ಸಿಸ್ಯ, ಕಣ್ ಬಿಡೋ, ಪ್ರಾರ್ಥನೆ ಫಲ ನೀಡಿತು!
ಮಿಸ್ ಲವೀನಾ ತುಂಬಾ ಚಿಂತಿತಳಾಗಿದ್ದಳು. ಆಕೆಯ ಚಿಂತೆಗೆ ಕಾರಣ ಆಕೆ ಸಾಕಿದ್ದ ಎರಡು ಮುದ್ದಾದ ಹಸಿರು ಬಣ್ಣದ ಹೆಣ್ಣು ಗಿಳಿಗಳು. ಆ ಗಿಳಿಗಳು ಹಿಂದಿನ ಜನ್ಮದಲ್ಲಿ ಏನಾಗಿದ್ದವೋ ಏನೋ ಈ ಜನ್ಮದಲ್ಲಿ ಲವೀನಾಳಿಗೆ ತಮ್ಮ ಮುದ್ದಾದ ಮಾತುಗಳಿಂದ ಸಾಕಷ್ಟು ಮುಜುಗರಕ್ಕೆ ಈಡುಮಾಡಿದ್ದವು. 'ನಾನು ವೇಶ್ಯೆ, ನಾನು ಎಂಜಾಯ್ ಮಾಡಬೇಕು' ಎಂದು ಹೇಳಿ ಹೇಳಿ ಹೇಳಿ ಲವೀನಾಗೆ ಈ ಗಿಳಿಗಳ ಸಹವಾಸವೇ ಸಾಕಪ್ಪ ಎಂಬಂತೆ ಮಾಡಿದ್ದವು.
ಅವನ್ನು ಹಾರಿಬಿಡಲಾಗದೆ, ಈ ಸಮಸ್ಯೆಗೆ ಏನಾದರೂ ಪರಿಹಾರ ಹುಡುಕಿಕೊಳ್ಳಬೇಕೆಂದು ಚರ್ಚಿಗೆ ಬಂದಳು ಲವೀನಾ. ಫಾದರ್ ಬಳಿ ತನ್ನ ಸಮಸ್ಯೆಯನ್ನೆಲ್ಲ ಮುಚ್ಚುಮರೆಯಿಲ್ಲದೆ ಹೇಳಿಕೊಂಡಳು. ಫಾದರ್ ಕೂಡ ಒಂದು ಕ್ಷಣ ಅವಾಕ್ಕಾಗಿಬಿಟ್ಟರು. ಆದರೂ ಸಾವರಿಸಿಕೊಂಡು ಲವೀನಾಳಿಗೆ ಪರಿಹಾರ ಸೂಚಿಸಿದರು.
"ಮಗಳೆ, ಆ ಎರಡು ಗಿಳಿಗಳನ್ನು ನನ್ನ ಬಳಿ ಕರೆದುಕೊಂಡು ಬಾ. ನನ್ನ ಬಳಿ ಎರಡು ಗಂಡು ಗಿಳಿಗಳಿವೆ. ಅವು ಕೂಡ ಮಾತನಾಡುತ್ತಿವೆ. ನಾನು ಅವುಗಳನ್ನು ಸರಿಯಾಗಿ ಬೆಳೆಸಿದ್ದೇನೆ, ಉತ್ತಮ ವಿಚಾರಧಾರೆ ಹೇಳಿಕೊಟ್ಟಿದ್ದೇನೆ. ಅವು ಸೈಲೆಂಟಾಗಿ ಪ್ರಾರ್ಥಿಸುವುದನ್ನು ಕೂಡ ಕಲಿತಿವೆ. ನಿನ್ನ ಗಿಳಿಗಳನ್ನು ಅವು ಸರಿದಾರಿಗೆ ತರುತ್ತವೆ" ಎಂದು ಉಪದೇಶ ಮಾಡಿದರು.
ಲವೀನಾಳಿಗೆ ತುಂಬಾ ಖುಷಿಯಾಯಿತು. ಕೂಡಲೆ ಮನೆಗೆ ತೆರಳಿ ಪಂಜರದಲ್ಲಿ ಆ ಎರಡು ಹೆಣ್ಣು ಗಿಳಿಗಳನ್ನು ಫಾದರ್ ಬಳಿ ತಂದಳು. ಹೊಸ ವಾತಾವರಣಕ್ಕೆ ಬಂದ ಕೂಡಲೆ ಅವು ಉತ್ಸಾಹಿತವಾಗಿ ರೆಕ್ಕೆ ಪಟಪಟಿಸಲು ಪ್ರಾರಂಭಿಸಿದವು. ಆದರೆ, ಮನೆಯಲ್ಲಿ ಮಾತನಾಡಿದಂತೆ ಮಾತಾಡದೆ ಬಾಯಿ ಮುಚ್ಚಿಕೊಂಡಿದ್ದವು.
ಫಾದರ್ ಕೈ ಸನ್ನೆ ಮಾಡಿದ ಕೂಡಲೆ ಲವೀನಾ ತನ್ನೆರಡು ಗಿಳಿಗಳನ್ನು ಫಾದರ್ ಗಿಳಿಗಳ ಬಳಿ ಬಿಟ್ಟಳು. ಹೆಣ್ಣು ಗಿಳಿಗಳು ಬಂದ ಕೂಡಲೆ ಏನು ಮಾಡಬೇಕೆಂದು ಫಾದರ್ ಮೊದಲೇ ಅವುಗಳಿಗೆ ತಿಳಿಸಿದ್ದರು. ಗಂಡು ಗಿಳಿಗಳು ಕಣ್ಣು ಮುಚ್ಚಿ ಪ್ರಾರ್ಥನೆಯಲ್ಲಿ ತೊಡಗಿದ್ದವು. ಹೆಣ್ಣು ಗಿಳಿಗಳು ಒಕ್ಕೊರಲಿನಿಂದ "ನಾನು ವೇಶ್ಯೆ, ನಾನು ಎಂಜಾಯ್ ಮಾಡಬೇಕು" ಎಂದು ಮೆಲ್ಲಗೆ ಗಂಡು ಗಿಳಿಗಳಿಗೆ ಮಾತ್ರ ಕೇಳುವ ಹಾಗೆ ರಾಗವಾಗಿ ಹೇಳಿದವು.
ತಮ್ಮ ಪಂಜರದೊಳಗೆ ಹೊಸ ಅತಿಥಿಗಳು ಬಂದ ಕೂಡಲೆ ಎರಡೂ ಗಂಡು ಗಿಳಿಗಳಿಗೆ ವಿದ್ಯುತ್ ಸಂಚಾರವಾದಂತಾಯಿತು, ಬೆಚ್ಚನೆ ಅನುಭವವಾಯಿತು. ಪ್ರಾರ್ಥಿಸುತ್ತಿದ್ದ ಒಂದು ಗಿಳಿ ಕಣ್ಣು ತೆರೆದು ನೋಡಿ, ಮತ್ತೊಂದರ ಸೊಂಟಕ್ಕೆ ತಿವಿದು, "ಸಿಸ್ಯ, ಕಣ್ ಬಿಡೋ, ನಮ್ಮಿಬ್ಬರ ಪ್ರಾರ್ಥನೆ ಫಲ ನೀಡಿತು" ಎಂದು ಹೇಳಿ ಕಣ್ಣು ಹೊಡೆಯಿತು. [ಮತ್ತಷ್ಟು ವಯಸ್ಕರ ಜೋಕ್ಸ್]











Click it and Unblock the Notifications