ಮೂವರ ಹೆಂಡಂದಿರಲ್ಲಿ ಮೂರ್ಖಾತಿಮೂರ್ಖ ಯಾರು?
ಎಂಕ, ಸೀನ ಮತ್ತು ನಾಣಿ ಮಧ್ಯೆ ಭಾರೀ ಗಹನವಾದ ಚರ್ಚೆ ನಡೆದಿತ್ತು. ಮೂವರ ಹೆಂಡಂದಿರಲ್ಲಿ ಯಾರು ಅತ್ಯಂತ ಮೂರ್ಖರು ಎಂಬುದು ಚರ್ಚೆಯ ವಿಷಯವಾಗಿತ್ತು. ಮೂವರ ನಡುವೆ ಮೂರು ಗಂಟೆ ಚರ್ಚೆ ನಡೆದರೂ ಕೊನೆಗೆ ಮೂವರೂ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ. ಕೊನೆಗೆ, ಮೂವರು ತಮ್ಮ ಹೆಂಡತಿಯ ಮೂರ್ಖಾತಿಮೂರ್ಖ ಘಟನೆಯ ಉದಾಹರಣೆ ನೀಡಬೇಕೆಂದು ತೀರ್ಮಾನವಾಯಿತು.
ಎಂಕ : ಮೂರ್ಖತನದಲ್ಲಿ ನನ್ನ ಹೆಂಡತಿಯನ್ನು ಯಾರೂ ಮೀರಿಸಲು ಸಾಧ್ಯವಿಲ್ಲ. ಮೊನ್ನೆ ಒಬ್ಬಳೇ ಶಾಪಿಂಗಿಗೆ ಹೋಗಿದ್ದಳು. ಬರೋಬ್ಬರಿ ಇಪ್ಪತ್ತು ಸಾವಿರ ರು. ಮೌಲ್ಯದ ಹತ್ತು ಡ್ರೆಸ್ ಮಟೀರಿಯಲ್ ತಂದಿದ್ದಾಳೆ. ತಮಾಷೆ ಅಂದ್ರೆ, ಆ ಹತ್ತರಲ್ಲಿ ಎಂಟು ಡ್ರೆಸ್ಸುಗಳು ಆಕೆಯ ಡಬಲ್ ಸೈಜಿನದಾಗಿವೆ. ಇದಕ್ಕಿಂತ ಮೂರ್ಖತನದ ಉದಾಹರಣೆ ಬೇಕಾ?
ಸೀನ : (ಕಿಸಕ್ಕನೆ ನಕ್ಕು) ಇದು ಮೂರ್ಖತನವಾ, ಹೂಹ್. ನನ್ನ ಹೆಂಡತಿ ವಾರದ ಹಿಂದೆ ಇದ್ದಬದ್ದ ಹಣವನ್ನೆಲ್ಲಾ ಬಳಿದುಕೊಂಡು, ಚಿನ್ನವನ್ನೂ ಮಾರಿ ಸ್ಕೂಟಿ ಕೊಂಡುಕೊಂಡು ಬಂದಿದ್ದಾಳೆ. ತಮಾಷೆ ಅಂದ್ರೆ, ನಮಗಿಬ್ಬರಿಗೂ ಸ್ಕೂಟಿ ಇರಲಿ ಸೈಕಲ್ ಕೂಡ ಓಡಿಸಲು ಬರುವುದಿಲ್ಲ. ಈಗ ಹೇಳು, ಇಬ್ಬರ ಹೆಂಡತಿಯರಲ್ಲಿ ಯಾರು ಹೆಚ್ಚು ಮೂರ್ಖರು?
ನಾಣಿ : ತಡಕಳ್ರಪ್ಪ ತಡಕಳ್ಳಿ (ಗಹಗಹಿಸಿ ನಗಲು ಪ್ರಾರಂಭಿಸಿದ). ಇವೆರಡು ಮೂರ್ಖತನದ ಕೆಲಸಗಳನ್ನು ಯಾವ ಹೆಂಡತಿ ಬೇಕಾದರೂ ಮಾಡಬಹುದು. ನನ್ನ ಹೆಂಡತಿ ಮಾಡಿದ್ದು ಕೇಳಿದ್ರೆ ಏನಂತೀರೋ? ಆಕೆ ಏನು ಮಾಡಿದ್ದಾಳೆ ಗೊತ್ತಾ? ನಾನು ಆಕೆಯೊಂದಿಗೆ ಬರುವುದಿಲ್ಲ ಎಂಬುದು ಗೊತ್ತಿದ್ದೂ, ನೂರು ವೆರೈಟಿ ವೆರೈಟಿ ಕಲರ್ ಕಲರ್ ಕಾಂಡೋಮ್ ಕೊಂಡುಕೊಂಡು ಥೈಲ್ಯಾಂಡಿಗೆ ಹೋಗಿದ್ದಾಳೆ! ಈಗ ಹೇಳಿ ಎಲ್ಲಕ್ಕಿಂತ ದೊಡ್ಡ ಮೂರ್ಖ ಯಾರೆಂದು?












Click it and Unblock the Notifications