ಯಸ್, ರೇಪ್ ಮಾಡಲು ನಾವಿಬ್ಬರೂ ಸಿದ್ಧ!
ಸಂತಾ ಮತ್ತು ಬಂತಾ ಒಂದು ದಿನ ಕಾರಿನಲ್ಲಿ ಜಾಲಿ ರೈಡಿಗೆ ಹೋಗಿರುತ್ತಾರೆ. ಮಸ್ತ್ ಮಜಾ ಮಾಡಿ ಇನ್ನೇನು ಮನೆಕಡೆಗೆ ತೆರಳಬೇಕು ಅಷ್ಟರಲ್ಲಿ ಇಬ್ಬರು ಪೊಲೀಸರು ಅವರ ಕಾರನ್ನು ಅಟಕಾಯಿಸಿಕೊಳ್ಳುತ್ತಾರೆ. 'ಏನು' ಎಂದು ಕಾರಿನೊಳಗಿಂದಲೇ ಸಂತಾ ಪೊಲೀಸಪ್ಪನನ್ನು ಕೇಳುತ್ತಾನೆ.
ಕಾರಿನ ಗಾಜಿನ ಮೇಲೆ ಟಕ್ ಟಕ್ ಎಂದು ಬೆರಳಿನಿಂದ ಬಾರಿಸಿದ ಒಬ್ಬ ಪೊಲೀಸ್, 'ಯೋ, ಇಬ್ಬರು ಹೊರಗೆ ಬನ್ನಿ' ಸನ್ನೆ ಮಾಡುತ್ತಾನೆ. ಸಂತಾ ಮತ್ತು ಬಂತಾ ಕಾರಿನಿಂದ ಇಳಿದು ಬರುತ್ತಾರೆ. ಏನೆಂದು ಕೇಳಿದಾಗ...
"ನಾವು ಇಬ್ಬರು ರೇಪಿಸ್ಟ್‌ಗಳನ್ನು ಹುಡುಕುತ್ತಿದ್ದೇವೆ" ಎಂದು ಇನ್ನೊಬ್ಬ ಪೊಲೀಸ್ ಅವರಿಗೆ ಹೇಳುತ್ತಾನೆ.
ಸಂತಾ ಮತ್ತು ಬಂತಾ ಈ ಮಾತನ್ನು ಕೇಳಿ ತೀವ್ರ ಗಲಿಬಿಲಿಗೊಳಗಾಗುತ್ತಾರೆ. ಒಂದ್ನಿಮಿಷ ಅಂತ ಹೇಳಿ ಇಬ್ಬರೂ ಸೈಡಿಗೆ ಬಂದು, ಪೊಲೀಸರಿಗೆ ಕೇಳಿಸದ ಹಾಗೆ ಮಾತಿಗಿಳಿಯುತ್ತಾರೆ. ಒಂದು ಹಂತದಲ್ಲಿ ಮಾತು ವಾಗ್ವಾದದಂತೆ ಕಂಡುಬಂದು, ಕಡೆಗೆ ಏನೋ ತೀರ್ಮಾನ ಮಾಡಿದವರಂತೆ ಇಬ್ಬರೂ ಪೊಲೀಸರ ಬಳಿ ಬರುತ್ತಾರೆ.
"ಸರಿ, ನಾವಿಬ್ಬರೂ ರೆಡಿ ಇದ್ದೇವೆ. ಯಸ್, ರೇಪ್ ಮಾಡಲು ನಾವಿಬ್ಬರೂ ಸಿದ್ಧ" ಎಂದು ಹೇಳಿದ ಕೂಡಲೆ ಪೊಲೀಸರಿಬ್ಬರೂ ಕಾಲಿಗೆ ಬುದ್ಧಿ ಹೇಳುತ್ತಾರೆ. [ಸರ್ದಾರ್ಜಿ ಜೋಕ್ಸ್]












Click it and Unblock the Notifications