ಆದರೆ, ನಿಮಗಿಂತ ಚೆನ್ನಾಗಿರುವುದನ್ನೇ ಕೊಟ್ಟುಬಿಟ್ರಲ್ಲ!
ಮೈಕಲ್ ಮತ್ತು ಅಲಿಸಾಂಡ್ರಾ ಆಗತಾನೆ ಮದುವೆಯಾಗಿದ್ದರು. ಮೊದಲ ರಾತ್ರಿಗೆ ಸರ್ವ ಸಿದ್ಧತೆಯೂ ಆಗಿತ್ತು. ಮೊದಲ ರಾತ್ರಿಯ ಮುಹೂರ್ತ ಹತ್ತಿರವಾಗುತ್ತಿದ್ದಂತೆ ಮೈಕಲ್ ಕಾಡು ಕುದುರೆಯಂತೆ ಕೆನೆದಾಡಲು ಆರಂಭಿಸಿದ್ದ. ಆದರೆ, ಅಲಿಸಾಂಡ್ರಾ ಮಾತ್ರ ಮದುವೆಯ ಮೊದಲು ಹೇಗೆ ಇದ್ದಳೋ ಮದುವೆಯ ನಂತರವೂ ಹಾಗೆಯೇ ಇದ್ದಳು.
ಇದು ಏಕೆಂದರೆ, ಮೈಕಲ್ ತನ್ನ ಗಂಡಸ್ತನದ ರುಚಿ ಆಗಲೇ ಪಡೆದುಕೊಂಡಿದ್ದ. ಪ್ರೀತಿ ಪ್ರೇಮದ ವಿಷಯದಲ್ಲಿ ಪಳಗಿಬಿಟ್ಟಿದ್ದ. ಮೊದಲ ರಾತ್ರಿ ಏನೇನು ಮಾಡಬೇಕೆಂದು ಎಲ್ಲ ಪ್ಲಾನ್ ಹಾಕಿಕೊಂಡಿದ್ದ. ಆದರೆ, ಅಲಿಸಾಂಡ್ರಾ ಎಂತಹ ಹುಡುಗಿಯೆಂದರೆ, ಏನೆಂದರೆ ಏನೆಂದೂ ತಿಳಿಯದಂತಹ ಮುಗ್ಧ ಚೆಲುವೆ ಆಕೆ. ಗಂಡಸರನ್ನೇ ತಲೆಯೆತ್ತಿ ನೋಡದಂಥವಳು.
ಇನ್ನು ಮೊದಲ ರಾತ್ರಿ ಕೆನೆದಾಡುತ್ತಿದ್ದ ಮೈಕಲ್ ವಿವಸ್ತ್ರನಾಗಿದ್ದಾಗ ಆತನ ಅಸ್ತ್ರ ನೋಡಿ ಅಲಿಸಾಂಡ್ರಾ ಅವಾಕ್ಕಾಗಿಬಿಡುತ್ತಾಳೆ. ಮೈಕಲ್‌ಗೆ ಅದರ ಮೇಲೆ ಭಾರೀ ಹೆಮ್ಮೆ. ಈ ಇಡೀ ಜಗತ್ತಿನಲ್ಲಿ ಇಂಥ ಅಸ್ತ್ರ ತನಗೊಬ್ಬನಿಗೇ ಇದೆಯೆಂದು ಬಡಾಯಿ ಕೊಚ್ಚಿಕೊಂಡ. ಅದರ ಬಗ್ಗೆ ಏನೆಂದರೆ ಏನೂ ತಿಳಿಯದ ಅಲಿಸಾಂಡ್ರಾ ಮೈಕಲ್ ಹೇಳಿದ್ದನೇ ನಂಬಿದಳು.
ಮೊದಲ ರಾತ್ರಿಯ ಸುಖ ಅನುಭವಿಸಿ, ನಂತರ ಮಧುಚಂದ್ರಕ್ಕೆಂದು ಸ್ವಿಟ್ಜರ್‌ಲೆಂಡ್‌ಗೆ ಹೋಗಿ ಹದಿನೈದು ದಿನಗಳ ಕಾಲ ಸ್ವರ್ಗ ಸುಖದಲ್ಲಿ ಇಬ್ಬರೂ ತೇಲಾಡಿ ಬಂದರು. ಮೈಕಲ್ ತನ್ನ ಹೆಂಡತಿಗೆ ಪ್ರೀತಿ ಮಾಡುವುದು ಹೇಗೆಂದು ಹಂತಹಂತವಾಗಿ ತಿಳಿಸಿಕೊಟ್ಟ. ಮೈಕಲ್ ಯಾಕೆ ಅಷ್ಟೊಂದು ಹೆಮ್ಮೆಪಟ್ಟುಕೊಂಡಿದ್ದ ಎಂಬುದು ಅಲಿಸಾಂಡ್ರಾಗೂ ಮನವರಿಕೆಯಾಗಿತ್ತು. ಇಬ್ಬರೂ ಸಂತೋಷದಿಂದ ತಮ್ಮ ಊರಿಗೆ ಮರಳಿದರು.
ಮೈಕಲ್ ತನ್ನ ಕೆಲಸದಲ್ಲಿ ನಿರತನಾಗಿಬಿಟ್ಟ. ಕೆಲ ದಿನಗಳ ನಂತರ ಅಲಿಸಾಂಡ್ರಾ ಇದ್ದಕ್ಕಿದ್ದಂತೆ ಮಂಕಾಗಿಬಿಟ್ಟಳು. ಏಕೆಂದು ವಿಚಾರಿಸಿದಾಗ, "ನೀವು ನನಗೆ ಸುಳ್ಳು ಹೇಳಿದ್ರಿ ಅನ್ಸತ್ತೆ. ಪಕ್ಕದ್ಮನೆ ಸೈಕಲ್ ಇದ್ದಾನಲ್ಲಾ ಅವನಿಗೆ ಕೂಡ ನಿಮ್ಮಂಥದೇ ಬಲವಾದ ಅಸ್ತ್ರವಿದೆ. ಆತ ಬಟ್ಟೆ ಬದಲಿಸುತ್ತಿರುವಾಗ ಅಕಸ್ಮಾತಾಗಿ ಕಣ್ಣಿಗೆಬಿದ್ದುಬಿಟ್ಟ" ಎಂದು ಕಣ್ಣೀರು ತುಂಬಿಕೊಂಡು ಹೇಳಿದರು ಅಲಿಸಾಂಡ್ರಾ.
ತಬ್ಬಿಬ್ಬಾದರೂ ತೋರಿಸಿಕೊಳ್ಳದೆ, "ನೋಡು ಚಿನ್ನಾ, ಸೈಕಲ್ ತನ್ನ ಪರಮಾಪ್ತ ಸ್ನೇಹಿತ. ನಾನು ಹುಟ್ಟಿದಾಗ ನನ್ನ ಬಳಿ ಎರಡಿದ್ದವು. ಒಂದನ್ನು ಆತನಿಗೆ ನೀಡಿದೆ" ಎಂದು ಮೈಕಲ್ ಸಮಜಾಯಿಷಿ ನೀಡಿದ್ದನ್ನು ಪೆದ್ದಿ ಅಲಿಸಾಂಡ್ರಾ ಮತ್ತೆ ಒಪ್ಪಿಕೊಂಡಳು ಮತ್ತು ಪ್ರಸನ್ನವದನಳಾದಳು.
ಮರುದಿನ ಮೈಕಲ್ ಕಚೇರಿ ಕೆಲಸ ಮುಗಿಸಿ ಮನೆಗೆ ಸಂಜೆ ಮರಳಿದಾಗ ಅಲಿಸಾಂಡ್ರಾ ಮತ್ತೆ ಮ್ಲಾನವದನಳಾಗಿದ್ದಳು. ಏಕೆಂದು ಆಕೆಯನ್ನು ತಬ್ಬಿಕೊಂಡು ಮೈಕಲ್ ಕೇಳಿದ.
ಅದಕ್ಕೆ ಅಲಿಸಾಂಡ್ರಾ, "ನಿಮ್ಮ ಜಿಗರಿ ದೋಸ್ತ್ ಸೈಕಲ್‌ಗೆ ನಿಮ್ಮದೊಂದೇನೋ ಕೊಟ್ರಿ. ಆದರೆ, ನಿಮಗಿಂತ ಚೆನ್ನಾಗಿರುವುದನ್ನೇ ಕೊಟ್ಟುಬಿಟ್ರಲ್ಲ!" [ವಯಸ್ಕರ ಜೋಕ್ಸ್]












Click it and Unblock the Notifications