ಪತಿ ಮತ್ತು 500 ರೂಪಾಯಿಯನ್ನು ಬ್ಯಾಂಕಿಗೆ ಜಮಾ ಮಾಡಲು ಹೊರಟ ಪತ್ನಿ!

ಅಲಲೇ.. ಇದೇನಿದು.. ಸತ್ಯ ಹರಿಶ್ಚಂದ್ರ ತನ್ನ ಪತ್ನಿಯನ್ನು ನಕ್ಷತ್ರಿಕನಿಗೆ ಮಾರಿದ ಪುರಾಣ ಕಥೆಯನ್ನು ಕೇಳಿದ್ದೆವು, ಇದ್ಯಾವ ಸುದ್ದಿಯಪ್ಪಾ! ಅದೂ, ಪತ್ನಿ ಪತಿಯನ್ನು ಮಾರಿದ್ದು ಅನ್ಕೊಂಡ್ರಾ.. ಮ್ಯಾಟರ್ ಬೇರೆ ಐತೆ..

ಒಂದಕ್ಷರ ಆಕಡೆ, ಈಕಡೆ ಆದರೆ, ಪದದ ಅರ್ಥವೇ ಬದಲಾಗಿ, ಇನ್ನೇನೋ ಹೊಸ ಅರ್ಥ ಹುಟ್ಟುಹಾಕುತ್ತದೆ ಎನ್ನುವುದಕ್ಕೆ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ಅದು 26 ಅಕ್ಷರದ ಇಂಗ್ಲಿಶ್ ಇರಲಿ 52 ಅಕ್ಷರದ ಕನ್ನಡವೇ ಆಗಿರಲಿ..

ಇಲ್ಲಿ ಕೆಳಗಿರುವ ಚಿತ್ರವನ್ನೊಮ್ಮೆ ನೋಡಿ.. ಪಿ ಸುಶೀಲಾ ಎನ್ನುವವರು ಜುಲೈ ಹನ್ನೆರಡನೇ ತಾರೀಕು, ಬ್ಯಾಂಕ್ ನಿಂದ ಪಾಸ್ ಬುಕ್ ಮೂಲಕ ಹಣ ಹಿಂಪಡೆಯುವ ಸ್ಲಿಪ್ ನಲ್ಲಿ ಬರೆದ ಇಂಗ್ಲಿಶ್ ಅನ್ನು..

Women entered wrong words in bank cash withdrawl slip

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಚಿಮಕುರ್ತಿ, ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಬ್ರಾಂಚಿನಲ್ಲಿ ಅಕೌಂಟ್ ಹೊಂದಿರುರುವ ಮಹಿಳೆ ಒಂದೂವರೆ ಸಾವಿರ ರೂಪಾಯಿ ಹಣ ಡ್ರಾ ಮಾಡಲು, ವರ್ಡ್ಸ್ ನಲ್ಲಿ ಬರೆದ ಇಂಗ್ಲಿಶ್ ನಲ್ಲಿ ಸಿಕ್ಕಾಪಟ್ಟೆ ಎಡವಟ್ಟಾಗಿದೆ.

One Thousand Five Hundred Rupees only ಎಂದು ಬರೆಯವ ಬದಲು One Husband Five Hundred Rupees only ಎಂದು ಗ್ರಾಹಕಿ ಸುಶೀಲಾ ಎನ್ನುವವರು ವಿದ್ ಡ್ರಾ ಸ್ಲಿಪ್ ನಲ್ಲಿ ಬರೆದು ಬ್ಯಾಂಕ್ ಅಧಿಕಾರಿಗಳಿಗೆ ನೀಡಿದ್ದಾರೆ.

ಬ್ಯಾಂಕ್ ಅಧಿಕಾರಿಗಳು One Husband ಎಡವಟ್ಟನ್ನು ಸೂಕ್ಷವಾಗಿ ಗಮನಿಸಿದ್ದಾರೋ ಅಥವಾ ಗಮನಿಸದೇ ಹಣ ನೀಡಿ ಕಳುಹಿಸಿದ್ದಾರೋ ಎನ್ನುವ ವಿಚಾರ ತಿಳಿದುಬಂದಿಲ್ಲ. ಒಟ್ಟಿನಲ್ಲಿ, ಈ ವಿತ್ ಡ್ರಾ ಸ್ಲಿಪ್ ಸಾಮಾಜಿಕ ತಾಣದಲ್ಲಂತೂ ಹರಿದಾಡುತ್ತಿದೆ.

ಸ್ಲಿಪ್ ನಲ್ಲಿ ಟೋಕನ್ ಅನ್ನು ಹೊಡೆದು ಹಾಕಿರುವುದನ್ನು ನೋಡಿದರೆ, ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ಈ ಎಡವಟ್ಟು ಬಂದಿರಬೇಕು.. ಅಲ್ಲಿಗೆ ಗಂಡ ಬಚಾವ್! ಆಗಿರುವ ಎಡವಟ್ಟನ್ನು ನೋಡಿ, ಪತ್ನಿ ನಾಚಿಕೆಯಿಂದ ನೀರಾಗಿ ಹೋದ್ರಾ ಅಥವಾ ಬ್ಯಾಂಕ್ ಅಧಿಕಾರಿಗಳ ಮೇಲೆ ಸಿಟ್ಟಾಗಿ ಬ್ಯಾಂಕಿನಿಂದ ಹೊರನಡೆದ್ರೋ..?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+