ಏನ್ ಮಾಡೋದು? ಮನೆಗೆ ವಾಪಸ್ ಹೋಗ್ತೀವಿ!
ಬೆಂಗಳೂರು ನಗರದ ಜನನಿಬಿಡ ವ್ಯಾಪಾರಿ ಸಮುದಾಯವನ್ನು ಲೈಂಗಿಕ ಅಭ್ಯಾಸಗಳ ಕುರಿತು ಸಂಶೋಧಕರ ತಂಡವೊಂದು ಸಂದರ್ಶಿಸಿತು. ಅವರಿಗೆ ಒಂದೇ ಒಂದು ಪ್ರಶ್ನೆ ಕೇಳಲಾಯಿತು. ಅದೇನೆಂದರೆ...
"ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿದ ನಂತರ ನೀವು ಏನು ಮಾಡುತ್ತೀರಿ?"
ಸುಮಾರು ಎರಡು ಸಾವಿರ ನಾಗರಿಕರನ್ನು ಸಂದರ್ಶಿಸಿದ ನಂತರ ಸಮುದಾಯದ ಕೆಲವರು ಕೊಟ್ಟ ಉತ್ತರಗಳು ಹೀಗಿವೆ ನೋಡಿ.
ಶೇ.10ರಷ್ಟು ಮಂದಿ ಸಂಭೋಗ ಮುಗಿದೊಡನೆ ನಿದ್ದೆಗೆ ಜಾರುತ್ತೇವೆ ಎಂದರು.
ಶೇ.10ರಷ್ಟು ಮಂದಿ ಲೈಂಗಿಕ ಕ್ರಿಯೆ ಮುಗಿದೊಡನೆ ಚೆನ್ನಾಗಿ ಶುಚಿ ಮಾಡಿಕೊಂಡು ಮತ್ತೆ ಲೈಂಗಿಕ ಶಕ್ತಿ ದೊರೆಯಲೆಂದು ಒಂದು ಲೋಟ ಹಣ್ಣಿನ ರಸವನ್ನು, ಲೇಹ್ಯವನ್ನೂ ಅಥವಾ ಸ್ಯಾಂಡ್ ವಿಚ್ ಅನ್ನು ತೆಗೆದುಕೊಳ್ಳುತ್ತೇವೆ ಎಂದರು.
ಬಾಕಿ ಉಳಿದ ಶೇ.80ರಷ್ಟು ಮಂದಿ ನೀಡಿದ ಉತ್ತರ ಹೌಹಾರುವಂಥದ್ದು. ಅವರು ನೀಡಿದ ಉತ್ತರ ಏನು ಗೊತ್ತಾ "ಲೈಂಗಿಕ ಕ್ರಿಯೆ ಮುಗಿದೊಡನೆ ನಮ್ಮ ನಮ್ಮ ಮನೆಗೆ ನಾವು ವಾಪಸ್ ಹೋಗುತ್ತೇವೆ!"












Click it and Unblock the Notifications