ಫೋಟೋ ಎನ್‌ಲಾರ್ಜ್ ಮಾಡಿಸಿಟ್ಟುಕೊಳ್ಳುತ್ತೇನೆ!

ಮುಟ್ಟಿದ್ರೆ ಸಾಕು ಕರೆಂಟು ಪಾಸಾಗುವಂಥ ದಂತದ ಮೈಯ ಸುಂದರಿ ಲವೀನಾಳ ಮದುವೆ ಬಾಡಿಬಿಲ್ಡರ್ ಯತೀಶನ ಜೊತೆ ಅದ್ಧೂರಿಯಾಗಿ ನೆರವೇರಿತು. ಮದುವೆಯಾದ ಮರುದಿನವೇ ಮಧುಚಂದ್ರಕ್ಕೆಂದು ಮಧುಮಂಚೂರಿಗೆ ಇಬ್ಬರೂ ಪಯಣ ಬೆಳೆಸಿದ್ದರು. ಕೆಟ್ಟ ಚಳಿ ಬೀಸಿದ್ದರೂ ಬಸ್ಸಲ್ಲಿ ಯತೀಶನ ಪಕ್ಕದಲ್ಲಿ ಕುಳಿತಿದ್ದ ಲವೀನಾ ಮಾತ್ರ ಬಿಸಿಬಿಸಿ ಕುದಿಯುತ್ತಿದ್ದಳು.

ಮಧುಮಂಚೂರಿಗೆ ಹೋಗಿ ಅಲ್ಲಿನ ರೆಸಾರ್ಟಲ್ಲಿ ಇಳಿದು ಸ್ವಲ್ಪ ಫ್ರೆಶ್ಶಾಗಿ ಬರೋಣವೆಂದು ಲವೀನಾ ಸ್ನಾನಗೃಹಕ್ಕೆ ಹೋದಳು. ಇಲ್ಲಿ ಯತೀಶ ಕೈಬಿಸಿ ಮಾಡಿಕೊಳ್ಳುತ್ತಿದ್ದ. ಸುಡುಸುಡು ಬಿಸಿನೀರಿನಲ್ಲಿ ಮೈದೊಳೆದು ಗೌನಿನಲ್ಲಿ ಬಂದ ಲವೀನಾಳನ್ನು ನೋಡಿ ಯತೀಶ್, "ಡಾರ್ಲಿಂಗ್ ನಾವಿಬ್ಬರೂ ಗಂಡ ಹೆಂಡತಿಯರಲ್ವಾ, ನಾಚಿಕೆ ಪಟ್ಕೊಳ್ಳುವ ಅಗತ್ಯವೇ ಇಲ್ಲ" ಎಂದ.

ಇಂಥ ಮಾತಿಗೆ ಕಾಯುತ್ತಿದ್ದವಳಂತೆ ಲವೀನಾ ಮೇಮೈಲಿದ್ದ ಗೌನನ್ನು ಕಿತ್ತು ಬಿಸಾಡಿದಳು. ಆ ಚಳಿಯಲ್ಲಿ ಯತೀಶ ಮತ್ತಷ್ಟು ಗಡಗಡ ನಡುಗಲು ಪ್ರಾರಂಭಿಸಿದ. ಮಾತು ತೊದಲಲು ಪ್ರಾರಂಭಿಸಿತು. ಮೋಡದ ಮರೆಯಲ್ಲಿ ಅವಿತು ಕುಳಿತಿದ್ದ ವರುಣ ಛಕ್ಕನೆ ಲವೀನಾಳ ಫೋಟೋ ತೆಗೆದಿದ್ದ.

ಸಾವರಿಸಿಕೊಂಡ ಯತೀಶ, "ವಾವ್, ಫೋಟೋ ತಗೆಯಲಾ?" ಎಂದು ಕೇಳಿದ.

"ಯಾಕೆ?" ತಲೆಯೊರೆಸಿಕೊಳ್ಳುತ್ತಿದ್ದ ಲವೀನಾ ಅಮಾಯಕಳಂತೆ ಕೇಳಿದಳು.

ಗಡಗಡ ನಡುಗುವ ದನಿಯಲ್ಲೇ, "ಯಾಕಂದ್ರೆ, ನಿನ್ನ ಈ ಅದ್ಭುತವಾದ ದಂತದ ಮೈಯ ಫೋಟೋವನ್ನು ಸದಾಕಾಲ ಬೆಚ್ಚಗೆ ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ" ಎಂದ ಯತೀಶ. ಲವೀನಾ ಓಕೆ ಅಂದ್ಳು. ಇತ್ತ ಯತೀಶ ಫೋಟೋ ತೆಗೆಯುತ್ತಿದ್ದರೆ, ವರುಣ ಮೋಡದ ಮರೆಯಿಂದಲೇ ತನಗೆ ಬೇಕಷ್ಟು ಫೋಟೋಗಳನ್ನು ತಾನೂ ತೆಗೆದುಕೊಳ್ಳುತ್ತಿದ್ದ.

ನಂತರ, ಯತೀಶ ತಾನು ಸ್ನಾನ ಮಾಡಲೆಂದು ಬಾತ್ ರೂಮಿಗೆ ಹೋದ. ಟವಲ್ಲು ಸುತ್ತಿಕೊಂಡು ಹೊರಬಂದಿದ್ದ. ಲವೀನಾ ಕೂಡ, "ಯಾಕೆ ಚಿನ್ನು, ನನಗೆ ಅಷ್ಟೆಲ್ಲಾ ಹೇಳಿ ನೀನು ನಾಚಿಕೊಳ್ತಿದ್ದಿಯಾ? ನಾವಿಬ್ರೂ ಗಂಡ ಹೆಂಡಿರಲ್ವಾ" ಎಂದು ಹುಸಿಮುನಿಸಿನಿಂದ ಹೇಳಿದಳು.

"ಯಸ್ ಯಸ್ ಯು ಆರ್ ರೈಟ್" ಎಂದು ಟವಲ್ಲು ಕಿತ್ತು ಬಿಸಾಕಿದ. ಲವೀನಾ ಮಂಚದ ಮೇಲೆ ಬಿದ್ದಿದ್ದ ಟವಲ್ಲನ್ನು ಫಟಕ್ಕನೆ ಸುತ್ತಿಕೊಂಡಿದ್ದಳು. ಮೋಡದ ಮರೆಯಲ್ಲಿ ಕಾದು ಕುಳಿತಿದ್ದ ವರುಣ ಛಂಗನೆ ಮಾಯವಾಗಿದ್ದ. ಆದರೂ ಸಾವರಿಸಿಕೊಂಡ ಲವೀನಾ, "ನಾನೂ ಒಂದು ಫೋಟೋ ತೆಗೆದುಕೊಳ್ಳಲಾ?" ಎಂದು ಸಂಕೋಚದಿಂದಲೇ ಕೇಳಿದಳು.

"ಯಾಕೆ? ಅದನ್ನು ಏನು ಮಾಡ್ತೀಯಾ?" ಆಕೆಯೂ ಅದೇ ರೀತಿ ಉತ್ತರ ಕೊಡುತ್ತಾಳೆಂದು ಬಯಸಿ ಆತ ಕೇಳಿದ್ದ.

ಲವೀನಾ, "ಹೌದು ಅದನ್ನು ತೆಗೆದುಕೊಂಡು ಎನ್‌ಲಾರ್ಜ್ ಮಾಡಿಸಿಟ್ಟುಕೊಳ್ಳುತ್ತೇನೆ" ಎಂದು ಉತ್ತರಿಸಿದ್ದಳು ಲವೀನಾ. ಪೆದ್ದ ಯತೀಶನಿಗೆ ಅದರ್ಥವಾಗಿರಲೇ ಇಲ್ಲ. [ವಯಸ್ಕರ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+