೂಂ, ಆದ್ರೆ ನಾನೇನು ಮಾಡ್ಲಿ?
ಗಂಡ: ನೀರಿನೊಳಗೆ ನಿಧಾನವಾಗಿ ನಡೆದು ಹೋಗಬೇಕು ಅಷ್ಟೇ.
ಹೆಂಡತಿ. ಸರಿ. ಆದ್ರೆ ನಿಮ್ ಸಿನಿಮಾಗೆ ಟೈಟಲ್ ಏನು?
ಗಂಡ: 'ನೀರಿಗಿಳಿದ ಎಮ್ಮೆ'
ಗಂಡ ಮತ್ತು ಹೆಂಡತಿ ಶುರುವಾದ ಫೈಟ್ ರಾತ್ರಿ ಮಲಗೋವರೆಗೂ ನಡೆದೇ ಇತ್ತು.

ಗುಂಡನ ಉಪವಾಸ
ಗುಂಡ ಉಪವಾಸ ಮಾಡ್ತಿದ್ದ. ಹೊಟ್ಟೆ ಹಸೀತಾ ಇತ್ತು. ಸೂರ್ಯಾಸ್ತ ಆಗೋವರೆಗೂ ತಿನ್ನೋ ಹಾಗಿಲ್ಲ. ಹಸಿವು ತಡಕೊಳ್ಳೋಕೆ ಆಗ್ತಿಲ್ಲ ಗುಂಡನಿಗೆ.
ಗುಂಡ: ಸೂರ್ಯಾಸ್ತ ಆಯ್ತಾ ನೋಡು ಪುಟ್ಟ
ಪುಟ್ಟ: ಇನ್ನೂ ಇಲ್ಲ
ಸ್ವಲ್ಪ ಹೊತ್ತು ಬಿಟ್ಟು ಗುಂಡ ಮತ್ತೆ ಅದೇ ಪ್ರಶ್ನೆ ಕೇಳ್ತಾನೆ
ಗುಂಡ: ಇನ್ನೂ ಯಾಕೆ ಸೂರ್ಯ ಹೋಗಿಲ್ಲ ನೋಡು
ಪುಟ್ಟ: ಇನ್ನೂ ಹೋಗಿಲ್ಲ.
ಗುಂಡ: ಹೂಂ, ನೋಡ್ತಿದ್ರೆ ಇದು ನನ್ನನ್ನೂ ಜೊತೆಗೆ ಕರ್ಕೊಂಡು ಮುಳುಗೋ ಥರ ಇದೆ.

ಮಳೆ ಕಿತಾಪತಿ
ಗುಂಡ ತನ್ನ ಬಟ್ಟೆಗಳನ್ನ ಒಗೆದು ಬಹಳ ಕಾಲವಾಗಿ ಹೋಗಿತ್ತು. ಬಟ್ಟೆ ಒಗೆಯಲು ಕೂತಾಗೆಲ್ಲಾ ಮಳೆ ಬರ್ತಾ ಇತ್ತು. ಬಟ್ಟೆ ಒಗೆಯೋದು ಸರಿ, ಅದನ್ನು ಒಣಗಿಸಬೇಕಲ್ಲ, ಅದಕ್ಕೆ ಬಿಸಿಲು ಬರಬೇಕಲ್ಲ..!
ಒಂದು ದಿನ ಬಿಸಿಲು ಬರುತ್ತೆ. ಗುಂಡ ಇರೋ ಬರೋ ಕೆಲಸ ಎಲ್ಲಾ ಬಿಟ್ಟು ಬಟ್ಟೆ ಒಗೆಯೊ ಪೌಡರ್ ಕೊಳ್ಳಲು ಅಂಗಡಿಗೆ ಓಡ್ತಾನೆ. ಅಷ್ಟರಲ್ಲಿ ಮತ್ತೆ ಮಳೆ ಶುರುವಾಗ್ತದೆ.
ಗುಂಡ ಕಂಗಾಲು. ಆಕಾಶದ ಮೇಲೆ ಮುಖ ಮಾಡುತ್ತಾ ಗುಂಡಾ, "ಅಯ್ಯೋ ರಾಮ, ನಾನು ಬಿಸ್ಕತ್ ತಗೊಳ್ಳೋಕೆ ಬಂದಿದ್ದು ಅಷ್ಟೇ" ಅಂತಾನೆ.

ವಧೂ ವರ ಜೋಕ್
ಮದುವೆ ಮನೆಯ ಹಸೆಮಣೆ ಏರಿದ್ದಾರೆ ವಧೂ ವರ. ತನ್ನ ಕೈಹಿಡಿಯಲಿರೋ ಹುಡುಗಿಯ ಮುಖ ನೋಡುವ ಆಸೆಯಾಗುತ್ತೆ ವರನಿಗೆ.
ವರ: ಈಗ್ಲಾದ್ರೂ ನಿನ್ನ ಸೆರಗು ತೆಗೆದು ಮುಖ ನೋಡ್ಲಾ?
ವಧು: ನೋಡಿ... ಆದ್ರೆ ಆಮೇಲೆ ಅದನ್ನು ಡಿಲೀಟ್ ಮಾಡ್ಬೇಕು.

ಪುಟ್ಟನ ಕಣ್ಣೀರು
ಪುಟ್ಟ ಎಕ್ಸಾಂ ಹಾಲ್‌ನಲ್ಲಿ ಪಾಪ ಸುಮ್ಮನೆ ಕೂತಿರ್ತಾನೆ.
ಟೀಚರ್: ಯಾಕೆ ಏನೂ ಬರೀತಿಲ್ಲ?
ಪುಟ್ಟ: ಏನೂ ಗೊತ್ತಾಗ್ತಿಲ್ಲ ಮಿಸ್.
ಟೀಚರ್: ಏನಾದ್ರೂ ಬಂದಿದ್ದು ಬರೀ.
ಪುಟ್ಟ: ಹೌದು ಬರ್ತಿದೆ
ಟೀಚರ್: ಏನು ಬರ್ತಿದೆ?
ಪುಟ್ಟ: ಅಳು ಬರ್ತಿದೆ ಮಿಸ್.
(ಒನ್ಇಂಡಿಯಾ ಸುದ್ದಿ)












Click it and Unblock the Notifications