ಲವೀನಾ ಮುಸಿಮುಸಿ ನಗುತ್ತಿದ್ದಳು, ಯಾಕೋ?

ಅಪ್ಪ ಅಮ್ಮ ತೋರಿಸಿದ ಯುವತಿ ಲವೀನಾಳನ್ನು ಆಜ್ಞಾಧಾರಕ ಯತೀಶ ಮದುವೆಯಾಗಿದ್ದ. ಲವೀನಾ ನೋಡಲೇನೋ ತ್ರಿಪುರ ಸುಂದರಿ, ಆದರೆ ಮದುವೆಯಾದ ಬಗ್ಗೆಯಾಗಲಿ ಹನಿಮೂನಿಗೆ ಹೋಗುವ ವಿಷಯದಲ್ಲಿ ಗಂಡ ಯತೀಶನಷ್ಟು ಎಕ್ಸೈಟ್ ಆದಂತೆ ಕಾಣುತ್ತಿರಲಿಲ್ಲ. ಯಾವಾಗಲೂ ಕಾಮ್ ಮತ್ತು ಕೂಲ್ ಆಗಿ ಇರುತ್ತಿದ್ದಳು. ಯತೀಶ ಕೆನೆಯುವ ಕುದುರೆಯಂತಾಗಿದ್ದ.

ಮದುವೆಯಾದ ನಾಲ್ಕೇ ದಿನಕ್ಕೆ ಹನಿಮೂನಿಗೆ ಹೊರಟರು. ಹೋಟೆಲ್ ರೂಂ ಪ್ರವೇಶಿಸುತ್ತಿದ್ದಂತೆ ಲವೀನಾ ಮೇಲೆ ಎಗರಲು ಯತೀಶ ರೆಡಿಯಾದ. ಅದನ್ನು ತಡೆದ ಲವೀನಾ, "ಸ್ವಲ್ಪ ತಡ್ಕಳ್ಳಿ ಡಾರ್ಲಿಂಗ್, ನಾವು ಮುಂದುವರಿಯುವ ಮುನ್ನ ನಿಮ್ಮ ಜೊತೆ ಒಂದು ಪ್ರಮುಖ ವಿಷಯ ಮಾತನಾಡಬೇಕಿದೆ" ಎಂದು ಹೇಳಿದಳು. ಕುದುರೆಯ ನಾಗಾಲೋಟಕ್ಕೆ ಲಗಾಮು ಹಾಕಿದ ಯತೀಶ್ 'ಯಸ್' ಅನ್ನುವಂತೆ ನೋಡಿದ.

"ಮದುವೆಗೂ ಮುಂಚೆ ನನಗೆ ಒಬ್ಬ ಯುವಕನೊಡನೆ ಸಂಬಂಧವಿತ್ತು. ನಿಜ ಹೇಳಬೇಕೆಂದರೆ, ನಾನು ಆತನಿಂದ ನನ್ನ ಕನ್ಯತ್ವ ಕಳೆದುಕೊಂಡಿದ್ದೇನೆ. ನಾವು ಸಂಧಿಸುವ ಮುನ್ನ ಈ ವಿಷಯ ಹೇಳಿ ಕೈತೊಳೆದುಕೊಳ್ಳುವುದು ಒಳ್ಳೆಯದು ಅಂತ ಅಂದ್ಕೊಂಡೆ. ದಯವಿಟ್ಟು ನನ್ನ ತಪ್ಪು ತಿಳಿಯಬಾರದು" ಎಂದು ಅಂಗಲಾಚಿದಳು ಲವೀನಾ.

"ಓಹ್, ಅಷ್ಟೇ ತಾನೆ. ಈ ಮಾಡರ್ನ್ ಲೋಕದಲ್ಲಿ ಸಂಬಂಧ ಇಟ್ಟುಕೊಳ್ಳುವುದು, ಕನ್ಯಾಪೊರೆ ಹರಿದುಕೊಳ್ಳುವುದು ಸರ್ವೇಸಾಮಾನ್ಯ. ಅದನ್ನೇ ಪ್ರಮುಖವಾಗಿಟ್ಟುಕೊಂಡು ನಮ್ಮ ಜೀವನ ಮತ್ತು ಈಗಿನ ಸಂತೋಷವನ್ನು ಹಾಳುಮಾಡಿಕೊಳ್ಳುವುದು ಬೇಡ. ಆ ವ್ಯಕ್ತಿ ಯಾರೆಂದು ತಿಳಿಯಬಹುದಾ?" ಎಂದು ಮಹಾ ಪ್ರಜ್ಞಾವಂತನಂತೆ ಮಾತನಾಡಿದ ಯತೀಶ್.

ಪುಟಿದೆದ್ದ ಲವೀನಾ, "ಓಹ್ ಹೌ ನೈಸ್ ಆಫ್ ಯು. ಅವ ಮತ್ತಾರೂ ಇಲ್ಲ, ನಿಮ್ಮ ಸ್ನೇಹಿತ ಆಗರ್ಭ ಶ್ರೀಮಂತ ಟೈಗರ್" ಎಂದು ಯತೀಶನನ್ನು ಗಟ್ಟಿಯಾಗಿ ತಬ್ಬಿ ಹೇಳಿದಳು.

ಶಾಕ್ ಆದರೂ ತೋರಗೊಡದೆ, "ಆತನ ಶ್ರೀಮಂತಿಕೆ ನಿನ್ನನ್ನು ಆಕರ್ಷಿಸಿರಬಹುದು. ನೋ ಪ್ರಾಬ್ಲಂ. ಹಿಂದಿನದೆಲ್ಲ ಈಗ್ಯಾಕೆ. ಕಮಾನ್" ಅಂತ ಮುಂದಿನ ಕೆಲಸ ಶುರು ಮಾಡಿದ. ಫ್ಯಾನ್ ಭರ್ರನೆ ತಿರುಗುತ್ತಿತ್ತು, ಗೋಡೆಯ ಮೇಲಿನ ಚಿತ್ರದಲ್ಲಿರುವ ಕುದುರೆಗಳು ಓಡುವುದನ್ನು ನಿಲ್ಲಿಸಿದ್ದವು, ಮಂಚ ಮಾತ್ರ ಸದ್ದು ಮಾಡುತ್ತಿತ್ತು.

ಒಂದು ಸುತ್ತು ಮುಗಿಸಿದ ಮೇಲೆ ಹಸಿವೆಯಾಗಿದೆ ಅಂತ ಯತೀಶ್ ರೂಂ ಬಾಯ್‌ಗೆ ಫೋನ್ ಮಾಡಲು ಹೊರಟ. ತಡೆದ ಲವೀನಾ, "ರೀ, ಟೈಗರ್ ಹೀಗೆ ಮಾಡುತ್ತಿರಲಿಲ್ಲ" ಎಂದು ಅಮಾಯಕಳಂತೆ ಹೇಳಿದಳು. ಆತ ಹುಬ್ಬೇರಿಸಿದ. ಆಕೆ ಮುಂದುವರಿದು, "ಎರಡನೇ ರೌಂಡ್ ಶುರುಹಚ್ಚಿಕೊಳ್ಳುತ್ತಿದ್ದ" ಅಂದಳು.

ಯತೀಶ್ ಮರುಮಾತಾಡದೆ ಲವೀನಾಳ ಇಚ್ಛೆಯಂತೆ ಮುಂದುವರಿದ. ಬ್ರೇಕ್ ತೆಗೆದುಕೊಂಡ ಯತೀಶನ ಹೊಟ್ಟೆ ಚುರುಗುಟ್ಟುತ್ತಿತ್ತು. ಮತ್ತೆ ಅದೇ ಮಾಡಿದ, ಲವೀನಾ ಅದೇ ಡೈಲಾಗ್ ಹೊಡೆದಳು. ಯತೀಶನೂ ಮೂರು ಸುತ್ತು ಮುಗಿಸಿ ಸುಸ್ತಾಗಿ ಮತ್ತೆ ಫೋನ್ ಬದಲು ಮೊಬೈಲ್ ಎತ್ತಿಕೊಂಡ.

ಲವೀನಾ ಬಾಯಿ ತೆರೆಯುವ ಮುನ್ನವೇ, ಕೆರ್ರನೆ ಕಿರುಚಿದ ಯತೀಶ, "ಆ ಟೈಗರ್ ಅಂಥದ್ದೇನು ಕಂಡ, ಈಗ್ಲೇ ಕೇಳಿ ತಿಳ್ಕೋತೀನಿ" ಅಂತ ಕಾಲ್ ಮಾಡಲು ಶುರುಮಾಡಿದ. ಲವೀನಾ ಮುಸಿಮುಸಿ ನಗುತ್ತಿದ್ದಳು, ಯಾಕೋ? [ಲವೀನಾ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+