ಹದಿನೆಂಟರ ಯುವತಿಯ ಕನಸು ನುಚ್ಚುನೂರು!

ಇದೀಗ ತಾನೆ ಅರಳಿದ ಕಮಲದ ಹೂವಿನಂತಹ, ತಾಜಾ ತಾಜಾ ಮಲ್ಲಿಗೆ ಹೂವಿನ ಪಕಳೆಯಂಥ ನುಣುಪಾದ ದಿವ್ಯ ದೇಹವುಳ್ಳಂತಹ ಹದಿನೆಂಟರ ಸುಂದರ ಯುವತಿಯೊಬ್ಬಳು ಚಿಟಿಕೆ ಹೊಡೆಯುವಷ್ಟರಲ್ಲಿ ಶ್ರೀಮಂತಳಾಗಬೇಕೆಂದು ಕನಸು ಕಂಡಳು ಮತ್ತು ಆ ಕನಸು ನನಸಾಗಲೇಬೇಕು ಎಂದು ಪಣ ತೊಟ್ಟಳು.

ಹಾಗಿದ್ರೆ ಏನು ಮಾಡಬೇಕು? ಮೈ ಮಾರಿಕೊಳ್ಳುವಂತಹ ಹೇಯ ಕೃತ್ಯಕ್ಕೆ ಕೈಹಾಕಲು ಆಕೆಗೆ ಮನಸ್ಸು ಒಪ್ಪಲಿಲ್ಲ. ಆಕೆಯಿದ್ದ ಪಿಜಿ ಪಕ್ಕದಲ್ಲಿಯೇ ಒಬ್ಬ ಕುಬೇರ ವೃದ್ಧನೊಬ್ಬ ಏಕಾಂಗಿಯಾಗಿ ವಾಸವಿದ್ದ. ಸರಿ, ಆತನನ್ನೇ ಮರಳು ಮಾಡಿ, ಅವನನ್ನು ಮದುವೆ ಮಾಡಿಕೊಂಡು, ಮೊದಲ ರಾತ್ರಿಯ ದಿನವೇ ಆತನ ಆಸ್ತಿಯನ್ನೆಲ್ಲ ತನ್ನ ಹೆಸರಿಗೆ ಬರೆಯಿಸಿಕೊಂಡು, ಆತನನ್ನು ಮುಗಿಸಿಬಿಡಬೇಕೆಂದು ಸ್ಕೆಚ್ ಹಾಕಿದಳು.

ಸರಿ, ಆತನ ಗೆಳೆತನ ಬೆಳೆಸಿದಳು, ಆತನ ವಿಶ್ವಾಸವನ್ನು ಗಳಿಸಿದಳು, ಆತನಲ್ಲಿ ತನ್ನ ಬಗ್ಗೆ ಪ್ರೀತಿ ಮೊಳಕೆಯೊಡೆಯುವಂತೆ ಮಾಡಿದಳು, ಕಡೆಗೆ ಆತನನ್ನು ಮರಳು ಮಾಡಿ ಒಂದು ಶುಭಮುಹೂರ್ತದಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯೂ ಆಗಿಬಿಟ್ಟಳು. ಅವರಿಬ್ಬರ ನಡುವಿನ ವಯಸ್ಸಿನ ಅಂತರ ಅರವತ್ತು ದಾಟಿತ್ತು. ಇವರಿಬ್ಬರ ಮದುವೆಗೆ ಇಡೀ ಜಗತ್ತೇ ಅಚ್ಚರಿ ಪಟ್ಟಿದ್ದರೂ, ಇವರಿಬ್ಬರು ಮಾತ್ರ ಅಚ್ಚರಿ ಪಟ್ಟಿರಲಿಲ್ಲ.

ಮದುವೆ ಮುಗಿದು ಮೊದಲ ರಾತ್ರಿಗಾಗಿ ಎಪ್ಪತ್ತೆಂಟರ ಗಂಡ ಚಟಪಡಿಸುತ್ತಿದ್ದರೆ, ಹದಿನೆಂಟರ ಹೆಂಡತಿ ಮುಂದೆ ತಾನು ಮಾಡಬೇಕಾದ ಕಾರ್ಯವನ್ನು ನೆನೆದು ಹೊಟ್ಟೆತುಂಬ ಪಾತರಗಿತ್ತಿ ತುಂಬಿಸಿಕೊಂಡಿದ್ದಳು. ಆ ಘಳಿಗೆ ಬಂದೇ ಬಿಟ್ಟಿತು. ಅವಳ ಅಣತಿಯಂತೆ ಎಲ್ಲ ಆಸ್ತಿಯನ್ನೂ ಆಕೆಯ ಹೆಸರಿಗೆ ಬುಡ್ಡಾ ಬರೆದುಬಿಟ್ಟ. ಇವಳಿಗೆ ಸ್ವರ್ಗ ಮೂರೇ ಗೇಣು ದೂರ. ಸ್ನಾನ ಮಾಡಿಬರುತ್ತೇನೆಂದು ಬಾತ್ ರೂಮಿಗೆ ನಡೆದ.

ಇತ್ತಕಡೆ, ಹದಿನೆಂಟರ ಯುವತಿ ನಿರ್ವಾಣ ಸ್ಥಿತಿಗೆ ತಲುಪಿ, ಬಕರಾ ಬರಲೆಂದು ಕಾಯುತ್ತ ಕುಳಿತಿದ್ದಳು. ಆತ ಬಂದೇ ಬಿಟ್ಟ, ಆತನೂ ನಿರ್ವಾಣ ಸ್ಥಿತಿ ತಲುಪಿದ್ದ. ಆದರೆ, ಆಕೆಯೇ ಅಚ್ಚರಿಪಡುವಂತೆ ಕಿವಿಗೆ ಮತ್ತು ಮೂಗಿಗೆ ಹತ್ತಿ ತುಂಬಿಕೊಂಡಿದ್ದ. ಈ ದೃಶ್ಯವನ್ನು ನೋಡಿ ಹೆಂಡತಿ ಹೌಹಾರಿಬಿಟ್ಟಳು. ಇದೇನಿದು ಅವತಾರ ಎಂದು ಕೇಳಿದಳು.

ಪೌರುಷವೇ ಮೈವೆತ್ತಂತಿದ್ದ ಆತ, "ಮೈ ಡಾರ್ಲಿಂಗ್, ಎರಡು ಸಂಗತಿಗಳನ್ನು ನನಗೆ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಸುಖದ ನರಳಿಕೆಯಲ್ಲಿರುವ ಮಹಿಳೆಯ ಕಿರುಚಾಟ ಮತ್ತು ಸುಡುತ್ತಿರುವ ರಬ್ಬರ್ ವಾಸನೆಯನ್ನು ನನ್ನಿಂದ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ" ಎಂದು ಹೇಳುತ್ತಿದ್ದಂತೆ ಯುವತಿ ಧಬಾರನೆ ಹಾಸಿಗೆಯ ಮೇಲೆ ಮೂರ್ಛೆ ಬಂದುಬಿದ್ದಳು. ಅಲ್ಲಿಗೆ ಆಕೆಯ ಕನಸು ನುಚ್ಚುನೂರಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+