ಲವೀನಾ ನನ್ನ ಹೆಂಡತಿ ಅಲ್ಲ, ನನ್ನ ಹೆಂಡತಿಯಲ್ಲ!
ಲವೀನಾ ಅಂದು ಸಿಕ್ಕಾಪಟ್ಟೆ ಖುಷಿಯಾಗಿದ್ದಳು. ವಾರದ ಟೂರ್ ಮುಗಿಸಿ ಬಂದ ಗಂಡ ಯತೀಶನನ್ನು ಗಟ್ಟಿಯಾಗಿ ತಬ್ಬಿಕೊಂಡು ನಲಿದಾಡಿಬಿಟ್ಟಳು. ಯಾಕೆಂದು ಕೇಳಲಾಗಿ, ತನ್ನನ್ನು ಅನೇಕ ವರ್ಷಗಳಿಂದ ಕಾಡುತ್ತಿದ್ದ ತಲೆನೋವು ಈಗಿಲ್ಲವೇ ಇಲ್ಲ ಎಂದು ಆನಂದತುಂದಿಲಳಾಗಿ ಉತ್ತರಿಸಿದಳು. ಗಂಡನಿಗೂ ಖುಷಿ. ಈ ಮ್ಯಾಜಿಕ್ ಹೇಗಾಯಿತೆಂದು ಕೇಳಿದ.
ಲವೀನಾ, "ನನ್ನ ಸ್ನೇಹಿತೆ ನನ್ನನ್ನು ಒಬ್ಬ ಹಿಪ್ನಾಟಿಸ್ಟ್ ಬಳಿ ಕರೆದುಕೊಂಡು ಹೋಗಿದ್ದಳು. ಹಿಪ್ನಾಟಿಸ್ಟ್ ನನಗೆ ಕನ್ನಡಿ ಮುಂದೆ ನಿಂತು, 'ನನಗೀಗ ತಲೆನೋವಿಲ್ಲ, ನನಗೀಗ ತಲೆನೋವಿಲ್ಲ, ನನಗೀಗ ತಲೆನೋವಿಲ್ಲ' ಮೂರು ಬಾರಿ ಸತತ ಒಂದು ವಾರಗಳ ಕಾಲ ಹೇಳೆಂದು ಹೇಳಿದ್ದರು. ಒಂದೇ ವಾರದಲ್ಲಿ ತಲೆನೋವು ಮಾಯವಾಗಿದೆ" ಎಂದು ಬಡಬಡನೆ ಹೇಳಿದಳು.
ಗಂಡ ಪ್ರತಿಕ್ರಿಯೆ ನೀಡುವ ಮುನ್ನ ಆತನಿಗೆ ಒರಗಿಕೊಂಡ ಲವೀನಾ, ಆತನನ್ನು ಮುದ್ದು ಮಾಡುತ್ತ, ಎದೆಕೂದಲ ಮೇಲೆ ಬೆರಳಾಡಿಸುತ್ತ, "ಡಾರ್ಲಿಂಗ್, ಇಷ್ಟು ವರ್ಷಗಳಿಂದ ನೋಡುತ್ತಲೇ ಇದ್ದೇನೆ. ಹಾಸಿಗೆಯಲ್ಲಿ ನನಗೆ ಸಂತುಷ್ಟಳಾಗುವಂತೆ ಮಾಡಿಯೇ ಇಲ್ಲ. ನಿಮಗೆ ಗಂಡಸ್ತನ ಇಲ್ಲ ಅಂತ ಹೇಳಲ್ಲ, ಆದರೂ ನೀವೂ ಏಕೆ ಆ ಹಿಪ್ನಾಟಿಸ್ಟ್ ನನ್ನು ಒಂದು ಬಾರಿ ಭೇಟಿಯಾಗಬಾರದು" ಎಂದು ಸಲಹೆ ನೀಡಿದಳು. ಯತೀಶನಿಗೆ ಅವಮಾನವೆನಿಸಿದರೂ ತೋರಗೊಡದೆ ಹಿಪ್ನಾಟಿಸ್ಟ್ ಬಳಿ ಹೋದ.
ಮರಳಿ ಬಂದವನೇ ಲವೀನಾ ಹಾಕಿಕೊಂಡಿದ್ದ ಬಟ್ಟೆಯನ್ನೆಲ್ಲ ಬರಬರನೆ ಎಳೆದುಬಿಸಾಕಿ ನಿರ್ವಾಣ ಸ್ಥಿತಿಗೆ ತಲುಪಿಸಿದ್ದ. ಲವೀನಾಗೆ ಏನಾಗುತ್ತಿದೆ ಎಂದು ಅರಿವಿಗೆ ಬರುವ ಮುನ್ನವೇ ಆಕೆಯನ್ನು ಹೆಗಲಮೇಲೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಹಾಸಿಗೆಯ ಮೇಲೆ ಬಿಸಾಕಿ, 'ಅಲ್ಲೇ ಮಲಗಿರು ಒಂದೇ ನಿಮಿಷದಲ್ಲಿ ಬಂದುಬಿಡುತ್ತೇನೆ' ಎಂದು ಹೇಳಿದವನೆ ಬಚ್ಚಲುಮನೆಗೆ ಓಡಿದ್ದ.
ವಾಪಸ್ ಬಂದವನೇ, ಲವೀನಾ ಜೀವಮಾನದಲ್ಲಿ ಎಂದೂ ಕಂಡಿರದಂಥ ಸುಖವನ್ನು ಹಾಸಿಗೆಯ ಮೇಲೆ ನೀಡಿದ್ದ. ಲವೀನಾಗೆ ಖುಷಿಯಿಂದ ಮಾತೇ ಬರದಂತಾಗಿತ್ತು. ಇನ್ನೇನು ಬಾಯಿಬಿಡಬೇಕೆನ್ನುವಷ್ಟರಲ್ಲಿ, ಮತ್ತೆ ಅದೇ ಡೈಲಾಗು ಹೊಡೆದು ಬಾತ್ ರೂಮಿಗೆ ಓಡಿದ. ಮತ್ತೆ ವಾಪಸ್ ಬಂದವನೇ, ಪೌರುಷವನ್ನೇ ಮೈವೆತ್ತಂತೆ ಮತ್ತಷ್ಟು ವ್ಯಗ್ರನಾಗಿ ಸುಖಿಸಿಬಿಟ್ಟ. ಈ ಬಾರಿ ಲವೀನಾಗೆ ಬಾಯಿಬಿಟ್ಟರೂ ಮಾತು ಬರಲಿಲ್ಲ.
ಕೊನೆಗೂ ಸುಸ್ತಾಗಿ ತಲೆ ಗಿರ್ ಅನ್ನಲು ಪ್ರಾರಂಭಿಸಿದಾಗ ಗಂಡನನ್ನ ತಡೆಹಿಡಿದು ಏನಾಯಿತೆಂದು ಕೈಸನ್ನೆಯ ಮುಖಾಂತರ ಕೇಳಿದಳು ಗರಬಡಿದ ಲವೀನಾ. ಆತ ಸುಸ್ತಾಗಿದ್ದರೂ, ಅಲ್ಲೇ ಮಲಗಿರು ಒಂದು ನಿಮಿಷದಲ್ಲಿ ಬಂದುಬಿಡುತ್ತೇನೆ ಎಂದು ಮತ್ತೆ ಬಾತ್ ರೂಮಿಗೆ ನುಗ್ಗಿದ. ಇದರ ಮರ್ಮ ತಿಳಿದೇಬಿಡಬೇಕೆಂದು ಲವೀನಾ ಬೆತ್ತಲು ಸ್ಥಿತಿಯಲ್ಲಿಯೇ ಗಂಡನನ್ನು ಆತನಿಗೆ ಗೊತ್ತಿಲ್ಲದಂತೆ ಹಿಂಬಾಲಿಸಿದಳು.
ಆತ, "ಲವೀನಾ ನನ್ನ ಹೆಂಡತಿ ಅಲ್ಲ, ಲವೀನಾ ನನ್ನ ಹೆಂಡತಿ ಅಲ್ಲ, ಲವೀನಾ ನನ್ನ ಹೆಂಡತಿ ಅಲ್ಲ" ಎಂದು ತದೇಕಚಿತ್ತನಾಗಿ ಹೇಳುತ್ತಿದ್ದ. ಮುಂದೇನಾಯಿತು? ಆತನ ತಲೆಗೆ ತೀವ್ರ ಪೆಟ್ಟುಬಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. [ಲವೀನಾ ಜೋಕ್ಸ್]












Click it and Unblock the Notifications