ಸಾರಿ, ಅನಿವಾರ್ಯವಾಗಿ ಪೊಲೀಸರನ್ನು ಕರೆಯಲೇಬೇಕು!
ಹಣ್ಣುಹಣ್ಣು ಮುದುಕನೊಬ್ಬ ತನ್ನ ಫಾರ್ಮ್ ಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದ. ಸಾಕಷ್ಟು ಶ್ರೀಮಂತನಾಗಿದ್ದ ಬ್ರಹ್ಮಚಾರಿ ಮುದುಕ ಒಂದು ಬಾರಿ ಹೊರಹೋಗಿದ್ದಾಗ, ಹೇಗೋ ಯೌವನ ಉಕ್ಕಿಹರಿಯುತ್ತಿದ್ದ ಹದಿನೆಂಟರ ಹರೆಯದ ಸುರಸುಂದರ ಯುವತಿಯೊಬ್ಬಳು ಮನೆಯಲ್ಲಿ ಸೇರಿಕೊಂಡುಬಿಡುತ್ತಾಳೆ.
ಮನೆಗೆ ಸಂಜೆ ತಿರುಗಿಬಂದು ನೋಡಿದಾಗ ಮುದುಕನಿಗೆ ಶಾಕ್. ಮನೆಯಲ್ಲಿ ಕೆಲ ವಸ್ತುಗಳು ಕೂಡ ಚೆಲ್ಲಾಪಿಲ್ಲಿಯಾಗಿರುತ್ತವೆ. ಕಳ್ಳಿಯೇ ಇರಬಹುದು ಎಂದು ಆತ ಗ್ರಹಿಸುತ್ತಾನೆ. ಕಷ್ಟಪಟ್ಟು ಆಕೆಯನ್ನು ಹಿಡಿದುಕೊಳ್ಳುತ್ತಾನೆ. ಪೊಲೀಸರಿಗೆ ಇನ್ನೇನು ತಿಳಿಸಬೇಕು ಎಂಬಷ್ಟರಲ್ಲಿ ಆತನಿಗೆ ಮತ್ತೊಂದು ಶಾಕ್ ಕಾದಿರುತ್ತದೆ.
ಆ ಯುವತಿ ಇದ್ದಕ್ಕಿದ್ದಂತೆ ತನ್ನ ಬಟ್ಟೆಗಳನ್ನೆಲ್ಲ ಕಳಚಿ ನಿರ್ವಾಣ ಸ್ಥಿತಿ ತಲುಪಿಬಿಡುತ್ತಾಳೆ. ಕೈ ಜೋಡಿಸಿ, "ದಯವಿಟ್ಟು ಪೊಲೀಸರಿಗೆ ತಿಳಿಸಬೇಡಿ, ನಾನು ಅನಾಥೆ. ಬೇಕಿದ್ದರೆ ನೀವು ನನ್ನ ಜೊತೆ ಒಂದು ರಾತ್ರಿಯನ್ನು ಕಳೆಯಬಹುದು. ನಾನು ನಿಮಗೆ ಎಲ್ಲ ರೀತಿಯ ಸಹಕಾರವನ್ನು ಕೊಡುತ್ತೇನೆ. ಪ್ಲೀಸ್ ಪೊಲೀಸರಿಗೆ ಹೇಳಬೇಡಿ" ಎಂದು ಗೋಗರೆಯುತ್ತಾಳೆ.
ಮುದುಕನಿಗೆ ಇದು ಬಯಸದೆ ಬಂದ ಭಾಗ್ಯ. ಯಾಕೆ ಇಂಥ ಅವಕಾಶ ಕಳೆದುಕೊಳ್ಳಬೇಕು ಎಂದು ಚಿಂತಿಸುತ್ತಾನೆ. ಸರಿ ನಡಿ ಎಂದು ಆಕೆಯನ್ನು ತನ್ನ ಐಷಾರಾಮಿ ಬೆಡ್ ರೂಮಿಗೆ ಕರೆದುಕೊಂಡು ಹೋಗುತ್ತಾನೆ ಮತ್ತು ತಾನೂ ನಿರ್ವಾಣ ಸ್ಥಿತಿಗೆ ತಲುಪುತ್ತಾನೆ.
ತೊಂಬತ್ತೆಂಟರ ಮುದುಕ. ಏನು ಮಾಡೋಕಾಗತ್ತೆ? ಎಷ್ಟೇ ಪ್ರಯತ್ನಿಸಿದ ನಂತರ ಆತನಿಗೆ ವಿಪರೀತ ಸುಸ್ತಾಗುತ್ತದೆಯೇ ಹೊರತು ಆತನಿಗೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಕೊನೆಗೆ ಕೈಚೆಲ್ಲಿ ಕುಳಿತುಬಿಡುತ್ತಾನೆ. ಕಡೆಗೆ,
"ಚೆಲುವೆ, ದಯವಿಟ್ಟು ನನ್ನ ಕ್ಷಮಿಸು. ನನ್ನ ಶಕ್ತಿ ಕುಂದಿಹೋಗಿದೆ. ಏನನ್ನೂ ಮಾಡಲು ಆಗಲಿಲ್ಲ. ಈಗ ಅನಿವಾರ್ಯವಾಗಿ ಪೊಲೀಸರನ್ನು ಕರೆಯಲೇಬೇಕು!"











Click it and Unblock the Notifications