ಜಾನಿಗೆ ದೇವರಲ್ಲಿ ಬೇಡಿಕೊ ಅಂದಿದ್ದೇ ತಪ್ಪಾಯ್ತು!

ಪುಟ್ಟ ಪುಟಾಣಿ ಜಾನಿ ತನ್ನ ತಂದೆ, ತಾಯಿ ಮತ್ತು ಅಕ್ಕನ ಜೊತೆ ದೇವಸ್ಥಾನಕ್ಕೆ ಹೋಗಿದ್ದ. ಎಲ್ಲರೂ ಕೈಮುಗಿದು ಭಗವಂತನನ್ನು ಏನೇನೋ ಬೇಡಿಕೊಳ್ಳುತ್ತಿದ್ದರು. ಇನ್ನೂ ಚಡ್ಡಿ ಹಾಕಿಕೊಳ್ಳುತ್ತಿದ್ದ ಚೋಟು ಮೆಣಸಿನಕಾಯಿ ಜಾನಿ ಅಕ್ಕಪಕ್ಕದವರನ್ನೇ ತದೇಕಚಿತ್ತದಿಂದ ನೋಡುತ್ತಿದ್ದ. ಆತನಿಗೆ ಏನು ಮಾಡಬೇಕೆಂದು ತಿಳಿಯದೆ ಅಪ್ಪನನ್ನು ಏನು ಮಾಡ್ತಿದ್ದೀಯಾ, ಏನು ಮಾಡಬೇಕೆಂದು ಮುಗ್ಧನಾಗಿ ಕೇಳಿದ.

ಅಪ್ಪ, "ಮಗು ನಾವೆಲ್ಲ ದೇವರನ್ನು ಬೇಡಿಕೊಳ್ಳುತ್ತಿದ್ದೇವೆ. ನೀನೂ ಕೂಡ ದೇವರಲ್ಲಿ ಬೇಡಿಕೋ" ಅಂದ.

ಮಗು, "ನಾನು ಯಾರ ಬಗ್ಗೆ ಬೇಡಿಕೊಳ್ಳಲಿ ಅಪ್ಪಾ" ಅಂತ ವಿನಮ್ರತೆಯಿಂದ ಕೇಳಿದ.

"ಮಗನೆ, ನಿನ್ನ ಕುಟುಂಬದವರ ಬಗ್ಗೆ ಕೇಳಿಕೊ, ಸ್ನೇಹಿತರ ಬಗ್ಗೆ ಕೇಳಿಕೊ, ಬಡವರ ಬಗ್ಗೆ ಕೇಳಿಕೊ, ಬಂಧುಗಳ ಬಗ್ಗೆ ಕೇಳಿಕೊ" ಎಂದ ಅಪ್ಪ.

ಸರಿ ಲಿಟ್ಲ್ ಜಾನಿ ಶುರು ಹಚ್ಚಿಕೊಂಡ, "ಎಲೈ ಭಗವನ್, ನನ್ನ ಐಸ್ ಕ್ರೀಂ, ಬಿಸ್ಕತ್ತುಗಳನ್ನು ತಿಂದು ತೇಗಿದ ಅತಿಥಿಗಳ ಮಕ್ಕಳು ಮತ್ತೆಂದಿಗೂ ಮನೆಗೆ ಬಾರದಂತೆ ಅನುಗ್ರಹಿಸು ದೇವರೆ" ಎಂದು ಕಣ್ಣುಮುಚ್ಚಿ ಕೇಳಿದ.

ಅಪ್ಪನಿಗೆ, ಅಮ್ಮನಿಗೆ, ಅಕ್ಕನಿಗೆ ನಗು. ಮುಂದುವರಿದ ಜಾನಿ, "ನನ್ನ ಅಕ್ಕನನ್ನು ವಿವಸ್ತ್ರಳನ್ನಾಗಿ ಮಾಡಿ ಆಕೆಯ ಜೊತೆ ಹಾಸಿಗೆಯ ಮೇಲೆ ಕಬ್ಬಡ್ಡಿ ಆಡಿ ಸುಸ್ತಾದ ಪಕ್ಕದ ಮನೆ ರಿಕ್ಕಿಯ ತಪ್ಪನ್ನು ಕ್ಷಮಿಸಿಬಿಡು ದೇವರೆ" ಎಂದು ಜಾನಿ ಹೇಳಿದಾಗ ಅಕ್ಕ ಕಕ್ಕಾಬಿಕ್ಕಿ.

"ಮುಂದಿನ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ, ತಂದೆಯ ಬ್ಲಾಕ್ ಬೆರಿಯಲ್ಲಿ ಬೆತ್ತಲಾಗಿರುವ ಎಲ್ಲ ಆಂಟಿಯರಿಗೆ ವಸ್ತ್ರ ಉಡುಗೊರೆ ನೀಡುವಂತೆ ಕರುಣಿಸು. ಮತ್ತು ಅಪ್ಪನಿಲ್ಲದ ಸಮಯದಲ್ಲಿ ಅಮ್ಮನನ್ನು ಹುಡುಕಿಕೊಂಡು ಬರುವ ಅಪ್ಪನ ಸ್ನೇಹಿತರಿಗೆ ಅಂಕಲ್‌ಗಳಿಗೆ ಸೂರು ಸಿಗುವಂತೆ ಅನುಗ್ರಹಿಸಪ್ಪಾ ಭಗವಂತನೆ" ಎಂದು ಗಟ್ಟಿಯಾಗಿ ಬೇಡಿಕೊಳ್ಳುತ್ತಿದ್ದ ಜಾನಿಯ ಬಾಯಿಯನ್ನು ಪಟಾರನೆ ಮುಚ್ಚಿದ ಅಪ್ಪ.

ಲಿಟ್ಲ್ ಜಾನಿಗೆ ಬುದ್ಧಿ ಬರುವವರೆಗೆ ಇನ್ನೆಂದೂ ದೇವಸ್ಥಾನಕ್ಕೆ ಕರೆದುಕೊಂಡು ಹೋಗಬಾರದು. ಒಂದು ವೇಳೆ ಕರೆದುಕೊಂಡು ಹೋದರೂ ದೇವರಲ್ಲಿ ಬೇಡಿಕೋ ಎಂದು ಹೇಳಬಾರದು ಎಂದು ಅವರು ನಿರ್ಧರಿಸಿದರು. [ವಯಸ್ಕರ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+