ಫೋಟೋಗ್ರಾಫರ್ ಬೇರೆ ಏನೋ ಮಾಡ್ತಿದ್ದ!
ಅಮೆರಿಕದ ಖ್ಯಾತ ಮಾಡೆಲ್ ಲೇಖಕಿ ಜೆಸ್ಸಿ ಜೂನ್, ಭಾರತದ ಅಂತಾರಾಷ್ಟ್ರೀಯ ಖ್ಯಾತಿಯ ರೂಪದರ್ಶಿ ಪೂನಂ ಪಾಂಡೆ, ಪೂನಂ ಪಾಂಡೆಯನ್ನೇ ಅರೆಪೋಲಿ ಎಂದಿದ್ದ ರೋಜ್ಲಿನ್ ಖಾನ್, ಪಾಕಿಸ್ತಾನದ ನಟಿ ವೀಣಾ ಮಲಿಕ್, ಇವರೆಲ್ಲರಿಗೆ ಟಾಂಗ್ ಕೊಡಲು ಬಂದಿರುವ ಸನ್ನಿ ಲಿಯೋನ್ ಕೆಟಗರಿಯ ಹೊಸ ನಟಿಯೊಬ್ಬಳು ತನ್ನ ಆಪ್ತಗೆಳತಿಯೊಂದಿಗೆ ತನ್ನ ಮುಂದಿನ ಯೋಜನೆಗಳ ಬಗ್ಗೆ, ಮುಂದಿನ ನಡೆಗಳ ಬಗ್ಗೆ, ತನ್ನ ಹೊಸ ಅನುಭವಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಳು.
"ಕ್ಯಾಮೆರಾದ ಮುಂದೆ ಬೆತ್ತಲಾಗಲು ನನ್ನ ಅಭ್ಯಂತರವೇನೂ ಇಲ್ಲ. ಚಿತ್ರರಂಗದಲ್ಲಿ ಸ್ಥಾನ ಗಿಟ್ಟಿಸಬೇಕಾದರೆ ಬೆತ್ತಲೆ ಆಗಲೇಬೇಕಾಗುತ್ತದೆ. ಸೋ, ನಿನ್ನೆ ಕ್ಯಾಮೆರಾಮನ್ ಜೊತೆ ಬೆತ್ತಲೆ ಫೋಟೋ ಶೂಟ್ ಇತ್ತು" ಎಂದು ಭಾರೀ ಸಾಧನೆ ಮಾಡಿರುವ ಹಾಗೆ ಹೇಳಿಕೊಂಡಳು.
"ವಾಟ್, ಬೆತ್ತಲು ಆಗೇ ಬಿಟ್ಯಾ? ಅಲ್ಲ ಕಣೆ, ಆ ನಗ್ನ ಫೋಟೋಗಳನ್ನು ಪೇಪರುಗಳಲ್ಲಿ ಪ್ರಕಟಿಸಿಬಿಟ್ಟರೆ ಏನು ಮಾಡ್ತೀಯಾ? ಯಾಕ್ಹೀಗೆ ಮಾಡಿದೆ? ನೀನಿನ್ನೂ ಚಿತ್ರರಂಗಕ್ಕೆ ಹೊಸಬಳು ಬೇರೆ" ಎಂದು ಆಪ್ತಗೆಳತಿ ತನ್ನ ಆತಂಕವನ್ನು ಮತ್ತು ಕಳಕಳಿಯನ್ನು ಹೊರಹಾಕಿದಳು.
"ನೋ ಪ್ಲಾಬ್ಲಂ ಕಣೆ. ಆತಂಕಕ್ಕೀಡಾಗಬೇಡ. ಅವರು ನನ್ನ ಯಾವ ಫೋಟೋಗಳನ್ನೂ ಪ್ರಕಟಿಸಲು ಸಾಧ್ಯವಿಲ್ಲ" ಎಂದು ನಟಿ ನಿರಾತಂಕವಾಗಿ ಹೇಳಿದಳು.
ಅದಕ್ಕೆ ಉತ್ತರವಾಗಿ, "ಅವರ ಜೊತೆ ಅಗ್ರೀಮೆಂಟ್ ಏನಾದ್ರೂ ಮಾಡಿಕೊಂಡಿದ್ಯಾ?" ಎಂದು ಕುತೂಹಲದಿಂದ ಗೆಳತಿ ಕೇಳಿದಳು.
"ಅಗ್ರೀಮೆಂಟೂ ಇಲ್ಲ ಮಣ್ಣೂ ಇಲ್ಲ. ಅಸಲಿಗೆ ಫೋಟೋ ಶೂಟ್ ಮಾಡಬೇಕಾದಂತಹ ಸಮಯದಲ್ಲಿ ಫೋಟೋಗ್ರಾಫರ್ ಸಿಕ್ಕಾಪಟ್ಟೆ ಬಿಜಿಯಾಗಿದ್ದ, ಬೇರೆ ಏನೋ ಮಾಡ್ತಿದ್ದ!" ಎಂದು ನಟಿ ನಿರುಮ್ಮಳವಾಗಿ ಹೇಳಿ ಕಣ್ಣು ಹೊಡೆದಳು.












Click it and Unblock the Notifications