ಸಂತಾಗೆ ಸಿಕ್ಕ ಕನ್ನಡಕ ಹತ್ತೇ ನಿಮಿಷದಲ್ಲಿ ಕೆಟ್ಟಿತ್ತು
ಸಂತಾ ಒಂದು ದಿನ ಬಿಂದಾಸ್ ಆಗಿ ಸಂತೆಯಲ್ಲಿ ಹೋಗುತ್ತಿದ್ದ. ಮಾರುಕಟ್ಟೆಯ ಮೂಲೆಯೊಂದರಲ್ಲಿ ಆತನ ಕಣ್ಣಿಗೆ ವಿಚಿತ್ರವಾದ ವಸ್ತುವೊಂದು ಕಂಡಿತು. ಹತ್ತಿರ ಹೋಗಿ ನೋಡುತ್ತಾನೆ ಬಣ್ಣಬಣ್ಣದ ಕನ್ನಡಕ. ಜಾತ್ರೆಯಲ್ಲಿ ಮಕ್ಕಳು ಧರಿಸುವಂತಹ ವಿಶಿಷ್ಟಬಗೆಯ ಬಣ್ಣದ ಸುಲೋಚನ. ಆದರೆ, ಸೈಜು ದೊಡ್ಡವರು ಹಾಕಿಕೊಳ್ಳುವಂತಿತ್ತು. ಅದರ ಮೇಲೆ ಮೇಡ್ ಇನ್ ಚೀನಾ ಎಂದು ಬರೆದಿತ್ತು.
ಅತ್ತ ಇತ್ತ ನೋಡಿದ ಯಾರೂ ಇರಲಿಲ್ಲ. ಹಿಂದೆ ಮುಂದೆ ನೋಡದೆ ಕೈಗೆತ್ತಿಕೊಂಡು ಕಣ್ಣಿಗೆ ಹಾಕಿಕೊಂಡ. ಹೇಗೆ ಕಾಣಿಸ್ತೀನಂತ ನೋಡಬೇಕೆಂಬ ಹಂಬಲ. ಹತ್ತಿರದಲ್ಲೇ ಇದ್ದ ಕನ್ನಡಿಯ ಅಂಗಡಿಯೊಂದಕ್ಕೆ ನುಗ್ಗಿ ನಿಲುವುಗನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡ. ಸಿಡಿಲು ಬಡಿದವರಂತೆ ತಟಸ್ಥನಾದ ಸಂತಾ, ಪಟ್ಟಂತ ಕನ್ನಡವನ್ನು ಕಣ್ಣಿನಿಂದ ತೆಗೆದುಬಿಟ್ಟ.
ತನ್ನ ಕಣ್ಣನ್ನು ತನಗೇ ನಂಬಲಾಗಲಿಲ್ಲ. ಮತ್ತೊಮ್ಮೆ ಹಾಕಿಕೊಂಡು ನೋಡೋಣವೆಂದು ಮತ್ತೆ ಕಣ್ಣಿಗೆ ಕನ್ನಡಕ ಧರಿಸಿದ. ಅದೇ ಚಿತ್ರ. ಆತ ಸಂಪೂರ್ಣ ನಗ್ನನಾಗಿದ್ದ. ಕಣ್ಣಿಂದ ಕನ್ನಡಕ ತೆಗೆದ್ರೆ ಬಟ್ಟೆ, ಹಾಕಿಕೊಂಡ್ರೆ ಕೆಟ್ಟೆ ಅನ್ನುಂತಾಗಿತ್ತು ಆತನ ಸ್ಥಿತಿ. ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡು ಅಂಗಡಿಯಿಂದ ಅಡಿಯಿಟ್ಟ.
ಹೊರಗಡೆ ರಸ್ತೆಯಲ್ಲಿ ನೂರಾರು ಜನರು 'ಮಹಿಳೆಯರಿಗೆ ಡ್ರೆಸ್ ಕೋಡ್' ಕಟ್ಟುನಿಟ್ಟು ಮಾಡಬೇಕು ಎಂದು ಪ್ರತಿಭಟನೆಯಲ್ಲಿ ತೊಡಗಿದ್ದರು. ಒಂದು ಬಾರಿ ಅದೇ ಕನ್ನಡಕ ಹಾಕಿಕೊಂಡು ನೋಡೋಣವೆಂದು ಸಂತಾನಿಗೆ ಆಸೆಯಾಯಿತು. ಸರಿ ಧರಿಸೇಬಿಟ್ಟ. ನೂರಾರು ಜನರೆಲ್ಲ ಬೆತ್ತಲಾದಂತೆ ಕಂಡರು.
ಓಹೋ, ಈ ಕನ್ನಡಕ ಧರಿಸಿದರೆ ತಾನೊಬ್ಬ ಮಾತ್ರವಲ್ಲ ಎಲ್ಲರೂ ಬೆತ್ತಲಾದಂತೆ ಕಾಣಿಸುತ್ತಾರೆ ಎಂದುಕೊಂಡ ಸಂತಾ ಸಂತೋಷದಿಂದ ಕುಣಿದುಬಿಟ್ಟ. ಈ ಹೊಸ ಸಾಧನವನ್ನು ತನ್ನ ಹೆಂಡತಿಗೆ ತೋರಿಸೋಣವೆಂದು ಲಗುಬಗನೆ ಮನೆಗೆ ಧಾವಿಸಿದ. ವಿಚಿತ್ರವಾದ ಕನ್ನಡವನ್ನು ಧರಿಸಿಯೇ ಮನೆಯೊಳಗೆ ನುಗ್ಗಿದ. ಸಂತಾನ ಹೆಂಡತಿ ಗುರ್ಮೀತ್ ಎಲ್ಲೂ ಕಾಣಿಸಲಿಲ್ಲ.
ಮಲಗಿರಬೇಕು ಎಂದು ಬೆಡ್ರೂಮನ್ನು ಹೊಕ್ಕ. ಅಲ್ಲಿನ ದೃಶ್ಯವನ್ನು ನೋಡಿ ಸ್ತಂಭೀಭೂತನಾದ. ಕನ್ನಡದೊಳಗಿಂದ ಹೆಂಡತಿ ಸಂಪೂರ್ಣ ನಗ್ನವಾಗಿ ಕಾಣಿಸುತ್ತಿದ್ದಳು. ಆದರೆ, ಸ್ತಂಭೀಭೂತನಾಗಲು ಅದು ಕಾರಣವಾಗಿರಲಿಲ್ಲ. ಏಕೆಂದರೆ, ಗುರ್ಮೀತ್ ಜೊತೆ ಬಂತಾ ಕೂಡ ಬೆತ್ತಲಾಗಿದ್ದ.
ಇದೆಲ್ಲ ಕನ್ನಡಕದ ಮಹಿಮೆ ಎಂದು ಸಂತಾ ಕನ್ನಡಕವನ್ನು ತೆಗೆದು ನೋಡ್ತಾನೆ ಬಂತಾ ಮತ್ತು ಗುರ್ಮೀತ್ ಇಬ್ಬರು ಈಗಲೂ ಕೂಡ ನಗ್ನರಾಗಿದ್ದರು. ಇಬ್ಬರೂ ಥರಥರ ಗುಟ್ಟುತ್ತಿದ್ದರು.
ಆಗ ಸಂತಾ ತನ್ನಷ್ಟೆ ತಾನು ಗುನುಗಿಕೊಂಡ : "ಚೀನಾದ ಐಂಗಳದ್ದು ಇದೇ ತೊಂದರೆ, ಹತ್ತೇ ನಿಮಿಷಕ್ಕೆ ಕೆಟ್ಟುಹೋಗುತ್ತವೆ" ಎಂದು ತನ್ನನ್ನು ತಾನು ಸಮಾಧಾನಪಡಿಸಿಕೊಂಡ. [ಸರ್ದಾರ್ಜಿ ಜೋಕ್ಸ್]












Click it and Unblock the Notifications