ಡಾಕ್ಟರ್ ಡಿಬ್ಬಿ ಮಾಡಿದ ಟೆರ್ರಿಬಲ್ ಮಿಕ್ಸಪ್!

ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಮಡದಿಯ ಆರೋಗ್ಯ ತಪಾಸಣೆಯ ವರದಿ ಪಡೆಯೋಣವೆಂದು ಆಸ್ಪತ್ರೆಗೆ ತೆರಳಿದ್ದ ಸುಬ್ಬುವಿನ ಬದಲಾಗಿ ಆಸ್ಪತ್ರೆಯ ಆಲ್ ಇಂಡಿಯಾ ವರ್ಲ್ಡ್ ಫೇಮಸ್ ವೈದ್ಯ ಡಾ. ಡಿಬ್ಬಿ ಮತ್ತು ಆತನ ಸಹಾಯಕಿ ಮಿಸ್ ರಾಮಿ ತೀವ್ರ ಆತಂಕಕ್ಕೊಳಗಾಗಿದ್ದರು. ಸುಬ್ಬು ಆಸ್ಪತ್ರೆಗೆ ಬಂದಾಗ ಇಬ್ಬರ ಹಣೆಯ ಮೇಲೆ ಬಳಬಳನೆ ಬೆವರು ಸುರಿಯುತ್ತಿತ್ತು.

ಇದನ್ನು ನೋಡಿ ಸುಬ್ಬು ಇನ್ನಷ್ಟು ಆತಂಕಕ್ಕೊಳಗಾದ. ಬಾಟಲಿಯಲ್ಲಿದ್ದ ಒಂದು ಲೀಟರ್ ನೀರನ್ನು ಒಂದೇ ಗುಕ್ಕಿನಲ್ಲಿ ಗಟಗಟನೆ ಕುಡಿದ ಡಾ. ಡಿಬ್ಬಿ, ಸುಧಾರಿಸಿಕೊಂಡು ಸುಬ್ಬುವಿನೊಡನೆ ಮಾತಿಗೆ ಕುಳಿತ.

ಡಾ. ಡಿಬ್ಬಿ : ನೋಡಿ ಸುಬ್ಬು ಅವರು ಸಿಕ್ಕಾಪಟ್ಟೆ ಗಾಬರಿಯಾಗಬೇಡಿ. ಏನಾಗಿದೆಯಂದ್ರೆ...

ಸುಬ್ಬು : ಯಾಕೆ ಡಾಕ್ಟರ್ ಏನಾಯ್ತು ಹೇಳಿ, ದಯವಿಟ್ಟು ನೇರವಾಗಿ ಹೇಳಿ ಪರವಾಗಿಲ್ಲ...

ಡಾ. ಡಿಬ್ಬಿ : ಒಂದು ಗೊಂದಲವಾಗಿಬಿಟ್ಟಿದೆ. ನಿಮ್ಮ ಮಡದಿಯ ಸ್ಯಾಂಪಲ್ ಮತ್ತು ಮತ್ತೊಬ್ಬ ವ್ಯಕ್ತಿಯ ಮಡದಿಯ ಸ್ಯಾಂಪಲ್ ಒಂದೇ ಕ್ಲಿನಿಕ್ಕಿಗೆ ಪರೀಕ್ಷೆಗೆಂದು ಕಳಿಸಿದ್ದೆವು....

ಮಾತು ಇನ್ನೂ ಮುಂದುವರಿಸಬೇಕು. ಅಷ್ಟರಲ್ಲಿ ಸಿಕ್ಕಾಪಟ್ಟೆ ನೀರು ಕುಡಿದಿದ್ದರಿಂದ ಮತ್ತು ಸಿಕ್ಕಾಪಟ್ಟೆ ಟೆನ್ಷನ್ ನಲ್ಲಿ ಇದ್ದದ್ದರಿಂದ ಒತ್ತಡ ಜಾಸ್ತಿಯಾಗಿ ಟಾಯ್ಲೆಟ್ಟಿಗೆ ಓಡಿಹೋದ. ಮರಳಿ ಬಂದು...

ಡಾ. ಡಿಬ್ಬಿ : ಎರಡೂ ಸ್ಯಾಂಪಲ್ ಗಳ ವರದಿಗಳ ಬಂದಿವೆ. ಆದರೆ, ನಿಮ್ಮ ಮಡದಿಯ ವರದಿ ಯಾವುದು, ಇನ್ನೊಬ್ಬರ ಮಡದಿಯ ವರದಿ ಯಾವುದು ತಿಳಿಯದಾಗಿದೆ.

ಸುಬ್ಬು : ವರದಿ ಏನು ಹೇಳತ್ತೆ? ಏನಾದ್ರೂ ಗಂಭೀರ ಪ್ರಾಬ್ಲಂ?

ಡಾ. ಡಿಬ್ಬಿ : ಯಸ್, ಮಿಸ್ಟರ್ ಸುಬ್ಬು. ದೆರ್ ಈಸ್ ಅ ಪ್ಲಾಬ್ಲಂ. ಸ್ವಲ್ಪ ಕೆಟ್ಟ ಸುದ್ದಿಯೇ ಇದೆ.

ಸುಬ್ಬು : (ಸಂಪೂರ್ಣವಾಗಿ ಬೆವೆತುಬಿಟ್ಟಿದ್ದ) ವಾಟ್? ಕೆಟ್ಟ ಸುದ್ದಿಯೆ? ಏನಾಗಿದೆ ಹೇಳಿ ಡಾಕ್ಟ್ರೆ.

ಡಾ. ಡಿಬ್ಬಿ : ಒಂದು ವರದಿಯ ಪ್ರಕಾರ ಒಬ್ಬರಿಗೆ ಮರೆಗುಳಿತನವಿದೆ, ಮತ್ತೊಬ್ಬರಿಗೆ... ಗುಹ್ಯ ರೋಗ ತಗುಲಿದೆ... ಅದರಲ್ಲಿ ನಿಮ್ಮ ಪತ್ನಿಯ ವರದಿ ಯಾವುದು ಎಂದೇ ತಿಳಿಯುತ್ತಿಲ್ಲ.

ಸುಬ್ಬು : ಓ ಮೈ ಗಾಡ್. ಈಗ ನಾನೇನು ಮಾಡಬೇಕು ಹೇಳಿ.

ಡಾ. ಡಿಬ್ಬಿ : ಮಿ. ಸುಬ್ಬು, ಒಂದು ಕೆಲಸ ಮಾಡಿ. ನಿಮ್ಮ ಮಡದಿಯನ್ನು ಜನನಿಬಿಡ ಮಾರುಕಟ್ಟೆಯ ಮಧ್ಯದಲ್ಲಿ ಆಕೆಗೆ ಗೊತ್ತಾಗದ ಹಾಗೆ ಬಿಟ್ಟು ಬನ್ನಿ. ಆಕೆ ಮರಳಿ ನೇರವಾಗಿ ಮನೆಗೆ ಬಂದರೆ, ಇನ್ನೆಂದೂ ಆಕೆಯೊಂದಿಗೆ ಹಾಸಿಗೆ ಹಂಚಿಕೊಳ್ಳಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+