ಲವ್ಲಿ ಲವೀನಾ ಬುದ್ದು ಯತೀಶ ಮತ್ತು ಮೂರು ವರ
ಲವೀನಾ ಮತ್ತು ಆಕೆಯ ಬುದ್ದು, ಐ ಮೀನ್ ಮುದ್ದಿನ ಗಂಡ ಯತೀಶ್ ಹನಿಮೂನಿಗೆಂದು ದೂರದ ಸುಂದರ ಪ್ರದೇಶಕ್ಕೆ ಹೋಗಿದ್ದರು. ಅವರಿದ್ದ ರೆಸಾರ್ಟ್ ಬಳಿ ಒಂದೇ ಒಂದು ಮನೆಯಿತ್ತು. ಅಕ್ಷರಶಃ ತಾವು ಭೂಮಿಯ ಮೇಲೆ ಇಲ್ಲವೇ ಇಲ್ಲ, ಸ್ವರ್ಗದಲ್ಲಿ ಇದ್ದೇವೆ ಎಂಬಂತೆ ಭಾಸವಾಗುತ್ತಿತ್ತು.
ಒಂದು ದಿನ ಅವರಿಬ್ಬರು ಗೋಲ್ಫ್ ಆಟವಾಡುತ್ತಿದ್ದರು. ಯತೀಶ್ ಹೊಡೆದ ಬಾಲು ಹತ್ತಿರದ ಮನೆ ಪ್ರವೇಶಿಸಿ ಏನೋ ಸದ್ದು ಮಾಡಿತು. ಹತ್ತಿರ ಹೋಗಿ ನೋಡಿದಾಗ ಬಾಟಲಿಯೊಂದು ಚೂರುಚೂರಾಗಿತ್ತು ಮತ್ತು ಅದರ ಪಕ್ಕದಲ್ಲಿ ವಿಚಿತ್ರ ವೇಷಧಾರಿಯೊಬ್ಬ ಕುಳಿತಿದ್ದ. ಲವೀನಾ ಮತ್ತು ಯತೀಶ್ ಬರುತ್ತಲೇ ಆ ವೇಷಧಾರಿ ಮಾತಿಗೆ ಶುರುಹಚ್ಚಿಕೊಂಡ.
"ನಾನು ಕುಬೇರನ ವಂಶದವನು. ಯಾವುದೋ ಶಾಪ ತಗುಲಿ ಈ ಬಾಟಲಿಯಲ್ಲಿ ಬಂಧಿತನಾಗಿದ್ದೆ. ಬಾಟಲಿ ಚೂರುಚೂರಾಗಿದ್ದರಿಂದ ನಾನು ಶಾಪವಿಮುಕ್ತನಾಗಿದ್ದೇನೆ. ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಈಗ ನನ್ನ ಬಳಿ ಮೂರು ವರಗಳಿವೆ. ಮೂವರಿಗೂ ಒಂದೊಂದು. ನಿಮಗೇನು ಬೇಕು ನಿಸ್ಸಂಕೋಚವಾಗಿ ಕೇಳಿರಿ" ಎಂದು ವೇಷಧಾರಿ ಹೇಳಿದ.
ಯತೀಶ್ ತಡಮಾಡದೆ "ಓ ಮೈ ಗಾಡ್. ನೀನು ಕುಬೇರನ ವಂಶದವನು ಅಂದೆಯಲ್ಲ? ನನಗೆ ಸಾವಿರಾರು ಕೋಟಿ ರು. ನಗದು ನೀಡು" ಎಂದು ಏದುಸಿರುಬಿಡುತ್ತ ಕೇಳಿದ. ವೇಷಧಾರಿ 'ತಥಾಸ್ತು' ಅಂದ. ನಂತರ ಆತನ ದೃಷ್ಟಿ ಸುಂದರವಾಗಿದ್ದ ಲವೀನಾ ಬಳಿ ಹರಿಯಿತು. ನಿನಗೇನು ಬೇಕು ಎಂದು ಕಣ್ಸನ್ನೆಯಲ್ಲಿ ಹಸನ್ಮುಖಿಯಾಗಿ ಕೇಳಿದ.
ಲವೀನಾ ಕೂಡ ತಡಮಾಡದೆ "ನನಗೆ ಐಷಾರಾಮಿ ಮನೆಗಳಲ್ಲಿ ಇರಬೇಕೆಂದು ಭಾರೀ ಆಸೆ. ಅಂಥ ನೂರು ಮನೆಗಳನ್ನು ನನಗೆ ದಯಪಾಲಿಸು ಕುಬೇರನ ವಂಶದವನೆ" ಎಂದು ಕೇಳಿದಳು. ವೇಷಧಾರಿ ಅದಕ್ಕೂ 'ತಥಾಸ್ತು' ಎಂದು ಹೇಳಿದ. ನಂತರ ಗಂಡ ಹೆಂಡತಿಯರಿಬ್ಬರು ನಿನ್ನ ಆಸೆಯೇನು ಎಂದು ಕೇಳಿದರು.
ವೇಷಧಾರಿ, "ಸಾವಿರಾರು ವರ್ಷಗಳಿಂದ ಬಾಟಲಿಯಲ್ಲಿಯೇ ಕುಳಿತಿದ್ದರಿಂದ ಲೈಂಗಿಕ ಕ್ರಿಯೆಯಿಂದ ಸಂಪೂರ್ಣ ವಂಚಿತನಾಗಿದ್ದೆ. ನಾನು ನಿನ್ನ ಹೆಂಡತಿಯೊಡನೆ ಕೆಲ ಗಂಟೆ ಕಳೆಯಬೇಕು" ಎಂದು ನುಡಿದ. ಸಾಕ್ಷಾತ್ ಭಗವಂತನೇ ಪ್ರತ್ಯಕ್ಷನಾಗಿರುವನು ಎಂಬಂತೆ ಸ್ತಂಭೀಭೂತನಾಗಿ ನಿಂತಿದ್ದ ಯತೀಶ್ 'ಓಕೆ' ಅಂದ.
ಕ್ಷಣಕೂಡ ತಡಮಾಡದೆ ಲವೀನಾಳನ್ನು ಕೋಣೆಯೊಳಗೆ ಕರೆದೊಯ್ದ ವೇಷಧಾರಿ ಮನಸೋಇಚ್ಛೆ ಆಕೆಯೊಂದಿಗೆ ಕಾಮಕೇಳಿ ನಡೆಸಿ, "ನಿನ್ನ ಗಂಡನ ವಯಸ್ಸೆಷ್ಟು?" ಎಂದು ವೇಷಧಾರಿ ಮುದ್ದುಮಾಡುತ್ತ ಲವೀನಾಳನ್ನು ಕೇಳಿದ.
"ಮೂವತ್ತೆರಡು" ಎಂದು ಆಕೆ ಉತ್ತರಿಸಿದಳು, ನಂತರ "ಯಾಕೆ?" ಎಂದು ಮರುಪ್ರಶ್ನಿಸಿದಳು.
"ಇಷ್ಟು ವಯಸ್ಸಾದರೂ ನಾನು ಹೇಳಿದ ಅಡಗೂಲಜ್ಜಿ ಕಥೆಯನ್ನು ನಂಬ್ತಾನಲ್ಲ" ಎಂದು ಕತ್ತಲಲ್ಲಿ ಮರೆಯಾಗಿಬಿಟ್ಟ. ಜ್ಞಾನೋದಯವಾಗಿ ಹೊರಗಡೆಯಿಂದ ಯತೀಶ ಧಬಧಬನೆ ಬಾಗಿಲು ಬಡಿಯುತ್ತಿದ್ದ. [ಲವ್ಲಿ ಲವೀನಾ ಜೋಕ್ಸ್]











Click it and Unblock the Notifications