ಸುಂದರಿ ಮಾತಿಂದ ಬೇಸತ್ತ ಉದ್ಯಮಿ ಆತ್ಮಹತ್ಯೆ!
ಸ್ವಿಸ್ ಬ್ಯಾಂಕಲ್ಲಿ ಅಕೌಂಟ್ ಹೊಂದಿದ್ದ ಶ್ರೀಮಂತ ಯುವ ಉದ್ಯಮಿಯೊಬ್ಬ ತನ್ನ ಸಹಾಯಕ್ಕೆ ಇರಲಿ ಎಂದು ಹದಿನೆಂಟರ ಹರೆಯದ, ಮಾಡರ್ನ್ ಜೀವನಶೈಲಿ ರೂಢಿಸಿಕೊಂಡಿದ್ದ ವಿಪರೀತ ಸುಂದರಿಯೊಬ್ಬಳನ್ನು ತನ್ನ ಸೆಕ್ರೆಟರಿಯಾಗಿ ನಿಯೋಜಿಸಿದ್ದ. ಆಕೆಯನ್ನು ನೇಮಿಸಿಕೊಂಡು ವಾರದಲ್ಲಿ ಉದ್ಯಮಿ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ.
ತನ್ನ ಕಚೇರಿಯಲ್ಲಿನ ಫ್ಯಾನ್‌ಗೆ ನೇಣು ಹಾಕಿಕೊಂಡು ಉದ್ಯಮಿ ಇಹಲೋಕ ತ್ಯಜಿಸಿದ್ದ. ಆತನನ್ನು ಬಲ್ಲವರಿಗೆ ಇದು ನುಂಗಲಾರದ ತುತ್ತಾಗಿತ್ತು. ಎಲ್ಲರೂ ಆತ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯೇ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ತನಿಖೆ ಆರಂಭಿಸಿದ ಪೊಲೀಸರು, ವಾರದ ಹಿಂದೆ ನೇಮಕವಾಗಿದ್ದ ಸುಂದರಿಯನ್ನು ವಿಚಾರಣೆಗೆ ಗುರಿಪಡಿಸಲೇಬೇಕಾಯಿತು.
ಆಕೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ಪೊಲೀಸರು ಆಕೆಯ ವಿಚಾರಣೆಗಾಗಿ ನಿಗೂಢ ಸ್ಥಳಕ್ಕೆ ಹೋದರು.
ಪೊಲೀಸ್ : ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಅಲ್ಲಿ ಯಾರಿದ್ದರು?
ಸುಂದರಿ : ನಾನೇ ಇದ್ದೆ ಸಾರ್. ಆದರೆ, ಅವರೊಂದಿಗೆ ಮಾತನಾಡಿ ಟಾಯ್ಲೆಟ್ಟಿಗೆ ಹೋಗಿ ಬರುವಷ್ಟರಲ್ಲಿ ಅವರು ನೇಣಿಗೆ ಶರಣಾಗಿದ್ದರು.
ಪೊಲೀಸ್ : ಆತ ಎಂತಹ ವ್ಯಕ್ತಿ? ನಿನ್ನ ಜೊತೆ ಹೇಗೆ ವ್ಯವಹರಿಸುತ್ತಿದ್ದ? ನಿಮ್ಮಿಬ್ಬರ ನಡುವೆ ಏನು ಮಾತುಕತೆ ನಡೆಯಿತು? ವಿವರಿಸಿ ಹೇಳು.
ಸುಂದರಿ : ತುಂಬಾ ಒಳ್ಳೆಯ ವ್ಯಕ್ತಿ ಸಾರ್. ವಿಶಾಲ ಹೃದಯ ಉಳ್ಳವರಾಗಿದ್ದರು. ನನ್ನನ್ನು ನೇಮಕ ಮಾಡಿಕೊಂಡ ದಿನವೇ ನನಗಾಗಿ 1 ಲಕ್ಷ ರು. ಬಾಳುವ ವಾಚ್ ಉಡುಗೊರೆಯಾಗಿ ನೀಡಿದ್ದರು.
ಪೊಲೀಸ್ : ಇಂಟರೆಸ್ಟಿಂಗ್, ಮುಂದೆ?
ಸುಂದರಿ : ನನ್ನ ಕೆಲಸಕ್ಕೆ ಮೆಚ್ಚಿ ಮರುದಿನವೇ 5 ಲಕ್ಷ ರು. ಬೆಲೆಬಾಳುವ ನೆಕ್ಲೇಸ್ ಉಡುಗೊರೆಯಾಗಿ ನೀಡಿದರು. ಜೊತೆಗೊಂದು ಮುತ್ತನ್ನೂ ನೀಡಿದರು. ಅದನ್ನು ಮರೆಯಲೇ ಸಾಧ್ಯವಿಲ್ಲ.
ಪೊಲೀಸ್ : ವಾವ್... ತುಂಬಾ ಇಂಟರೆಸ್ಟಿಂಗ್, ಮುಂದೆ?
ಸುಂದರಿ : ಇಂದು ಬೆಳಿಗ್ಗೆ ಕಚೇರಿಗೆ ಬಂದವರೆ ನನ್ನನ್ನು ತಬ್ಬಿಕೊಂಡು ಮತ್ತೊಂದು ಗಲ್ಲಕ್ಕೆ ಮುತ್ತುಕೊಟ್ಟು 10 ಲಕ್ಷ ರು. ಬೆಲೆಬಾಳುವ ವಜ್ರದ ಹಾರ ಗಿಫ್ಟ್ ಮಾಡಿದರು.
ಪೊಲೀಸ್ : ಅಲ್ರೀ, ಉಡುಗೊರೆ ಬಗ್ಗೆಯೇ ಹೇಳ್ತಿದ್ದೀರಲ್ಲ? ನಿಮ್ಮಿಬ್ಬರ ನಡುವೆ ಮತ್ತೇನು ಮಾತುಕತೆ ನಡೆಯಿತು ಹೇಳು?
ಸುಂದರಿ : ನನ್ನ ಪ್ರತಿಕ್ರಿಯೆಯಿಂದ ತುಂಬಾ ಸಂತುಷ್ಟರಾದ ಅವರು ಇಂದು ರಾತ್ರಿ ತಮ್ಮ ಜೊತೆ ಮಲಗಬೇಕೆಂದು ಕೇಳಿದರು. ನಾನು ಒಂದು ರಾತ್ರಿಗೆ 5 ಸಾವಿರ ರು. ಚಾರ್ಜ್ ಮಾಡುವುದಾಗಿ ಹೇಳಿದೆ ಸಾರ್. ಅಷ್ಟೇ!












Click it and Unblock the Notifications