ಫಸ್ಟ್ ನೈಟ್ ಯತೀಶ್ ಲವೀನಾ ನಡುವೆ ಏನಾಯಿತು?

ಲವ್ಲಿ ಲವೀನಾ ಮತ್ತು ಆರ್ಡಿನರಿ ಯತೀಶ್ ಖುಷಿಖುಷಿಯಿಂದಲೇ ಕೋಣನಬೆಟ್ಟಕ್ಕೆ ಹನಿಮೂನಿಗೆ ತೆರಳಿದ್ದರು. ವಾರದ ಮಟ್ಟಿಗೆ ಮಧುಚಂದ್ರಕ್ಕೆಂದು ಹೋದವರು ಎರಡು ದಿನಗಳಲ್ಲಿ ವಾಪಸ್ ಬಂದಿದ್ದರು. ಇಬ್ಬರೂ ಮುಖ ಕೆಂಪಗೆ ಮಾಡಿಕೊಂಡಿದ್ದರು. ಠೂ ಬಿಟ್ಟವರಂತೆ ಪರಸ್ಪರ ಮಾತುಕತೆ ನಿಲ್ಲಿಸಿದ್ದರು.

ಮನೆಯವರು ಏನಾಯಿತೆಂದು ಕೇಳಿದರೆ ಇಬ್ಬರೂ ಸರಿಯಾದ ಉತ್ತರ ನೀಡಿರಲಿಲ್ಲ. ಧಿಮಿಧಿಮಿ ಬುಸುಗುಡುತ್ತಿದ್ದ ಯತೀಶನ ಮುಖವನ್ನು ನೋಡಲಾಗದೆ ಆತನ ಪ್ರಾಣಸ್ನೇಹಿತ ಸುರೇಶ ಏನಾಯಿತು ಹೇಳು ಪುಟ್ಟಾ ಅಂತ ರಮಿಸಿ ಕೇಳಿದ. ಸರಿ, ಸ್ನೇಹಿತನಿಗಾದರೂ ಹೇಳೇಬಿಡೋಣವೆಂದು ವಿವರಿಸಲು ಅನುವಾದ ಯತೀಶ.

"ಕೋಣನಬೆಟ್ಟದ ಮೇಲಿರುವ ಹೋಟೆಲ್ ಸುರತಕ್ಕೆ ಹೋಗಿದ್ದೆವು. ಮೊದಲ ರಾತ್ರಿ ಏನು ಬೊಂಬಾಟಾಗಿತ್ತು ಗೊತ್ತಾ? ನಾನಂತೂ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿಬಿಟ್ಟೆ. ಲವೀನಾ ಕೂಡ ಸಂಪೂರ್ಣ ತೃಪ್ತಿಯನ್ನು ಪಡೆದಳು" ಎಂದು ಬಲು ಆನಂದಿಸುತ್ತ ಹೇಳಿದ ಯತೀಶ.

"ಸಖತ್ ಎಂಜಾಯ್ ಮಾಡಿದೆ ಅಂತಿದ್ದಿಯಾ. ಹಾಗಿದ್ರೆ ಬೇಜಾರಾಗೋಕೆ ಕಾರಣವಾದರೂ ಏನು?" ಸುರೇಶನಿಗೆ ತಲೆಬುಡ ಅರ್ಥವಾಗಿರಲಿಲ್ಲ.

"ಅದರ ನಂತರವೇ ಕಣೋ ಯಡವಟ್ಟಾಗಿದ್ದು. ನಾನೇನೋ ಕ್ಲೀನಾಗಿ ಬರೋಣವೆಂದು ಬಾತ್ ರೂಮಿಗೆ ಹೋದೆ" ಎಂದು ಮುಂದೆ ಹೇಳುವಷ್ಟರಲ್ಲಿ ಸುರೇಶ ಬಾಯಿ ಹಾಕಿದ್ದ.

"ನಿನ್ನ ವಿವರಣೆಯಂತೂ ವಿಚಿತ್ರವಾಗಿದೆ. ಯಡವಟ್ಟಾಗಿ ಎಲ್ಲಿ ಹೇಗೆ ಅದನ್ನ ಹೇಳು" ಎಂದು ಬಲವಂತ ಮಾಡಿದೆ.

"ತಡಕೊಳ್ಳಲೋ. ಬಾತ್ ರೂಮಿಗೆ ಹೋದ್ನಾ. ಹೋಗೋಕೆ ಮುಂಚೆ ನನಗರಿವಿಲ್ಲದಂತೆ ರೂಢಿಯಂತೆ ದಿಂಬಿನಡಿ 2 ಸಾವಿರ ರು. ಇಟ್ಟು ಹೋಗಿಬಿಟ್ಟೆ ಕಣ್ಲಾ, ಅಲ್ಲೇ ಎಡವಟ್ಟಾಗಿದ್ದು" ಎಂದು ಹಣೆಹಣೆ ಜಜ್ಜಿಕೊಂಡ ಯತೀಶ.

ಸುರೇಶ ಸಮಾಧಾನ ಮಾಡುತ್ತ, "ಯಪ್ಪೋ ಹೀಗಾಯ್ತಾ?" ಒಂದೆರಡು ಕ್ಷಣ ಯೋಚಿಸಿ, "ಮಗಾ, ಆಕೆಗೆ ಸರ್ಪ್ರೈಸ್ ನೀಡಲು ಆ ಹಣ ಇಟ್ಟೆ ಅಂತ ಹೇಳಿದರಾಯಿತು. ಪ್ರಾಬ್ಲಂ ಸಾಲ್ವ್ ಆದಂತೆ" ಎಂದು ಐಡಿಯಾ ಕೊಟ್ಟ ಸುರೇಶ.

"ನಾನೇನು ಬುದ್ದು ಅಂದ್ಕೊಂಡ್ಯಾ? ನಾನು ಕೂಡ ಹಾಗೇ ಹೇಳೋಣ ಅಂದ್ಕೊಂಡಿದ್ದೆ. ಆದರೆ, ಅಷ್ಟರಲ್ಲಿ ಆಕೆ ಏನು ಮಾಡಿದ್ಳು ಗೊತ್ತಾ? ಮುನ್ನೂರು ರು. ಚಿಲ್ರೆ ದಿಂಬಿನಡಿ ಇಟ್ಟಿದ್ಳು ಕಣ್ಲಾ...." ಅಂತ ಒಂದೇ ಸವನೆ ಗೊಳೋ ಅಂತ ಅಳಲು ಪ್ರಾರಂಭಿಸಿದ. ಸುರೇಶನಿಗೆ ಎಲ್ಲ ಅರ್ಥವಾಗಿತ್ತು. [ಲವೀನಾ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+