ಪ್ರಿನ್ಸಿ ತಲೆ ಗಿರ್ರನೆ ತಿರುಗಿಸಿದ ಕಾಲೇಜ್ ಬ್ಯೂಟಿ!
ಒಂದು ಮಹಿಳಾ ಕಾಲೇಜಿನಲ್ಲಿ ಗ್ರಾಜ್ಯುಯೇಷನ್ ಡೇ. ವಿದ್ಯಾರ್ಥಿನಿಯರೆಲ್ಲ ಅಂದವಾಗಿ ಸೀರೆಯುಟ್ಟುಕೊಂಡು ಬಂದಿದ್ದರು. ಕೆಲವರು ಹ್ಯಾಗಿದ್ರೂ ಕಾಲೇಜು ಬಿಡುತ್ತಿದ್ದೀವೆಂದು ಮಿನಿ ಕೂಡ ಹಾಕಿಕೊಂಡು ಬಂದಿದ್ದರು.
ಇದನ್ನೆಲ್ಲ ನೋಡಿ ಪ್ರಿನ್ಸಿಪಾಲ್, ಕಾಲೇಜು ಬಿಟ್ಟು, ಭವಿಷ್ಯವನ್ನು ಅರಸುತ್ತ ಹೊರನಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಏನಾದರೂ ಹೊಸದಾದ, ವಿಶಿಷ್ಟವಾದ ಮತ್ತು ನೆನಪಿನಲ್ಲಿಟ್ಟುಕೊಳ್ಳುವಂತಹ ಸಂದೇಶವನ್ನು ನೀಡೋಣವೆಂದು ನಿರ್ಧರಿಸುತ್ತಾರೆ.
"ಆತ್ಮೀಯ ಮಕ್ಕಳೆ. ಕಾಲ ಹಿಂದಿನಂತಿಲ್ಲ. ಯೌವನದ ಉತ್ತುಂಗದಲ್ಲಿ ಇರುವ ನಿಮ್ಮಂತಹ ಹುಡುಗಿಯರು ಎಷ್ಟು ಎಚ್ಚರದಿಂದಿದ್ದರೂ ಕಡಿಮೆಯೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿಯೇ ಇದೆ. ಯಾವುದೇ ದೈಹಿಕ ಆಮಿಷಕ್ಕೆ ಒಳಗಾಗಬೇಡಿ. ಈ ವಯಸ್ಸೇ ಅಂತಹುದು. ಬೇಡವೆಂದರೂ ಸೆಳೆತಕ್ಕೊಳಗಾಗುತ್ತಿರುತ್ತದೆ. ನಿಮಗೆ ನೀವೇ ಒಂದು ಪ್ರಶ್ನೆ ಕೇಳಿಕೊಳ್ಳಿ. ಅದೇನೆಂದರೆ, ಕೇವಲ ಅರ್ಧ ಗಂಟೆಯ ದೈಹಿಕ ಸುಖಕ್ಕಾಗಿ ನಾವು ನಮ್ಮ ಜೀವನವನ್ನು ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಕೆ?"
ಅಷ್ಟರಲ್ಲಿ ಯೌವನದಿಂದ ಪುಟಿಯುತ್ತಿದ್ದ ಒಬ್ಬ ಸುಂದರವಾದ ಹುಡುಗಿ ಎದ್ದು ನಿಂತು, "ಮಧ್ಯೆ ಬಾಯಿ ಹಾಕುತ್ತಿರುವುದಕ್ಕೆ ದಯವಿಟ್ಟು ಕ್ಷಮಿಸಿ ಮೇಡಂ. ನಿಮ್ಮ ಅಡ್ವೈಸಿಗೆ ತುಂಬಾ ಥ್ಯಾಂಕ್ಸ್. ಅರ್ಧ ಗಂಟೆಯ ದೈಹಿಕ ಸುಖಕ್ಕಾಗಿ ನಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದು ಹಾಳಾಗಲಿ, ಆ ಸುಖ ಅರ್ಧ ಗಂಟೆಯಾದರೂ ಹಿಡಿದುಕೊಳ್ಳುವುದು ಹೇಗೆಂದು ಹೇಳಿ ಮೇಡಂ" ಎಂದು ರಕ್ತ ಸರ್ರನೆ ಏರಿದಂದೆ ಕಿರುಚಿಕೊಂಡಾಗ ಪ್ರಿನ್ಸಿಪಾಲ್‌ಗೆ ತಲೆತಿರುಗಿ ಬೀಳುವುದೊಂದೇ ಬಾಕಿ.












Click it and Unblock the Notifications