ಇಷ್ಟೊಂದು ಮಕ್ಕಳು ಬಂದಿದ್ದಾದರೂ ಎಲ್ಲಿಂದ?
ಹದಿನಾಲ್ಕು ಮಕ್ಕಳನ್ನು ತನ್ನ ಗಂಡನಿಂದ ಕರುಣಿಸಿಕೊಂಡಿದ್ದ ಮಹಾತಾಯಿಯೊಬ್ಬಳು ಹದಿನೈದು ವರ್ಷಗಳ ನಂತರ ಕೊನೆಗೊಂದು ದಿನ ತನ್ನ ಗಂಡನಿಗೆ ವಿಚ್ಛೇದನ ಕೊಡಬೇಕೆಂದು ನಿಶ್ಚಯಿಸುತ್ತಾಳೆ. ಹದಿನಾಲ್ಕು ಮಕ್ಕಳನ್ನು ತನ್ನ ಬಳಿ ಬಿಟ್ಟು ತನ್ನ ಗಂಡ ತನ್ನನ್ನು ತೊರೆದಿದ್ದಾನೆಂದು ಆರೋಪಿಸಿ ಆಕೆ ವಿಚ್ಛೇದನಕ್ಕೆ ಅರ್ಜಿಯನ್ನು ಹಾಕಿದಳು.
ನ್ಯಾಯಾಧೀಶರ ಮುಂದೆ ಕೇಸು ವಿಚಾರಣೆಗೆ ಬಂದಿತು.
ನ್ಯಾಯಾಧೀಶ : ಏನಮ್ಮ, ನಿನ್ನ ಗಂಡ ನಿನ್ನನ್ನು ಮತ್ತು ಮಕ್ಕಳನ್ನು ತೊರೆದದ್ದು ಯಾವಾಗ?
ಮಹಿಳೆ : ಹನ್ನೆರಡು ವರ್ಷಗಳ ಹಿಂದೆ ಸ್ವಾಮಿ.
ನ್ಯಾಯಾಧೀಶ : ರೀ, ಹನ್ನೆರಡು ವರ್ಷಗಳ ಹಿಂದೆ ನಿಮ್ಮನ್ನು ಗಂಡ ತೊರೆದಿದ್ದರೆ ಇಷ್ಟೊಂದು ಮಕ್ಕಳು ಎಲ್ಲಿಂದ ಬಂದವು?
ಮಹಿಳೆ : (ಹ್ಹಿ ಹ್ಹಿ ಹ್ಹಿ...) ತೊರೆದ ಕೆಲ ದಿನಗಳಲ್ಲಿಯೇ ಸಾರಿ ಕೇಳಿ ಮತ್ತೆ ವಾಪಸ್ ಬರುತ್ತಿದ್ದ, ಸ್ವಾಮಿ!
***
ಅಮವಾಸ್ಯೆ ಕತ್ತಲಲ್ಲಿ ಕಬ್ಬನ್ ಪಾರ್ಕಿನಲ್ಲಿ ತುಟಿಗೆ ತುಟಿಯಿಟ್ಟು ಒಬ್ಬರನ್ನೊಬ್ಬರು ಚುಂಬಿಸುತ್ತಿದ್ದ ಯುವ ಜೋಡಿಗಳನ್ನು ಪೊಲೀಸಪ್ಪ ಹಿಡಿದುಬಿಡುತ್ತಾನೆ.
ಪೊಲೀಸ್ : (ಸ್ವಲ್ಪ ಹೊತ್ತಿನ ನಂತರ, ಟಾರ್ಚ್ ಬಿಟ್ಟು) ಆಯ್ತೇನಪ್ಪ? ಏನ್ ಮಾಡ್ತಾ ಇದ್ದೀರಿ ನೀವಿಬ್ಬರೂ ಇಲ್ಲಿ?
ಯುವಕ : ನನ್ನ ಹೆಂಡತಿಯನ್ನು ಚುಂಬಿಸುತ್ತಿದ್ದೇನೆ ಸಾರ್. ಹೆಂಡತಿಯನ್ನು ಚುಂಬಿಸುವುದು ಅಪರಾಧಾನಾ ಸಾರ್?
ಪೊಲೀಸ್ : ಓಹ್, ಐ ಆಮ್ ಸಾರಿ. ಆಕೆ ನಿನ್ನ ಹೆಂಡತಿ ಅಂತ ಗೊತ್ತಿರಲಿಲ್ಲ.
ಯುವಕ : (ತನ್ನಷ್ಟಕ್ಕೆ ತಾನು) ನನಗೂ ಗೊತ್ತಿರಲಿಲ್ಲ. ನಮ್ಮ ಮೇಲೆ ಟಾರ್ಚ್ ಬಿಟ್ಟಾಗಲೇ ಗೊತ್ತಾಗಿದ್ದು ಆಕೆ ನನ್ನ ಹೆಂಡತಿ ಅಂತ!
ಪೊಲೀಸ್ : ಏನೋ ಪಿಸುಗುಟ್ತಿದ್ದೆಯಲ್ಲ?
ಯುವಕ : ಏನೂ ಇಲ್ಲ ಸಾರ್, ಪೊಲೀಸ್ ತುಂಬಾ ಒಳ್ಳೆಯವನೆಂದು ನನ್ನ ಹೆಂಡತಿಗೆ ಹೇಳಿದೆ ಅಷ್ಟೆ! [ಗಂಡ ಹೆಂಡತಿ ಜೋಕ್ಸ್]












Click it and Unblock the Notifications